Chitradurga news|Nammajana.com|30-10-2025
ನಮ್ಮಜನ.ಕಾಂ, ಚಿತ್ರದುರ್ಗ: ಆಂಗ್ಲ ಶಿಕ್ಷಣದ ಮೇಲಿನ ವ್ಯಾಮೋಹದಿಂದ ಸರಕಾರಿ ಶಾಲೆಗಳ ಬಗ್ಗೆ ತಾತ್ಸಾರ ತೋರುವ ಪೋಷಕರನ್ನು ಸರಕಾರಿ ಶಾಲೆಗಳತ್ತ ಸೆಳೆದುಶಿಕ್ಷಣ (Chitradurga) ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ರಾಜ್ಯ ಸರಕಾರ ಆರಂಭಿಸಿದ್ದ ಕರ್ನಾಟಕ ಪಬ್ಲಿಕ್ ಶಾಲೆಗಳ ಸಾಲಿಗೆ ಹೊಸದಾಗಿ ಮತ್ತೆ ಆರು ಶಾಲೆಗಳು ಜಿಲ್ಲೆಗೆ ಮಂಜೂರಾಗಿವೆ.

ಪೂರ್ವ ಪ್ರಾಥಮಿಕದಿಂದ ಪಿಯುಸಿವರೆಗೆ ಒಂದೇ (Chitradurga) ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿಕೊಡುವ ಮೂಲಕ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ರಾಜ್ಯ ಸರಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಮಂಜೂರು ಮಾಡಿದ್ದು, ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಒಟ್ಟು ಆರು ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿದ್ದು, ನವಂಬರ್‌ನಿಂದಲೇ ಈ ಶಾಲೆಗಳಿಗೆ ದಾಖಲಾತಿ ಪ್ರಾರಂಭವಾಗಿ, 2026ರ ಶೈಕ್ಷಣಿಕ ವರ್ಷದಿಂದ ಈ ಶಾಲೆಗಳು ಶಿಕ್ಷಣ ನೀಡಲಿವೆ.
ಪ್ರತಿ ಶಾಲೆಗೆ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು. ಶಾಲಾ ಆವರಣಕ್ಕೆ ಅಗತ್ಯಕ್ಕೆ ತಕ್ಕಂತೆ ಕಟ್ಟಡಗಳನ್ನು ನಿರ್ಮಿಸುವುದು, ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೆಪಿಎಸ್ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತದೆ.
ಸರಕಾರಿ ಶಾಲೆಗಳಲ್ಲಿ ಪ್ರತಿ ವರ್ಷ 4 ಲಕ್ಷ ವಿದ್ಯಾರ್ಥಿಗಳ ಪ್ರವೇಶ ಕುಂಠಿತವಾಗುತ್ತಿದೆ. ವಿದ್ಯಾರ್ಥಿಗಳಿಗೆ ಒಂದೇ ಕಡೆ ಶಾಲೆ-ಕಾಲೇಜುಗಳು ಲಭ್ಯವಿಲ್ಲದಿರುವುದೇ ಇದಕ್ಕೆ ಕಾರಣವೆಂದು (Chitradurga) ಅರಿತು ಒಂದೇ ಕಡೆ ಎಲ್ ಕೆಜಿ ಯಿಂದ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ.
ಕೆಪಿಎಸ್ ಶಾಲೆಯಲ್ಲಿ ಕನಿಷ್ಠ 1,200 ಮತ್ತು ಗರಿಷ್ಠ 1,800 ವಿದ್ಯಾರ್ಥಿಗಳು ಇರುವಂತೆ ನೋಡಿಕೊಳ್ಳುವುದೇ ಇದರ ಮುಖ್ಯ ಉದ್ದೇಶ, ಸ್ಥಳೀಯ ಭೌಗೋಳಿಕ ಪ್ರದೇಶ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಆಧಾರದಲ್ಲಿ ಆಗತ್ಯವಿರುವ ಕಡೆ ಹೆಚ್ಚು ಆದ್ಯತೆ ನೀಡಿರುವ ಕಾರಣ ರಾಮನಗರಕ್ಕೆ ಐದು, ಚನ್ನಪಟ್ಟಣಕ್ಕೆ ಮೂರು, ಕನಕಪುರಕ್ಕೆ ಮೂರು ಹಾಗೂ ಮಾಗಡಿಗೆ ಮೂರು ಶಾಲೆ ಮಂಜೂರು ಮಾಡಲಾಗಿದೆ. ಈಗಾಗಲೇ 500ರಿಂದ 600 ಮಕ್ಕಳು ಇರುವ ಕಡೆಯು ಕೆಪಿಎಸ್ ನೀಡಲಾಗಿದೆ. ಪೂರ್ವ ಪ್ರಾಥಮಿಕ ತರಗತಿಗಳಲ್ಲಿ 30ರಷ್ಟಿರುವ ದಾಖಲಾತಿ ಮಿತಿಯನ್ನು 40ಕ್ಕೆ ಹೆಚ್ಚಳ ಮಾಡುವುದರ ಜತೆಗೆ ಪ್ರಾಥಮಿಕ ತರಗತಿಗಳಲ್ಲಿ ಕೂಡ 30 ಮಕ್ಕಳ ಸಂಖ್ಯೆಯನ್ನು ಸೌಕರ್ಯ ಹಾಗೂ ಶಿಕ್ಷಕರ ಲಭ್ಯತೆಯನ್ನು ನೋಡಿ 50ಕ್ಕೆ ಹೆಚ್ಚಳ ಮಾಡುವ ಚಿಂತನೆಯಿದ್ದು ಮೂಲ ಸೌಕರ್ಯ ಸಾಧ್ಯವಾದಲ್ಲಿ 60 ಮಕ್ಕಳವರೆಗೂ ಅನುಮತಿ ಸಿಗಲಿದೆ ಅನಿಸಿಕೆಯಾಗಿದೆ. ಎಂಬುದು ಇಲಾಖಾ ಅಧಿಕಾರಿಗಳ ಅನಿಸಿಕೆಯಾಗಿದೆ.
ಇದನ್ನೂ ಓದಿ: Astrology | ಇಂದಿನ ರಾಶಿ ಭವಿಷ್ಯ | ಯಾವ್ಯಾವ ರಾಶಿಗೆ ಶುಭ ಯೋಗ?
ಚಿತ್ರದುರ್ಗ ಜಿಲ್ಲೆಯ ಕೆಪಿಎಸ್ ಶಾಲೆಗಳ ವಿವರ..
# 1 ಚಳ್ಳಕೆರೆ ತಾಲೂಕು: ಜಿಹೆಚ್ ಪಿಎಸ್ ಮತ್ತು ಜಿಹೆಚ್ ಎಸ್ ರಾಮಜೋಗಿಹಳ್ಳಿ,
# ಸರಕಾರಿ ಹೆಚ್ ಟಿಟಿ ಸರ್ಕಾರಿ ಕಾಲೇಜು
# ಬಿಎಂಜಿಹೆಚ್ಎಸ್ ಚಳ್ಳಕೆರೆ
# 2. ಹಿರಿಯೂರು ತಾಲೂಕು: ಜಿಜೆಸಿ ಶಾಲೆ ಹಿರಿಯೂರು,
# ಜಿಜೆಸಿ ವಿ.ವಿ.ಪುರ ಮತ್ತು ಜಿಹೆಚ್ ಪಿಎಸ್ ವಿವಿ ಪುರ
#ಜೆಹೆಚ್ ಪಿಸ್ ಆಲೂರು, ಜಿಹೆಚ್ಎಸ್ ಆಲೂರು



