Chitradurga News|Nammajana.com |06-07-2025
ನಮ್ಮಜನ.ಕಾಂ, ಚಿತ್ರದುರ್ಗ: ಕೃಷಿಕರ ಬದುಕಿನಲ್ಲಿ ಹೊಂಗನಸು ಹಾಸಿಕೊಂಡವರಿಗೆ ಆಸರೆಯಾಗಿ ದೂರದ ಹರಿಹರ ಸಮೀಪದ ತುಂಗಭದ್ರೆ(Tungabhadra) ನದಿಯಿಂದ ಧುಮ್ಮಿಕ್ಕಿ ಬಂದ ನೀರಿನ ಖುಷಿಗೆ ರೈತ ಸಂತಸಗೊಂಡಿದ್ದಾನೆ.
ಇದನ್ನೂ ಓದಿ: ಆಡಳಿತ ನ್ಯಾಯಾಧೀಕರಣ ತರಬೇತಿ | ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಯಾಕೋ ಈ ಬಾರಿಯ ಮುಂಗಾರು ಅಷ್ಟಾಗಿ ಸಂತಸತಾರದೇ ಇದ್ದರೂ, ಇದೀಗ ಭರಮಸಾಗರ ಕೆರೆಯನ್ನು ಕೇಂದ್ರವನ್ನಾಗಿಟ್ಟುಕೊಂಡು 42 ಕೆರೆಗಳನ್ನು ತುಂಬಿಸುವ ಮಹತ್ಕಾರ್ಯಕ್ಕೆ ಈ ಮುಂಗಾರುಸಂದರ್ಭದಲ್ಲಿ ಚಾಲನೆನೀಡಲಾಗಿದೆ. 56 5. ದಾಪುಗಾಲಿಟ್ಟು ಬರುತ್ತಿರುವ ತುಂಗಭದ್ರೆ ಭರಮಸಾಗರದ ಐತಿಹಾಸಿಕ ಭರಮಣ್ಣನಾಯಕನ ಕೆರೆಯ ಒಡಲು ತುಂಬುತ್ತಿರುವ ದೃಶ್ಯ ಕಣ್ಣನ ಸೆಳೆಯುವಂತಾಗಿದೆ.
ಗಾಜನೂರು ಸಮೀಪದ ತುಂಗೆ, ಲಕ್ಕವಳ್ಳಿಯ ಸಮೀಪದ ಭದ್ರೆಯ ಒಡಲಿನಿಂದ ಬರುವ ನೀರು ಮುಂದೆ ತುಂಗಭದ್ರೆ(Tungabhadra)ಯಾಗಿ ರೂಪುಗೊಂಡು ಮುಂದೆ ಹರಿಯುತ್ತಿದ್ದ ನೀರನ್ನು ಸಂಪದ್ಭರಿತವಾಗಿ ತಮ್ಮ ದೂರದೃಷ್ಟಿಯಿಂದ ಯೋಜನೆಯನ್ನು ರೂಪಿಸಿ ಅದು ಸಾಕಾರಗೊಳ್ಳುವಂತೆ ಮಾಡಿದವರು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ. ಪರಿಣಾಮವಾಗಿ ಸಿದ್ಧವಾದ 565 ಕೋಟಿ ರು. ಯೋಜನೆಗೆ ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹಾಕಿ ಅದನ್ನು ಕಾರ್ಯಗತ ಮಾಡಿದ ಕೀರ್ತಿ ಶ್ರೀಗಳವರಿಗೆ ಸಲ್ಲುತ್ತದೆ.
