Chitradurga news|Nammajana.com|31-10-2025
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು.ಪಿ ಅವರು ನಡೆಸಿದ ಸಂವಾದ (P. Raghu) ಕಾರ್ಯಕ್ರಮದಲ್ಲಿ ಪೌರ ಹಾಗೂ ಸ್ವಚ್ಛತಾ ಕಾರ್ಮಿಕ ಸಂಕಷ್ಟಗಳ ಅನಾವರಣಗೊಂಡಿತು.

ನೌಕರಿ ಖಾಯಂಗೊಳಿಸುವಿಕೆ, ಕನಿಷ್ಠ ವೇತನ, ಇ.ಎಸ್.ಐ, ಪಿ.ಎಫ್. ಕಟಾವಣೆ, ವಾರ್ಷಿಕ ವೇತನ ಬಡ್ತಿ, ವಿಶೇಷ ಭತ್ಯೆ, (P. Raghu) ಸಮವಸ್ತç, ಸುರಕ್ಷಾ ಸಾಧನಗಳು, ಉಪಹಾರ, ವೈದ್ಯಕೀಯ ತಪಾಸಣೆ, ನಿವೇಶನ ಮಂಜೂರಾತಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಆಯೋಗದ ಅಧ್ಯಕ್ಷ ಪಿ.ರಘು ಅವರಲ್ಲಿ ಪೌರ ಕಾರ್ಮಿಕರು ತಮ್ಮ ಅಳಲು ತೊಡಿಕೊಂಡರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧ್ಯಕ್ಷ ಪಿ. ರಘು ಅವರು, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಕುರಿತು ಅವರಿಂದಲೇ ಮಾಹಿತಿ ಪಡೆಯುವ ಸಲುವಾಗಿ ಸಂವಾದ ಏರ್ಪಡಿಸಲಾಗಿದ್ದು, ಇಲ್ಲಿ ಮಂಡಿಸಲಾಗುವ ಸಮಸ್ಯೆಗಳು, ಅಹವಾಲುಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಹೇಳಿದರು.
ನಿವೇಶನ ಮಂಜೂರಾತಿಗೆ ಕೋರಿಕೆ:
ಪೌರ ಕಾರ್ಮಿಕರಿಗೆ ನಿವೇಶನಗಳನ್ನು ಮಂಜೂರು ಮಾಡಿಲ್ಲ, 700 ಜನರಿಗೆ ಓರ್ವ ಪೌರ ಕಾರ್ಮಿಕರನ್ನು ನೇಮಕ ಮಾಡಬೇಕು ಎಂಬ ನಿಯಮವಿದೆ, ಹೀಗಾಗಿ ಚಿತ್ರದುರ್ಗ ನಗರಸಭೆಗೆ 350 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ ಕೇವಲ 162 ಪೌರ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ನೇಮಕಾತಿ ಮಾಡಬೇಕು. ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ 4 ಪ್ರಕರಣಗಳು ದಾಖಲು ಆಗಿವೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ದುರಗೇಶಪ್ಪ ಅಧ್ಯಕ್ಷರಲ್ಲಿ ಕೋರಿದರು.
ಗೋಣಿ ಚೀಲದಲ್ಲಿ ತುಂಬಿ ಉಪಹಾರ ವಿತರಣೆ ಆರೋಪ:
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪೌರಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ಸ್ವಚ್ಛವಿರದ ಗೋಣಿ ಚೀಲದಲ್ಲಿ ತುಂಬಿ ತಂದು ನೀಡುತ್ತಾರೆ. ಈ ಕುರಿತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ, ಆದರೂ ಸಂಬಂಧಪಟ್ಟ ಅಧಿಕಾರಿಯ ಮೇಲೆ ಕ್ರಮ (P. Raghu) ಕೈಗೊಂಡಿಲ್ಲ. ಚಿತ್ರದುರ್ಗ ನಗರದಲ್ಲಿ ಮುಂಜಾನೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕ ಮಹಿಳೆಯ ಮೇಲೆ ಆಟೋಚಾಲಕ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ.
