Chitradurga news |nammajana.com|13-12-2024
ನಮ್ಮಜನ.ಕಾಂ, ಚಿತ್ರದುರ್ಗ: ಕಡ್ಲೆ ಬಿತ್ತನೆ ಬೀಜ ಮೈ ಮೇಲೆ ಬಿದ್ದು ಸೊಂಟ ಮುರಿದಿದೆ ಎಂದು ರೈತರೊಬ್ಬರು ನೀಡಿದ (Agricultural Officer) ದೂರಿನ ಮೇಲೆ ಕೃಷಿ ಅಧಿಕಾರಿ ಮೇಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್.ಐ.ಆರ್ ರದ್ದುಪಡಿಸುವಂತೆ ಆಗ್ರಹಿಸಿ ಕೃಷಿ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ರಾಘವೇಂದ್ರ ಎನ್ನುವ ರೈತಕಡ್ಲೆ ಬಿತ್ತನೆ ಬೀಜದ ಚೀಲ ಬಿದ್ದಿದೆ ಎಂದು ಕೋಟೆ ಪೊಲೀಸ್ ಠಾಣೆಯಲ್ಲಿ ಸಹಾಯಕ ಕೃಷಿ ಅಧಿಕಾರಿ ಆಶಾ ಅವರ ಮೇಲೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದು ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಭಯ ಪಡುವಂತಾಗಿದೆ ಎಂದು ಕೃಷಿ ಇಲಾಖೆ (Agricultural Officer) ಆದಾಯ ನಿಯೋಗ ನೋವು ತೋಡಿಕೊಂಡಿತು.
ಸಹಾಯಕ ಕೃಷಿ ಅಧಿಕಾರಿ ಮೇಲೆ ದಾಖಲಾಗಿರುವ ಎಫ್ ಐಆರ್ ರದ್ದು ಪಡಿಸುವಂತೆ ಆಗ್ರಹಿಸಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಡೀಸಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿತು.
ಇಲಾಖಾ ಮಾರ್ಗಸೂಚಿ, ನಿಯಮಾನುಸಾರ ದರ-ಕರಾರಿನಲ್ಲಿರುವ ಬೀಜ ಸರಬರಾಜು ಸಂಸ್ಥೆಗಳಿಂದ ಬಿತ್ತನೆಬೀಜಗಳನ್ನು ರೈತಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನುಕರಿಸಿ, ರೈತರ ದಾಖಲಾತಿಗಳನ್ನು ಪರಿಶೀಲಿಸಿ ಕೆ-ಕಿಸಾನ್ ಎಂಐಎಸ್ ತಂತ್ರಾಂಶದ ಮೂಲಕ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.
ಚಿತ್ರದುರ್ಗ ತಾಲೂಕು ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ಕಡಲೆ ಬಿತ್ತನೆ ಬೀಜ ಗಳನ್ನು ವಿತರಿಸುವಾಗ 8-10-2024 ರಂದು, ರಾಘವೇಂದ್ರ ಎನ್ನುವ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ರೈತ ಮದ್ಯಪಾನ ಮಾಡಿ ತೂರಾಡಿಕೊಂಡುಕಡಲೆ ಖರೀದಿಗೆ ಬಂದಿದ್ದ. ಕಚೇರಿಯಲ್ಲಿರುವುದು ಮಹಿಳಾ ಅಧಿಕಾರಿ ಎಂದು ಲೆಕ್ಕಿಸದೆ ದೌರ್ಜನ್ಯ ತೋರಿ ಕಚೇರಿ ಒಳಗೆ ಅನಧಿಕೃತವಾಗಿ ಪ್ರವೇಶಿಸಿ, ತಾವೇ ಕಡಲೆ ಚೀಲಗಳನ್ನು ನೋಡಲು ಹೋಗಿ (Agricultural Officer) ಮೈಮೇಲೆ ಎಳೆದುಕೊಂಡಿರುತ್ತಾರೆ. ನಂತರ ಅಲ್ಲಿಂದ ಬೈಕ್ ನಲ್ಲಿ ನಿರ್ಗಮಿಸಿದ್ದಾರೆ.