ರೂಪಿಸಲು
ಭರಮಸಾಗರದ ಭರಮಣ್ಣ ನಾಯಕನ ಕೆರೆ 1000 ಎಕರೆ ವಿಸ್ತೀರ್ಣವಿದ್ದು, ಅಲ್ಲಿಗೆ ನೀರನ್ನು ತಂದು ಕೇಂದ್ರೀಕರಿಸಿ ಅಲ್ಲಿಂದ ಮುಂದೆ ವಿವಿಧ ಕವಲುಗಳಾಗಿ 4 ಮಾರ್ಗದಲ್ಲಿ ಹರಿದು 42 ಕೆರೆಗಳ ಒಡಲು ತುಂಬಿಸುತ್ತದೆ. ಇಂತಹ ಬೃಹದಾಕಾರದ ನೀರಾವರಿ ಯೋಜನೆಯನ್ನು ಕಾರ್ಯಗತಗೊಳಿಸಲು ಬಳಸಿಕೊಂಡ ಅವಧಿ ಕೇವಲ ! ವರ್ಷ ಎಂಬುದೊಂದು ವಿಸ್ಮಯದ ಸಂಗತಿಯೇ. 2023ರ ಸೆ.23 ರಂದು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಶ್ರದ್ದಾಂಜಲಿ ಸಂದರ್ಭಕ್ಕೆ ಸರಿಯಾಗಿ ಮೊದಲ ಬಾರಿಗೆ ನೀರು ಹರಿದು ಬಂದಾಗ ಆಕಾಶದೆತ್ತರಕ್ಕೆ ಕುಣಿದಾಡಿದ ಕೃಷಿಕರು ಈಗ ನೆಮ್ಮದಿಗೆ ಕೃಷಿಗೆ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಗರಸಭೆ | ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಈ ಹಂಗಾಮಿನಲ್ಲಿ ಹರಿಹರದ ನದಿ ತೀರದಲ್ಲಿನ ಎರಡುಮೋಟಾರ್‌ಗಳನ್ನುಚಾಲುಗೊಳಿಸಲಾಗಿದೆ. ಭರಮಸಾಗರದಿಂದ 42 ಕೆರೆಗಳಿಗೆ ಹರಿಯುವ ನೀರಿನ ಮಾರ್ಗಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಅಗತ್ಯಕ್ಕೆ ತಕ್ಕ ಮೋಟಾರು ಚಾಲುಗೊಳಿಸಿ ಆ ಕಾರ್ಯ ಮುಗಿಸಲಾಗಿದೆ.
ಕರ್ನಾಟಕ ನೀರಾವರಿ ನಿಗಮದ ಸಹಾಯಕ ಅಭಿಯಂತಕ ಮನೋಜ್ ಕುಮಾರ್ ಏತ ನೀರಾವರಿ ಯೋಜನೆಯ ಎಲ್ಲಾ ಕೆರೆಗಳಿಗೆ ಭೇಡಿ ನೀಡಿ ನೀರು ಹರಿಯುವುದನ್ನು ಖಾತ್ರಿ ಮಾಡಿಕೊಂಡಿದ್ದಾರೆ.
ಖಾಲಿಯಾಗದ ಕೆರೆಗಳು:
ಕಳೆದ ವರ್ಷ ಸಂತೃಪ್ತವಾದ ಮಳೆ ಹಾಗೂ ಏತ ನೀರಾವರಿ ನೀರು ಸೇರಿ ಬಹುತೇಕ ಕೆರೆಗಳು ತುಂಬಿಕೋಡಿ ಹರಿದಿದ್ದವು. ಈಗಲೂ ಬಹುತೇಕ ಕೆರೆಗಳಿಗೆ ನೀರು ಆಶಾದಾಯಕವಾಗಿಯೇ ಸಂಗ್ರಹವಾಗಿದೆ. ಈ ಹಂಗಾಮಿಗೆ ಮೋಟಾರ್‌ಗಳನ್ನು ಚಾಲು ಮಾಡಿರುವುದರಿಂದ ಈಗಾಗಲೇ ಬಹುತೇಕ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಇದು ಕೃಷಿಕರ ಸಂತಸಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೀದಿನಾಟಕ, ಜಾನಪದ ಸಂಗೀತ | ಕಲಾ ತಂಡಗಳಿಂದ ಅರ್ಜಿ ಆಹ್ವಾನ
ಈ ಬಾರಿ ಆದಷ್ಟು ಕಡಿಮೆ ಅವಧಿಯಲ್ಲಿಯೇ ಕೆರೆಗಳು ತುಂಬಿಹೋಗುವ ಭರವಸೆ ಕೃಷಿಕರಿಗೆ ಮೂಡಿದೆ.ಕೆರೆಗಳಲ್ಲಿ ನೀರುಸಂಗ್ರಹವಾಗುತ್ತಿದ್ದಂತೆ ಈ ಪ್ರದೇಶದಲ್ಲಿನ ಅಂತರಜಲ ಮಟ್ಟ ನಿರೀಕ್ಷೆ ಮೀರಿಸುಧಾರಿಸಿದೆ.ಬೇಸಿಗೆಯಲ್ಲಿ ಉಂಟಾಗುತ್ತಿದ್ದ ಕುಡಿಯುವ ನೀರಿನ ತೊಂದರೆಯಿಂದಲೂ ಜನರು ಬಚಾವ್ ಆಗಿದ್ದಾರೆ.
