
Chitradurga news|nammajana.com|12-05-2025
ನಮ್ಮಜನ.ಕಾಂ, ಚಿತ್ರದುರ್ಗ: ಇನ್ನೋವಾ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಮೂವರು ಸಾವನ್ನಪ್ಪಿರುವ ಘಟನೆ ಹೊಳಲ್ಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿಂದು ಮುಂಜಾನೆ (Chitradurga accident) ನಡೆದಿದೆ.
ಮೃತರನ್ನು ಸುನಿತಾ (34), ಶ್ಯಾಮ್ (29) ಮತ್ತು ಶಿವು (35) ಎಂದು ಗುರುತಿಸಲಾಗಿದೆ.
ಮುಂಜಾನೆ 3 ಗಂಟೆ ವೇಳೆಗೆ ಕಣಿವೆ ಆಂಜನೇಯ ದೇಗುಲ ಬಳಿ ಈ ಅಪಘಾತ ಸಂಭವಿಸಿದೆ. ಕಾರು ಆಂಧ್ರ ಪ್ರದೇಶ ಮೂಲದ್ದಾಗಿದ್ದು, ಚಿತ್ರದುರ್ಗದಿಂದ ಹೊಳಲ್ಕೆರೆ ಕಡೆಗೆ (Chitradurga accident) ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Illegal marijuana | ಗಾಂಜಾ ಮಾರಾಟ ವ್ಯಕ್ತಿಯಿಂದ ಪೋಲಿಸ್ ಮೇಲೆ ಹಲ್ಲೆಗೆ ಯತ್ನ, ಪೋಲಿಸರಿಂದ ವ್ಯಕ್ತಿ ಕಾಲಿಗೆ ಗುಂಡು
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪೊಲಿಸರು ಭೇಟಿ ನೀಡಿ ಪರಿಶೀಲನೆ (Chitradurga accident) ನಡೆಸಿದ್ದಾರೆ. ಕಾರಿನಲ್ಲಿದ್ದ ಮೃತದೇಹಗಳನ್ನು ಹೊರಗೆ ತೆಗೆದು ಹೊಳಲ್ಕೆರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.