ಇಂತಹ ಘಟನೆಗಳು ಮರುಕಳಿಸದಂತೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮ್ಯಾನ್ಯುಯಲ್ ಸ್ಕಾö್ಯವೆಂಜಿAಗ್ ಪುರ್ನವಸತಿ ಸಮಿತಿ ಸದಸ್ಯ ಮಂಜಣ್ಣ ಆಗ್ರಹಿಸಿದರು.
ಮ್ಯಾನ್ಯುಯಲ್ ಸ್ಕಾ÷್ವವೆಂಜಿAಗ್ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಮ್ಯಾನ್ಯುಯಲ್ ಸ್ಕಾ÷್ವವೆಂಜಿಂಗ್ ಕಾರ್ಮಿಕರು ಇಲ್ಲಾ ಎಂದು ವರದಿ ನೀಡಲಾಗಿದೆ. ಆದರೆ ನಗರಸಭೆ ಹೊರತು ಪಡಿಸಿ, ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಸಕ್ಕಿಂಗ್ ಮಿಷನ್‌ಗಳು ಇಲ್ಲ. ಜಿಲ್ಲೆಯಲ್ಲಿ ಕೈಯಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವವರು ಇದ್ದಾರೆ.
ಈ ಬಗ್ಗೆ ಅಧಿಕಾರಿಗಳು ನಿಖರ ಮಾಹಿತಿ ನೀಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿ ಪೌರ ಕಾರ್ಮಿಕರಿಗೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅಧ್ಯಕ್ಷರಲ್ಲಿ ಮಂಜಣ್ಣ ಕೋರಿದರು.
5 ವರ್ಷಗಳಿಂದ ಸಮವಸ್ತ್ರ ನೀಡಿಲ್ಲ:
ಚಿತ್ರದುರ್ಗ ನಗರಸಭೆಯಲ್ಲಿ 5 ವರ್ಷಗಳಿಂದ ಪೌರಕಾರ್ಮಿರಿಗೆ ಸಮವಸ್ತçಗಳನ್ನು ನೀಡಿಲ್ಲ. ಸುರಕ್ಷಾ ಪರಿಕರಗಳನ್ನು ಸಹ ಸಮರ್ಪಕವಾಗಿ ಕೊಡುವುದಿಲ್ಲ. ಸಭೆಗೆ ನಮ್ಮ ಹಣದಿಂದ ಕೊಂಡ ಸಮವಸ್ತç ಧರಿಸಿ ಬಂದಿದ್ದೇವೆ. ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ ವರದಿಗಳನ್ನು ನೀಡುತ್ತಿಲ್ಲ. ಅಗತ್ಯ ಇರುವಷ್ಟು ಔಷಧಿಗಳನ್ನು ಕೊಡುವುದಿಲ್ಲ, ಎಂದು ಆರೋಪಿಸಿದ ಪೌರಕಾರ್ಮಿಕರು, ಸದ್ಯ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತಿದೆ.
ಆದರೆ ಜನಜಂಗುಳಿಯ ನಡುವೆ ಪೌರ ಕಾರ್ಮಿಕರು ಅಗತ್ಯ ಇರುವ ಎಲ್ಲಾ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತದೆ, ಹೀಗಾಗಿ ವರ್ಷದ 365 ದಿನವೂ ಆಸ್ಪತ್ರೆಗೆ ತೆರಳಿ ಉಚಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಅನುವಾಗುವಂತೆ ಆರೋಗ್ಯ ಕಾರ್ಡು ನೀಡಬೇಕು ಎಂದು ಪೌರಕಾರ್ಮಿಕರಾದ ರಾಜಪ್ಪ, ತನ್ವೀರ್ ಪಾಷ, ಕಾಮಾಕ್ಷೀ ಮನವಿ ಮಾಡಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು.
