Chitradurga news|Nammajana.com|18-8-2025
ನಮ್ಮಜನ.ಕಾಂ, ವಿಧಾನ ಸಭೆ ಅಧಿವೇಶನ: ಚಳ್ಳಕೆರೆ (Parashurampura) ತಾಲೂಕಿನ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರ ಮಾಡಬೇಕು ಎಂದು ಚಳ್ಳಕೆರೆ ಕ್ಷೇತ್ರದ ಶಾಸಕ ಹಾಗೂ ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಸರ್ಕಾರ ಮತ್ತು ಕಂದಾಯ ಸಚಿವರಿಗೆ ಒತ್ತಾಯಿಸಿದ್ದಾರೆ.
ವಿಧಾನ ಸಭೆ ಅಧಿವೇಶನದಲ್ಲಿ ಪರಶುರಾಂಪುರ ಹೋಬಳಿ ತಾಲೂಕು ಕೇಂದ್ರ ಮಾಡಬೇಕು ಎಂಬುದು ನನ್ನ ಬೇಡಿಕೆಯಾಗಿದೆ. 2013 ರಿಂದ 2018 ರ ಸರ್ಕಾರದಲ್ಲಿ ನಾನು ಪರಶುರಾಂಪುರ ತಾಲೂಕು ಕೇಂದ್ರ ಮಾಡಿ ಎಂದು ಸಿಎಂ ಬಳಿ ಮನವಿ ಮಾಡಿದ್ದೆ ಆಗ ಘೋಷಣೆ ಸಂದರ್ಭದಲ್ಲಿ ಕೈ ತಪ್ಪಿದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಮುಂದೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು.
2016 ರಲ್ಲಿ ಎಂ.ಬಿ.ಪ್ರಕಾಶ್ ವರದಿಯಲ್ಲಿ ಪರಶುರಾಂಪುರ ತಾಲೂಕು ಕೇಂದ್ರಕ್ಕೆ ಶಿಫಾರಸ್ಸು
2016 ರಲ್ಲಿ ಎಂ.ಬಿ.ಪ್ರಕಾಶ್ ವರದಿಯಲ್ಲಿ ಪರಶುರಾಂಪುರ ತಾಲೂಕು ಕೇಂದ್ರ ಮಾಡಬೇಕು ಎಂದು ವರದಿ ನೀಡಿದ್ದರು (Parashurampura) ಮತ್ತು ಅಂದಿನ ಸಚಿವರಾದ ಶ್ರೀನಿವಾಸ್ ಪ್ರಸಾದ್ ಅವರು ಸಹ ಒಪ್ಪಿಗೆ ನೀಡಿದ್ದರು ಎಂದರು.
63 ತಾಲೂಕುಗಳ ಘೋಷಣೆ ಸಂದರ್ಭದಲ್ಲಿ ಪರಶುರಾಂಪುರ ತಾಲೂಕು ಕೇಂದ್ರ ಘೋಷಣೆ ಮಾಡುತ್ತಾರೆ ಎಂಬ ನಂಬಿಕೆ ಇತ್ತು ಆದರೆ ಆಹ ಸಹ ಆಗಲಿಲ್ಲ 2023 ರಲ್ಲಿ ಸಹ ನಾನು ಸರ್ಕಾರಕ್ಕೆ ಅಧಿವೇಶನ ಸಂದರ್ಭದಲ್ಲಿ ತಾಲೂಕು ಕೇಂದ್ರ ಮಾಡಲು ಒತ್ತಾಯಿಸಿದ್ದು 2024 ರಲ್ಲಿ ತಾಲೂಕು ಕೇಂದ್ರ ಘೋಷಣೆ ಮಾಡುತ್ತಾರೆ ಎಂಬ ನಂಬಿಕೆಯಿಂದ ಕಳೆದ ಬಾರಿ ಇದರ ಬಗ್ಗೆ ಮಾತನಾಡಿಲ್ಲ. ಈಗ ಮತ್ತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದು ಪರಶುರಾಂಪುರ ತಾಲೂಕು ಕೇಂದ್ರ ಮಾಡಲೇಬೇಕು ಎಂದು (Parashurampura) ಒತ್ತಾಯಿಸಿದರು.