ಅಡಕೆ ವಿಸ್ತರಣೆ:
ಭರಮಸಾಗರ(bharamasagara) ಕೆರೆಗೆ ನೀರು ಬಂದಿದ್ದೇ ಭಾಗವನ್ನು ಕೇಂದ್ರವನ್ನಾಗಿಟ್ಟುಕೊಂಡು ಅಡಕೆ ಬೆಳೆಯುವ ಪ್ರದೇಶದ ವಿಸ್ತೀರ್ಣ ಗಮನಾರ್ಹವಾಗಿ ಏರಿಕೆ ಕಂಡಿದೆ. ಈ ಮುಂಗಾರಿನಲ್ಲಿ ಮೆಕ್ಕೆಜೋಳ ಬಿತ್ತನೆಯ ಪ್ರಮಾಣ ಕಡಿಮೆಯಾಗಿರುವುದು ಸಹ ವಿಶೇಷವಾಗಿದೆ. ಎಲ್ಲೆಂದರಲ್ಲಿ ಅಡಿಕೆಯ ಕೃಷಿ ಆಗಿದೆ. ಚಿಕ್ಕಪುಟ್ಟ ವಿಸ್ತೀರ್ಣದ ಜಮೀನುಗಳಲ್ಲಿ ಕೊಳವೆ ಬಾವಿ, ಮೋಟಾರು, ವಿದ್ಯುತ್ ಪರಿವರ್ತಕಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಪರಿಣಾಮವಾಗಿ ಅಡಿಕೆ ಸಸಿ ಸಾಕಿದವರಿಗೂ ಈ ಬಾರಿ ಬಂಪರ್ ಹಣ ಸಿಕ್ಕಂತಾಗಿದೆ.
ಭರಮಸಾಗರ ಕೆರೆಗೆ ನೀರು ಬಂದ ಮೇಲೆ ಈ ಭಾಗದ ಮಲೆನಾಡಿನಂತೆ ಅಭಿವೃದ್ಧಿಯಾಗುತ್ತಿರುವುದು ನಮಗೆ ಸಂತೋಷ ತಂದಿದೆ. ಕೃಷಿಕರು ಪೈಪೋಟಿ ಬಿದ್ದವರಂತೆ ತೋಟದ ಬೆಳೆಗಳತ್ತ ಗಮನ ಕೊಟ್ಟು ತಮ್ಮ ಆರ್ಥಿಕ ಅಭಿವೃದ್ಧಿಗೆ ಮುಂದಾಗಿದ್ದಾರೆ.
ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ
ಇದನ್ನೂ ಓದಿ: Development work | ಚಿಕ್ಕಗೊಂಡನಹಳ್ಳಿಯಲ್ಲಿ ಮೂರು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕ ಟಿ.ರಘುಮೂರ್ತಿ ಚಾಲನೆ
ಈ ಬಾರಿ 42 ಕೆರೆಗಳನ್ನು ತುಂಬಿಸಲು ಇಲಾಖೆಯು ಮುಂದಾಗಿದೆ. ಹರಿಹರ ನದಿ ನೀರದಲ್ಲಿ 2 ಮೋಟಾರು ಭರಮಸಾಗರ ಕೆರೆಯಲ್ಲಿ 2 ಮೋಟಾರ್‌ಗಳನ್ನು ಚಾಲುಗೊಳಿಸಲಾಗಿದೆ. ಯೋಜನೆಯ ಎಲ್ಲಾ ಕೆರೆಗಳಿಗೆ ನೀರು ತಲುಪುತ್ತಿದೆ. ತಾಂತ್ರಿಕ ದೋಷಗಳು ಇರುವ ಕಡೆ ಆದಷ್ಟು ಬೇಗನೆ ಪರಿಹರಿಸಲು ಮುಂದಾಗುತ್ತೇವೆ.
–ಮನೋಜ್ ಕುಮಾರ್ ಸಹಾಯಕ ಅಭಿಯಂತರು ಕರ್ನಾಟಕ ನೀರಾವರಿ ನಿಗಮ
