Chitradurga News| Nammajana.com|April-19-4-2024
ನಮ್ಮ ಜನ.ಕಾಂ. ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿರುವ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಮತ್ತು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಲೋಕಸಭೆ ಫೈಟ್ ಜೋರಾಗಿ ಕಾಣುತ್ತಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬ ಖ್ಯಾತಿ ಪಡೆದಿತ್ತು.ಆದರೆ 2009 ರಲ್ಲಿ ಬಿಜೆಪಿ 2013 ರಲ್ಲಿ ಕಾಂಗ್ರೆಸ್ ಮತ್ತೆ 2019 ರ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸುವ ಮೂಲಕ ಹಾವು ಏಣಿ ಆಟ ಮುಂದುವರೆದಿದ್ದು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಮತದಾರರ ಈ ಬಾರಿ ಯಾರ ಪರ ಒಲವು ತೋರಲಿದ್ದಾರೆ ಎಂಬುದು ಈ ಬಾರಿ ಚುನಾವಣೆ ನಂತರ ಕ್ಲಿಯರ್ ಪಿಚ್ಚರ್ ತಿಳಿಯಲಿದೆ.
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಒಂದು ರೀತಿಯಲ್ಲಿ ವಿಶೇಷ ಮತ್ತು ಹಲವು ಜಾತಿ ಲೆಕ್ಕಚಾರಗಳನ್ನು ತಲೆಕೆಳಗಾಗಿ ಮಾಡುವ ಮೂಲಕ ಅಚ್ಚರಿ ಫಲಿತಾಂಶ ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ರಾಜಕಾರಣಕ್ಕೆ ಮತದಾರರು ಮಣೆ ಹಾಕಿದ್ದಾರೆ. ಜಿಲ್ಲಾ ಕೇಂದ್ರದ ಸುತ್ತಲೂ ಹಳ್ಳಿಗಳನ್ನು ಒಳಗೊಂಡಿರುವ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಅಹಿಂದ ಮತಗಳೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಇತಿಹಾಸ
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಜಿ ಎಚ್ ತಿಪ್ಪಾರೆಡ್ಡಿ ಸತತ 30 ವರ್ಷಗಳಿಂದ ಒಂದಿಲ್ಲೊಂದು ರೀತಿ ಅಧಿಕಾರದಲ್ಲಿ ಇದ್ದಾರೆ. 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜನತಾ ದಳದ ಏಕಾಂತಯ್ಯನವರನ್ನು ಸೋಲಿಸುವ ಮೂಲಕ ತಿಪ್ಪಾರೆಡ್ಡಿ ಶಾಸಕರಾಗಿ ನಂತರ 2008ರಲ್ಲಿ ಮಾತ್ರ ಸೋಲು ಕಂಡ ತಿಪ್ಪಾರೆಡ್ಡಿ ಅವರು 2೦23 ಚುನಾವಣೆವರೆಗೆ ಶಾಸಕರಾಗಿದ್ದರು ಆದರೆ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಕೆ.ಸಿ.ವೀರೇಂದ್ರ ಪಪ್ಪಿ ದೈತ್ಯ ರಾಜಕಾರಣಿ ತಿಪ್ಪಾರೆಡ್ಡಿ ಅವರನ್ನು 53 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ತಿಪ್ಪಾರೆಡ್ಡಿ ಅವರನ್ನು ಸೋಲಿಸಿದರು.
