Chitradurga news|Nammajana.com|1-11-2025
ನಮ್ಮಜನ.ಕಾಂ, ಚಳ್ಳಕೆರೆ: ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯ ಮೌಲ್ಯಹೆಚ್ಚಿಸಿದ ಕೀರ್ತಿ ರಾಜ್ಯಸರ್ಕಾರದ್ದು. ಪ್ರಸ್ತುತ ಸರ್ಕಾರದ ಎಲ್ಲಾ ಸುತ್ತೋಲೆಗಳು ಕನ್ನಡದಲ್ಲೇ ಪ್ರಕಟವಾಗುತ್ತಿವೆ. (Kannada Rajyotsava) ವಿಶೇಷವಾಗಿ ಕನ್ನಡಿಗೆ ಮೇಲೆ ಅಕ್ರಮಣ ಮಾಡುವವರನ್ನು ಸರ್ಕಾರನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಎರಡುಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಎಲ್ಲಾ ಭಾಷೆಗಳನ್ನು ಗೌರವಿಸುತ್ತದೆ. ಇದು ಕನ್ನಡಿಗರ ಹೆಮ್ಮೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾಲ್ಲೂಕು ಆಡಳಿತ ಮತ್ತು ಕನ್ನಡಪರ ಸಂಘಟನೆಗಳು ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲರ ಸಹಕಾರದಿಂದ ಕಳೆದ ಸುಮಾರು ೧೨ ವರ್ಷಗಳಿಂದ ಅಭಿವೃದ್ದಿಪರ ಚಿಂತನೆಗಳು ಹೆಚ್ಚಾಗಿದ್ದು, ಯಾವುದೇ ರೀತಿಯ ಕೊರತೆ ಉಂಟಾಗದಂತೆ ಜಾಗ್ರತೆ ವಹಿಸಿದೆ. ವಿಶೇಷವಾಗಿ ಕ್ಷೇತ್ರದ ನೀರಿನ ಬವಣೆಯನ್ನು ನೀಗಿಸಲು ಈಗಾಗಲೇ ನಾಲ್ಕು ಕಡೆ ಬ್ಯಾರೇಜ್ ಕಂ ಬಿಡ್ಜ್ ನಿರ್ಮಾಣವಾಗಿದ್ದು ಇನ್ನೂ ಗೋಸಿಕೆರೆ, ತೋರೆಬೀರನಹಳ್ಳಿ, ಮತ್ಸಮುದ್ರ ಭಾಗದಲ್ಲಿ ಬ್ಯಾರೇಜ್ ಕಂ ಬಿಡ್ಜ್ ನಿರ್ಮಾಣ ಕಾಮಗಾರಿ ಚಾಲನೆಯಲ್ಲಿದೆ.
ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ತಾಲ್ಲೂಕಿನ ಬಹುತೇಕ ಸರ್ಕಾರಿಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕಪ್ರಯತ್ನ ಮಾಡಲಾಗಿದೆ. ಕನ್ನಡ ಭಾಷೆ ಇನ್ನೂ ಎತ್ತರಕ್ಕೆ ಬೆಳೆಯುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ. ಕನ್ನಡಿಗರ ಮೇಲೆ ಯಾವುದೇ ರೀತಿಯ ವ್ಯತಿರಿಕ್ತಪರಿಣಾಮ ಉಂಟಾದರೆ ಅದನ್ನು ಸೂಕ್ತರೀತಿಯಲ್ಲಿ ನಾವೆಲ್ಲರೂ ಸಂಘಟನಾತ್ಮಕವಾಗಿ (Kannada Rajyotsava) ಎದುರಿಸಬೇಕೆಂದರು. ತಾಲ್ಲೂಕಿನ ರಾಮಜೋಗಿಹಳ್ಳಿ, ನಗರದ ಬಿಎಂಜಿಎಚ್‌ಎಸ್ ಮತ್ತು ಎಚ್‌ಟಿಟಿ ಪ್ರೌಢಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳ ಮಂಜೂರಾತಿ ದೊರಕಿದೆ ಎಂದರು.
ಕನ್ನಡ ಭಾಷೆ ಈ ನೆಲೆದಲ್ಲಿ ಗಟ್ಟಿಯಾಗಿ ನೆಲೆಯೂರಲು ಎಲ್ಲಾ ರೀತಿಯ ಸರ್ವಪ್ರಯತ್ನ ಮಾಡಿ ಕನ್ನಡ ಭಾಷೆಯನ್ನು ಮುಂಚೂಣಿಗೆ ತಂದ ಜ್ಞಾನಪೀಠಪ್ರಶಸ್ತಿ ವಿಜೇತರಾದ ಗೋಕಾಕ್, ಮಾಸ್ತಿ, ಕುವೆಂಪು, ಶಿವರಾಮ್‌ಕಾರಂತ್, ಯು.ಆರ್.ಅನಂತಮೂರ್ತಿ, ಗಿರೀಶ್‌ಕಾರ್ನಡ್, ದ.ರಾ.ಬೇಂದ್ರೆ, ಚಂದ್ರಶೇಖರ್‌ಕಂಬಾರ್ ಇವರ ಸಾರ್ಥಕಸೇವೆಯನ್ನು ಕನ್ನಡ ನಾಡು ಎಂದೂಮರೆಯದು ಎಂದರು.
