ನಮ್ಮಜನ ಸಮಾಚಾರ ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನ್ಯೂಸ್ 18 ವರದಿಗಾರ ಬಿ.ಎಸ್.ವಿನಾಯಕ್ ತೊಡರನಾಳು ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಬ್ಲಿಕ್ ಟಿವಿ ವರದಿಗಾರ ಎಸ್.ಸಿದ್ದರಾಜು ಅಧ್ಯಕ್ಷ ಸ್ಥಾನದಿಂದ ನಾಮಪತ್ರ ಹಿಂಪಡೆದರು.

ಈ ಹಿನ್ನೆಲೆಯಲ್ಲಿ ಬಿ.ಎಸ್. ವಿನಾಯಕ್ ತೊಡರನಾಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದ ಜನಾಶಯ ಪ್ರಭ ಪತ್ರಿಕೆ ಸಂಪಾದಕ ಗೌನಹಳ್ಳಿ ಗೋವಿಂದಪ್ಪ ಅವರ ನಾಮಪತ್ರ ಅಸಿಂಧುವಾಗಿತ್ತು. ಈ ಎಲ್ಲಾ ಕಾರಣಗಳಿಂದ ವಿನಯ್ ಆಯ್ಕೆ ಅವಿರೋಧವಾಗಿದೆ.
ನಾಮಪತ್ರ ಹಿಂಪಡೆದವರು:
ಅಧ್ಯಕ್ಷ ಸ್ಥಾನದಿಂದ ಎಸ್.ಸಿದ್ಧರಾಜು, ಉಪಾಧ್ಯಕ್ಷ ಸ್ಥಾನದಿಂದ ಡಿ.ಕುಮಾರಸ್ವಾಮಿ ನಾಮಪತ್ರ ಹಿಂಪಡೆದಿದ್ದು, ಖಜಾಂಚಿ ಸ್ಥಾನದಲ್ಲಿ ಮುಂದುವರೆದಿದ್ದಾರೆ. ರಾಜ್ಯ ಸಮಿತಿ ಸದಸ್ಯ ಸ್ಥಾನದಿಂದ ಟಿ.ತಿಪ್ಪೇಸ್ವಾಮಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನದಿಂದ ಐಮಂಗಲದ ವಿ.ಮಲ್ಲಿಕಾರ್ಜುನಾಚಾರ್ ಹಾಗೂ ಬಿ.ಆರ್.ನಾಗೇಶ್ ನಾಮಪತ್ರ ಹಿಂಪಡೆದಿದ್ದಾರೆ.
ಚುನಾವಣಾ ಕಣದಲ್ಲಿ ಉಳಿದವರು: (ಮೂರು ಸ್ಥಾನ)
ಉಪಾಧ್ಯಕ್ಷ ಸ್ಥಾನದಲ್ಲಿ ಎಂ.ಎನ್.ಅಹೋಬಲಪತಿ, ಮೊಳಕಾಲ್ಮೂರಿನ ಕೆ.ಕೆಂಚಪ್ಪ, ಹೊಸದುರ್ಗದ ನಾಗತಿಹಳ್ಳಿ ಮಂಜುನಾಥ್, ಸಿ.ಪಿ.ಮಾರುತಿ, ಬಿ.ಟಿ.ರಂಗನಾಥ್ ಕಣದಲ್ಲಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ವಿ.ವೀರೇಶ್, ಟಿ.ತಿಪ್ಪೇಸ್ವಾಮಿ.
ಕಾರ್ಯದರ್ಶಿ ( ಮೂರು ಹುದ್ದೆ)
ಉದಯವಾಣಿ ಜಿಲ್ಲಾ ವರದಿಗಾರ ತಿಪ್ಪೇಸ್ವಾಮಿ ನಾಕೀಕೆರೆ, ಸುಭಾಷ್‌ಚಂದ್ರ, ವಿ.ಚಂದ್ರಪ್ಪ, ನಾಗೇಶ್ ಬಿ.ಆರ್ ಹಾಗೂ ಎಚ್.ತಿಪ್ಪೇಸ್ವಾಮಿ ಕಣದಲ್ಲಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಡಿ.ಕುಮಾರಸ್ವಾಮಿ ಹಾಗೂ ಎಸ್.ಜೆ.ದ್ವಾರಕನಾಥ್ ಸ್ಪರ್ಧೆ ಮಾಡಿದ್ದಾರೆ.
ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ದಿನೇಶ್ ಗೌಡಗೆರೆ, ಸಿ.ರಾಜಶೇಖರ ಹಾಗೂ ಎಸ್.ಸಿದ್ಧರಾಜು ಕಣದಲ್ಲಿ ಉಳಿದಿದ್ದಾರೆ.
ಜಿಲ್ಲಾ ಕಾರ್ಯಕಾರಿಣಿ (15 ಸ್ಥಾನ):
ರವಿ ಮಲ್ಲಾಪುರ, ಸಿ.ಎನ್.ಕುಮಾರ್, ಎಸ್.ಬಿ.ರವಿಕುಮಾರ್, ಟಿ.ಜೆ.ತಿಪ್ಪೇಸ್ವಾಮಿ, ಜಿ.ಒ.ಎನ್.ಮೂರ್ತಿ, ಎಚ್.ಸಿ.ಗಿರೀಶ್, ಎಸ್.ಮಹಾಂತೇಶ್, ಎಸ್.ಟಿ.ನವೀನ್ ಕುಮಾರ್, ಎಚ್.ಟಿ.ಪ್ರಸನ್ನ, ಚೌಳೂರು ಮಂಜುನಾಥ್, ಟಿ.ದರ್ಶನ್, ವರದರಾಜು, ವಿಶ್ವನಾಥ, ಜಡೇಕುಂಟೆ ಮಂಜುನಾಥ, ಎಸ್.ರಾಜಶೇಖರ, ಎಸ್.ಅಮಿತ್, ಕೆ.ಜಿ.ವೀರೇಂದ್ರ ಕುಮಾರ್, ಅರ್ಜುನ್ ಡಿ, ಎಚ್.ಬಸವರಾಜಪ್ಪ, ಗೋಪಾಲ್ ಟಿ, ಡಿ.ಎನ್.ಗೋವಿಂದಪ್ಪ ಹಾಗೂ ಆರ್.ಶಿವರಾಜ್ ಸೇರಿದಂತೆ 22 ಮಂದಿ ಅಖಾಡದಲ್ಲಿದ್ದಾರೆ.