ಇದನ್ನೂ ಓದಿ: ಪೌರ ಕಾರ್ಮಿಕರ ಸಮಸ್ಯೆಗಳು ಕೇಳಿ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ ಆಯೋಗದ ಅಧ್ಯಕ್ಷ ಪಿ.ರಘು | Cleaning worker
ಪರಿಹಾರ ಧನ ಪಾವತಿಸಲು ಬೇಡಿಕೆ:
ಚಿತ್ರದುರ್ಗ ನಗರಸಭೆಯಲ್ಲಿ ನೇರ ಪಾವತಿಯಡಿ ಕೆಲಸ ಮಾಡುತ್ತಿದ್ದ 3 ಸಫಾಯಿ ಕರ್ಮಚಾರಿಗಳು ಮರಣ ಹೊಂದಿದ್ದಾರೆ. ಅವರಿಗೆ ಪರಿಹಾರ ಧನ ನೀಡುವುದು ಬಾಕಿಯಿದೆ. ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕ ನವೀನ್ ಕುಮಾರ್ ಅಧ್ಯಕ್ಷರಲ್ಲಿ ಕೋರಿಕೊಂಡರು.
ನೇಮಕಾತಿ ಆದೇಶ ನೀಡಿ:
1994-95 ರಿಂದ ಚಳ್ಳಕೆರೆ ನಗರಸಭೆಯಲ್ಲಿ ನೇರಪಾವತಿಯಡಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೂ ಖಾಯಂಗೊಳಿಸಿಲ್ಲ. ನಿವೇಶನ ಕೂಡ ನೀಡಿಲ್ಲ. ಕೇವಲ ಮರ‍್ನಾಲ್ಕು ವರ್ಷ ಸೇವೆ ಇದೆ. ಖಾಯಂ ಆಗದಿದ್ದರೆ ಹೆಂಡತಿ ಮಕ್ಕಳು ಬೀದಿಗೆ ಬೀಳುತ್ತಾರೆ. ದಯಮಾಡಿ ಖಾಯಂಗೊಳಿಸಿ ನೇಮಕಾತಿ ಆದೇಶ ನೀಡುವಂತೆ ಚಳ್ಳಕೆರೆ ಜಯಣ್ಣ ಕೇಳಿಕೊಂಡರು. ಅದೇ ರೀತಿ ಪೌರಕಾರ್ಮಿಕ ಜಗನ್ನಾಥ್ ಕೂಡ, ತಮ್ಮ ವೇತನದಲ್ಲಿ ಪಿ.ಎಫ್. ಐ.ಎಸ್.ಐ ಕಟಾವಣೆ ಮಾಡಿದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ. ತಿಂಗಳ ವೇತನ ಪ್ರಮಾಣ ಪತ್ರ ಕೇಳಿದರೂ ನೀಡುತ್ತಿಲ್ಲ. ತಿಂಗಳ 5 ತಾರೀಖಿನ ಒಳಗೆ ವೇತನ ಪಾವತಿಯಾಗುತ್ತಿಲ್ಲ ಎಂದು ಅವಹಾಲು ಹೇಳಿಕೊಂಡರು.
ನಿವೇಶನದ ಮಂಜೂರಾತಿ ಭರವಸೆ:
ಜಿಲ್ಲೆಯ ಎಲ್ಲಾ ಪೌರಕಾರ್ಮಿಕರಿಗೆ ನಿವೇಶನ ಮಂಜೂರಾತಿ ಮಾಡುವುದು ನನ್ನ ಪ್ರಥಮ ಆಧ್ಯತೆಯಾಗಿದೆ. ಈಗಾಗಲೇ ಖಾಯಂಗೊಂಡ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪೌರ ಕಾರ್ಮಿಕರು ಸಂವಾದಲ್ಲಿ ಹೇಳಿಕೊಂಡ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಮುಕ್ತಿ ಹಾಡುವುದಾಗಿ ರಾಜ್ಯ ಸಫಾಯಿ ಕರ್ಮಚಾರಿ ಆಯೊಗದ ಅಧ್ಯಕ್ಷ ರಘು.ಪಿ ಭರವಸೆ ನೀಡಿದರು.
ಈ ವೇಳೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಮಹಾದೇವ ಸ್ವಾಮಿ, ಸಿಇಓ ಡಾ. ಆಕಾಶ್.ಸಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಸೇರಿದಂತೆ ಮತ್ತಿತರರು ಇದ್ದರು.