ಹೊಸ ತಾಲೂಕು ಘೋಷಣೆ ಸಂದರ್ಭದಲ್ಲಿ ಪರಶುರಾಂಪುರ ಮೊದಲ ಆದ್ಯತೆ: ಸಚಿವ ಕೃಷ್ಣಬೈರೇಗೌಡ
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಪರಶುರಾಂಪುರ ತಾಲೂಕು ಕೇಂದ್ರ ಮಾಡುವುದು ನಮ್ಮ ಗಮನದಲ್ಲಿದೆ. ಈ ಬಾರಿಯ ಹೊಸ ತಾಲೂಕು ಘೋಷಣೆ ಸಂದರ್ಭದಲ್ಲಿ ಮೊದಲ ಆದ್ಯತೆ ಮೇಲೆ ಪರಶುರಾಂಪುರ ತಾಲೂಕು ಕೇಂದ್ರ ಮಾಡಿಕೊಡುತ್ತೇವೆ. ಈಗಾಗಲೇ ಘೋಷಣೆ ಮಾಡಿರುವ 63 ತಾಲೂಕು ಕೇಂದ್ರದಲ್ಲಿ 23 ತಾಲೂಕು ಕೇಂದ್ರವಿದೆ. ಉಳಿದಂತೆ 40 ಕಡೆ ಜಾಗ ಮತ್ತು ತಾಲೂಕು ಕೇಂದ್ರ ಕಟ್ಟಡ ಸಹ ಕಟ್ಟಲು ಆಗಿಲ್ಲ ಆದ್ದರಿಂದ ಎಲ್ಲಾ (Parashurampura) ತಾಲೂಕುಗಳ ಮೂಲಭೂತ ಸೌಕರ್ಯ ಒದಗಿಸಿದ ನಂತರ ಹೊಸ ತಾಲೂಕು ಕೇಂದ್ರಗಳ ಮಾಡಲು ಯೋಚಿಸಲಾಗುತ್ತದೆ. ಸದ್ಯಕ್ಕೆ ಸಿಎಂ ಅವರು ಮತ್ತು ಆರ್ಥಿಕ ಇಲಾಖೆ ಸದ್ಯಕ್ಕೆ ಹೊಸ ತಾಲೂಕು ಘೋಷಣೆ ಮಾಡಿ ಎಂದು ಸೂಚನೆ ನೀಡಿದ್ದಾರೆ ಎಂದು ಉತ್ತರ ನೀಡಿದರು.
63 ತಾಲೂಕು ಅಭಿವೃದ್ಧಿ ಆಗುವವರೆಗೂ ಕಾಯೋಕೆ ಆಗಲ್ಲ
ಸಚಿವ ಮಾತಿಗೆ ಕೆರಳಿದ ಶಾಸಕ ಟಿ.ರಘುಮೂರ್ತಿ ಸಚಿವರ ಮಾತು ಒಪ್ಪಲು ಸಾಧ್ಯವಿಲ್ಲ, ರಾಜ್ಯ ಎಲ್ಲಾ ತಾಲೂಕುಗಳು ಅಭಿವೃದ್ಧಿ ಆಗುವವರೆಗೂ ನಾನು ಕಾಯಲು ಆಗಲ್ಲ. ಒಬ್ಬ ಜನಪ್ರತಿನಿಧಿ ಆದವರು ನಮ್ಮ ಕ್ಷೇತ್ರದ ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಾಗುತ್ತದೆ. ಜನರ ವಿಶ್ವಾಸ ಗಳಿಸಬೇಕಾಗುತ್ತದೆ. 63 ತಾಲೂಕು ಏಕೆ ಅಭಿವೃದ್ಧಿ ಆಗಿಲ್ಲ ಎಂದು ಪ್ರಶ್ನಸುವುದಿಲ್ಲ? ಆದರೆ ಈಗ ಸಚಿವರ ಮಾತು ಕೇಳಿದರೆ ಅಪರಾಧಿಗೆ ಶಿಕ್ಷೆಯಿಂದ ತಪ್ಪಿಸಿಕೊಂಡು ನಿರಾಪರಾಧಿಗೆ ಶಿಕ್ಷೆ ಆದಂತೆ ಆಗುತ್ತದೆ ಎಂದು ಉದಾರಣೆ ನೀಡುವ ಮೂಲಕ ಸರ್ಕಾರ ಮತ್ತು ಸಚಿವರಿಗೆ ಬಿಸಿ ಮುಟ್ಟಿಸಿದರು.
