Chitradurga news|nammajana.com|03-04-2025
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಸಾರ್ವಜನಿಕ ಆಸ್ಪತ್ರೆ ತನ್ನದೇಯಾದ ವೈಶಿಷ್ಟ್ಯಮಯ ಸೇವೆಯಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಇತ್ತೀಚಿಗಷ್ಟೇ ನ್ಯಾಷನಲ್ ಕ್ವಾಲಿಟಿ ಅಶ್ಯೂರೆನ್ಸ್ ಸ್ಟಾಂಡರ್ಡ್(ಎನ್‌ಕ್ಯೂಎಎಸ್) ವತಿಯಿಂದ (National Award) ನಡೆಸಿದ ರಾಷ್ಟ್ರಮಟ್ಟದ ಮೌಲ್ಯಾಂಕದಲ್ಲಿ ಶೇ.90.88ರಷ್ಟು ಅಂಕಗಳಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ.
ಆಡಳಿತಾಧಿಕಾರಿ ಡಾ.ಜೆ.ಡಿ.ವೆಂಕಟೇಶ್, ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ವರ್ಗ ತಮಗೆ ನೀಡಿದ ಕಾರ್ಯದಲ್ಲಿ ಲೋಪವೆಸಗದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ವಿಭಾಗದಲ್ಲೂ ಆಸ್ಪತ್ರೆ ಮೇಲುಗೈ ಸಾಧಿಸಿದೆ.

ರಾಷ್ಟ್ರಮಟ್ಟದಿಂದ ಪರಿಶೀಲನೆಗೆ ಬಂದ ಅಸೆಸ್ಸರ್ ಮತ್ತು ವೈದ್ಯಾಥಿಕಾರಿಗಳಾದ ಡಿ.ಎಸ್.ಚಕ್ರವರ್ತಿ, (National Award) ಡಾ.ಜಿ.ವಿಶಾಲಿನಿ ಬೇರೆ ರಾಜ್ಯಗಳಿಂದ ನಿಯುಕ್ತಿಗೊಂಡು ಆಗಮಿಸಿ ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನೂ ಹಂತ, ಹಂತವಾಗಿ ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದ್ದರು. ನಂತರ ನಡೆದ ಮೌಲ್ಯಾಂಕದಲ್ಲಿ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಸೇರಿದಂತೆ ಎಲ್ಲರನ್ನೂ ಅಭಿನಂದಿಸಿದ್ಧಾರೆ.
ಇದನ್ನೂ ಓದಿ: Body donation | ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ದೇಹದಾನ
ಈ ಸಂದಭದಲ್ಲಿ ಹಿರಿಯ ವೈದ್ಯರಾದ ಡಾ.ಡಿ.ಆರ್.ಮಂಜಪ್ಪ, ಸತೀಶ್‌ಆದಿಮನಿ, ಜಯಲಕ್ಷ್ಮಿ, ಅಮಿತ್‌ಗುಪ್ತ, ಪ್ರಜ್ವಲ್‌ಧನ್ಯ, ಕೆ.ಶಿವಕುಮಾರ್, ಆಯುಷ್‌ವೆಂಕಟೇಶ್, ಪಂಕಜ, ಕೆ.ಆರ್.ನಾಗರಾಜು, ಮ್ಯಾಟ್ರನ್‌ಮಂಜುಳಾ, (National Award) ಸ್ಟಾಪ್‌ನರ್ಸ್‌ಗಳಾದ ನಿರ್ಮಲ, ನಾಗರತ್ನ, ಸಾವಿತ್ರಿ, ಎನ್.ಎಸ್.ಪೂರ್ಣಿಮಾ, ಸರಸ್ವತಿ, ಓಂಕಾರಪ್ಪ, ಹೊನ್ನಾವತಿ, ಉಮಾ, ಸೌಂದರ್ಯ, ಶಿವಕುಮಾರ್, ಮಹಂತೇಶ್, ರಾಧ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252