ಘಟನೆ ನಡೆದು 60 ದಿನಗಳ ನಂತರ ಎಫ್ ಐಆರ್ ದಾಖಲು
ಘಟನೆ ನಡೆದ 60 ದಿನಗಳ ಬಳಿಕ ರಾಘವೇಂದ್ರ ಅವರು ಕೆಲ ರೈತ ಮುಖಂಡರನ್ನು ಮತ್ತು ಇತರೆ ರೈತರನ್ನು ಗುಂಪು ಮಾಡಿಕೊಂಡು ಚಿತ್ರದುರ್ಗ ಕಸಬಾ ಹೋಬಳಿ, ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಚೀಲ ಬಿದ್ದಿದ್ದಕ್ಕೆ ಸೊಂಟ ಮುರಿದಿದೆ, ಐದು ಲಕ್ಷ ರು. ಪರಿಹಾರ ಕೊಡಿ ಎಂದು ಮಹಿಳಾ ಅಧಿಕಾರಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.
ನಮ್ಮಲ್ಲಿ ತಾವು ಬಿತ್ತನೆ ಬೀಜ ಪಡೆದಿಲ್ಲ. ಘಟನೆ ನಡೆದ ದಿನದಿಂದ ಇಲ್ಲಿಯವರೆಗೆ ನಮ್ಮ ಗಮನಕ್ಕೆ ಏನೂ ತಂದಿಲ್ಲವೆಂದು ಸಹಾಯಕ ಕೃಷಿ ಅಧಿಕಾರಿ ಆಶಾ ವಿನಂತಿಸಿದ್ದಾರೆ. ನಂತರ ರಾಘವೇಂದ್ರ ನಿಮಗೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಮಹಿಳಾ ಅಧಿಕಾರಿಗೆ ಧಮಕಿಹಾಕಿದ್ದಾರೆ. ನಂತರ ಡಿಸೆಂಬರ್ ರಂದು ಚಿತ್ರದುರ್ಗದ ಕೋಟೆಪೋಲೀಸ್ ಠಾಣೆಯಲ್ಲಿ ಕೃಷಿಅಧಿಕಾರಿ ಆಶಾರಾಣಿರವರಮೇಲೆದೂರು ದಾಖಲಿಸಿದ್ದಾರೆ. ಪೂರ್ವಾಪರಪರಿಶೀಲಿಸದೇ (Agricultural Officer) ಠಾಣಾಧಿಕಾರಿಗಳು ಕೃಷಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಿದ್ದಾರೆಂದು ಕೃಷಿಇಲಾಖೆ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿತು.
ಈ ಸಂಬಂಧ ಕೃಷಿ ಅಧಿಕಾರಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದರೂ, ಈವರೆಗೆ ದೂರನ್ನೇ ದಾಖಲಿಸಿರುವುದಿಲ್ಲ. ಸಿಬ್ಬಂದಿ ಕೊರತೆ ಹಾಗೂ ಅತಿಯಾದ ಕೆಲಸದ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಅಧಿಕಾರಿಗಳ ಮೇಲೆ ಹೀಗೆ ಏಕಾಏಕಿ ಎಫ್ಐಆರ್ ದಾಖಲಿಸಿರುವುದು ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ. ಮುಂದೆ ಕರ್ತವ್ಯ ನಿರ್ವಹಿಸಲು ಕಷ್ಟಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಹಾಗಾಗಿ ಎಫ್ ಐಆರ್. (Agricultural Officer) ರದ್ದುಗೊಳಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ವಿನಂತಿಸಲಾಗಿದೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಯಾರಿಗೆ ಶುಭ, ಅಶುಭ ನೋಡಿ
ಕೃಷಿ ಇಲಾಖೆ ಅಧಿಕಾರಿಗಳಾದ ವಿಕಾಸ್, ವೇಣುಗೋಪಾಲ್, ಚಂದ್ರಕುಮಾರ್, ಎನ್.ಸಿ.ಉಮೇಶ್, ಧನರಾಜ್.ಬಿ.ಎನ್, ವೆಂಕಟೇಶ,ಪಾರ್ವತಮ್ಮ, ಆಶಾರಾಣಿ, ಕಿರಣ್ ಕುಮಾರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.