ಸರ್ಕಾರದಲ್ಲಿ ಅನೇಕ ತಪ್ಪುಗಳು, ಕಾನೂನು ತೊಡಕು, ಅವ್ಯವಸ್ಥೆ ಆದಾಗ ಸರಿಪಡಿಸಲು ಬರುತ್ತೆ ಆದರೆ ವಿಶೇಷ ಪ್ರಕರಣದಲ್ಲಿ ನಮ್ಮತಾಲೂಕು ಘೋಷಣೆ ಮಾಡಲು ಸಚಿವರಿಗೆ ಬರುವುದಿಲ್ವ ಎಂದರು.
ನನ್ನ ಕ್ಷೇತ್ರದ ಜನರನ್ನು ಸಮಾಧಾನ ಮಾಡುತ್ತಾ ಬಂದಿದ್ದೇನೆ, ಜನರು ಹೋರಾಟಕ್ಕೆ ಸಿದ್ದರಾಗಿದ್ದು ಆಡಳಿತ ಪಕ್ಷದಲ್ಲಿರುವ ನನ್ನನ್ನು ಅಂತಹ ಪರಿಸ್ಥಿತಿ ಇಳಿಯಲು ಬಿಡಬೇಡಿ ಎಂದು ಸರ್ಕಾರ ಮತ್ತು ಸಚಿವರಿಗೆ ಎಚ್ಚರಿಕೆ ಗಂಟೆ ಬಾರಿಸಿದರು.
ವಿಶೇಷವಾಗಿ ಗಮನ ಹರಿಸಿ ಸಿಎಂ ಮತ್ತು ಡಿಸಿಎಂ , ಸಚಿವರು ನಮ್ಮ ಪರಶುರಾಂಪುರ ತಾಲೂಕು ಕೇಂದ್ರ ಮಾಡಬೇಕು ಎಂದು ಒತ್ತಾಯಿಸಿದರು.
ಶಾಸಕರ ಮಾತಿಗೆ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ ಶಾಸಕ ರಘುಮೂರ್ತಿ ಅವರ ಅಕ್ರೋಶಕ್ಕೆ ಕಾರಣವಿದೆ. ಕಳೆದ ಸರ್ಕಾರದಲ್ಲಿ ಸಮಿತಿಯಲ್ಲಿ ಶಿಫಾರಸ್ಸು ಆಗಿದೆ.ನಾನು ಮಾತ್ರ ತಾಲೂಕು ಘೋಷಣೆ ಸಂದರ್ಭದಲ್ಲಿ ಮೊದಲ ಆದ್ಯತೆಯ ಮೇಲೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಈಗಲೇ ಅಂದರೆ ಅದನ್ನು ಸಿಎಂ ಅವರ ಬಳಿ ಚರ್ಚೆ ನಡೆಸುತ್ತೇನೆ ಇದು ಪಾಲಿಸಿ ಡಿಸಿಷನ್ . ಸದ್ಯಕ್ಕೆ ಬೇಡ ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯಕ್ಕೆ ತಳುಕು ಹಾಕಬೇಡಿ ಎಂದು ರಘುಮೂರ್ತಿ ಅವರು ಹೇಳುತ್ತಿದ್ದು ಅವರ ಬೇಡಿಕೆ ವಿಶೇಷ ಪ್ರಕಣದಲ್ಲಿದೆ. ಇದನ್ನೂ ಮಾಡಿದರೆ ಉಳಿದ ಶಾಸಕ ಮಿತ್ರರು ಪಟ್ಟಿ ಹಿಡಿದು ಬರುತ್ತಾರೆ ಹಾಗಾಗಿ ನಾನು ಶಾಸಕರ ಗೌರವ ಕಾಪಾಡುವುದು ನಮ್ಮ (Parashurampura) ಜವಬ್ದಾರಿ, ಸರ್ಕಾರ ನಿಮ್ಮಜೊತೆ ಇದೆ ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.
