Chitradurga News | Nammajana.com | 6-5-2024
ನಮ್ಮಜನ.ಕಾಂ.ಹಿರಿಯೂರು : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಿರಿಯೂರು ನಗರದ ಗೋಪಿ ಬಡಾವಣೆಯಲ್ಲಿ ಮೇ 5 ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಮನೆಯ ದರೋಡೆ ನಡೆಸಿರುವ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ ಆಭರಣ ದೋಚಿದ್ದಾರೆ.

ನಗರದ ನಾಗಾರ್ಜುನ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು ಮಕ್ಕಳ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಆಂಧ್ರ ಪದೇಶದ ಗುಂತ್ ಕಲ್ ಗೆ ತೆರಳಿದ್ದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಇವತ್ತು ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ
ಈ ಸಮಯದಲ್ಲಿ ವಂಚು ಹಾಕಿದ್ದ ಕಳ್ಳರು ಮನೆಯ ಇಂಟರ್ ಲಾಕ್ ಒಡೆದು ಹಾಕಿ ಮನೆಯ ಬೀರು ನಲ್ಲಿದ್ದ ಸುಮಾರು 9 ಲಕ್ಷ ಮೌಲ್ಯದ ಚಿನ್ನ , ಹಣ ದೋಚಿದ್ದು ಘಟನ ಸ್ಥಳಕ್ಕೆ ಹಿರಿಯೂರು ನಗರ ಪೋಲಿಸ್ ತಂಡ ಭೇಟಿ ನೀಡಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನು ಹಿಡಿಯಲು ಹುಟುಕಾಟ ಆರಂಭಿಸಿದ್ದಾರೆ.