ದ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ವಾಚನ ಮಾಡಿದ ತಹಶೀಲ್ಧಾರ್ ರೇಹಾನ್‌ಪಾಷ, ಸರ್ಕಾರದ ಆಡಳಿತಭಾಷೆಯಾಗಿ ಕನ್ನಡ ಹೊರಹೊಮ್ಮಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರೀಕರಿನಿಗೂ ಅನುಕೂಲವಾಗುವಂತೆ ಎಲ್ಲಾ ಆಡಳಿತ ಕನ್ನಡಭಾಷೆಯಲ್ಲೇ ನಡೆಯುತ್ತಿದೆ.
ಆಡಳಿತದಲ್ಲಿ ಕನ್ನಡಭಾಷೆಯ ಜಾರಿಮಾಡಿದ ಫಲವಾಗಿ ಸಾರ್ವಜನಿಕರಿಗೆ ಸುಲಭವಾಗಿ ಕಚೇರಿಯ ಕಾರ್ಯಕಲಾಪಗಳು ಸುಗಮವಾಗಿ ನಡೆಯುತ್ತವೆ. ತಾಲ್ಲೂಕು ಕಚೇರಿಯೂ ಸೇರಿದಂತೆ ಎಲ್ಲಾ ಕಚೇರಿಗಳಲ್ಲೂ ಕನ್ನಡ ಭಾಷೆಯಮೂಲಕ ಆಡಳಿತ ನಡೆಸುತ್ತಿದ್ದು ಇದು ನಾಡಿನ ಜನರಿಗೆ ತೃಪ್ತಿ ತಂದಿದೆ ಎಂದರು.
ಸರ್ಕಾರಿನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಟಿ.ವೀರೇಶ್ ಮಾತನಾಡಿ, ಕನ್ನಡ ನಮ್ಮಹೆಮ್ಮೆಯ ಭಾಷೆ. ನಾವು ಸದಾಕಾಲ ಕನ್ನಡಿಗರು ಎಂಬ ಅಭಿಮಾನ ನಮ್ಮಲ್ಲಿರಬೇಕು. ಎಂತಹ ಸಂದರ್ಭದಲ್ಲಾದರೂ ಭಾಷೆಯ ಮೇಲೆನಡೆಯುವ (Kannada Rajyotsava) ದೌರ್ಜನ್ಯವನ್ನು ವಿರೋಧಿಸುವ ಪ್ರವೃತ್ತಿಬೆಳೆಸಿಕೊಳ್ಳಬೇಕೆಂದರು.
ವಿ.ತಿಪ್ಪೇಸ್ವಾಮಿ, ಪಿ.ಓಬಣ್ಣ, ಪಿ.ರಾಜಣ್ಣ, ಎಸ್.ಸಾತ್ವಿಕ್, ಎಸ್.ಟಿ.ಮಂಜಣ್ಣನಾಯಕ, ಕೋಲಾಟದ ನರಸಜ್ಜ, ಕುಸುಮ, ಅನಿಲ್, ಕೆಂಚವೀರನಹಳ್ಳಿಮಲ್ಲೇಶ್, ಡಾ.ನಂದಿನಿಲಾವಣ್ಯ, ಶಿಕ್ಷಣ ಇಲಾಖೆ ಮಾರುತಿಭಂಡಾರಿ, ಚಂದನ, ಡಿ.ವೀರೇಶ್‌ರವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಇಂದಿನ ರಾಶಿ ಭವಿಷ್ಯ | 1-11-2025 | Dina Bhavishya
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ, ಉಪಾಧ್ಯಕ್ಷೆ ಕವಿತಾವೀರೇಶ್, ಸದಸ್ಯರಾದ ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ಸಿ.ಶ್ರೀನಿವಾಸ್, ಕೆ.ವೀರಭದ್ರಪ್ಪ, ಎಸ್.ಜಯಣ್ಣ, ವೆಂಕಟೇಶ್, ಸುಮ, ಕವಿತಾ, ನಿರ್ಮಲ, ತಿಪ್ಪಮ್ಮ, ವೈ.ಪ್ರಕಾಶ್, ಚಳ್ಳಕೆರೆಯಪ್ಪ, ಸುಮಕ್ಕ, ನಾಗಮಣಿ, ಪಾಲಮ್ಮ ನಾಮಿನಿ ಸದಸ್ಯರಾದ ಕೆ.ನಟರಾಜು, ಅನ್ವರ್‌ಮಾಸ್ಟರ್, ವೀರಭದ್ರಿ, ಇಒ ಎಚ್.ಶಶಿಧರ, ಡಿವೈಎಸ್ಪಿ ಸತ್ಯನಾರಾಯಣರಾವ್, ವೃತ್ತ ನಿರೀಕ್ಷಕ ಕೆ.ಕುಮಾರ್, ಹನುಮಂತಪ್ಪಶಿರೇಹಳ್ಳಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ ಬಿಸಿಎಂ ಅಧಿಕಾರಿ ರಮೇಶ್, ಎಸ್ಟಿ ಅಧಿಕಾರಿ ಶಿವರಾಜು, ಬಿಇಒ ಕೆ.ಎಸ್.ಸುರೇಶ್, ಪೌರಾಯುಕ್ತ ಜಗರೆಡ್ಡಿ, ಕಂದಾಯಾಧಿಕಾರಿ ಆರ್.ತಿಪ್ಪೇಸ್ವಾಮಿ, ಡಿ.ಶ್ರೀನಿವಾಸ್ ಮುಂತಾದವರು ಪಾಲ್ಗೊಂಡಿದ್ದರು.