ವ್ಯಕ್ತಿಗತ ರಾಜಕಾರಣಕ್ಕೆ ಮಣೆ ಹಾಕುತ್ತಿರುವ ಮತದಾರ
ಜಿಲ್ಲಾ ಕೇಂದ್ರವಾಗಿರುವ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಜಾತಿ ಲೆಕ್ಕಚಾತ ವರ್ಕೌಟ್ ಆಗಿದ್ದು ತುಂಬಾ ವಿರಳ ಎಂದರೆ ತಪ್ಪಾಗಲಾರದು. ಅಹಿಂದ ಮತದಾರರು,ಲಿಂಗಾಯತ ಮತಗಳು ಇಬ್ಬರೂ ನಿರ್ಣಾಯಕ ಸಂಖ್ಯೆಯಲ್ಲಿರುವ ಕ್ಷೇತ್ರವಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ನಡುವೆ ಸದಾ ಫೈಟ್ ಇತ್ತಾದರೂ ಸಹ ಅದು ವ್ಯಕ್ತಿ ರಾಜಕಾರಣದ ಮೇಲೆ ಎನ್ನಬಹುದು. 2003 ರ ಚುನಾವಣೆಯಿಂದ ತಿಪ್ಪಾರೆಡ್ಡಿ ಫ್ಯಾಮಿಲಿ ಮತ್ತು ಎಸ್.ಕೆ.ಬಸವರಾಜನ್ ಫ್ಯಾಮಿಲಿ ಫೈಟ್ ಆರಂಭವಾಗಿ ಪ್ರತಿ ಚುನಾವಣೆಯಲ್ಲಿ ಎರಡು ಕುಟುಂಬಗಳನ್ನು ಜಿದ್ದಾಜಿದ್ದು ಚುನಾವಣೆ ನಡೆಯುತ್ತಿತ್ತು ಆದರೆ 2008 ರಲ್ಲಿ ಬಸವರಾಜನ್ ತಿಪ್ಪಾರೆಡ್ಡಿ ವಿರುದ್ದ ಗೆದ್ದು ಜೆಡಿಎಸ್ ಗೆ ಶಕ್ತಿ ತುಂಬಿದ್ದರು. ಆದರೆ ನಂತರ ಚುನಾವಣೆಯಲ್ಲಿ ಬಸವರಾಜನ್ ಸೋಲು ಅನುಭವಿಸಿದ್ದು ಇತಿಹಾಸವಾಗಿದೆ.
ಇದನ್ನೂ ಓದಿ: ವಿಶ್ವ ಪರಿಸರ ದಿನಾಚರಣೆ: ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ
ರಾಜಕೀಯ ಸಂಪ್ರದಾಯಿಕ ಎದುರಾಳಿಗಳ ಸಮಾಗಮಕ್ಕೆ ಸಾಕ್ಷಿಯಾದ ಲೋಕಸಭೆ ಮೈತ್ರಿ
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ಮೂಲಕ ಯಿಂದ ರಾಜಕೀಯ ಲೆಕ್ಕಚಾರ ಉಲ್ಟಾ ಆಗಿದೆ. ಸದಾ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪದಲ್ಲಿ ರಾಜಕೀಯ ಎದುರಾಳಿಗಾಳಾಗಿದ್ದ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಸೌಭಾಗ್ಯ ಬಸವರಾಜನ್, ಮಾಜಿ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್ ಒಂದೇ ವೇದಿಕೆಯಲ್ಲಿ ನಿಂತು ಮೈತ್ರಿ ಅಭ್ಯರ್ಥಿ ಪರ ನಿಂತು ಕೆಲಸ ಮಾಡುತ್ತಿದ್ದು ಬಿಜೆಪಿ ಬಲವನ್ನು ಹೆಚ್ಚಿಸಿದ್ದು ಮತಗಳಾಗಿ ಪರಿವರ್ತನೆಯಾಗುತ್ತದೆ ಎಂಬುದು ಕಾದು ನೋಡಬೇಕಿದೆ.ಇವೆಲ್ಲದರ ಜೊತೆಗೆ ಹಾಲಿ ಎಂಎಲ್ಸಿ ಕೆ.ಎಸ್.ನವೀನ್ ಸಹ ಇದ್ದು ಒಂದಿಷ್ಟು ಸಮುದಾಯದ ಮತಗಳು ತರಬಹುದು ಎಂಬ ನಿರೀಕ್ಷೆಯಲಿ ಬಿಜೆಪಿ ಇದ್ದು ಮೈತ್ರಿನಾಯಕರು ಯಾವ ರೀತಿ ಮತಗಳನ್ನು ವರ್ಕೌಟ್ ಮಾಡುತ್ತಾರೆ ಎಂಬುದು ಚುನಾವಣೆ ನಂತರ ತಿಳಿಯಲಿದೆ.
ಕಾಲಿಗೆ ಚಕ್ರ ಕಟ್ಟಿ ಪ್ರಚಾರ ನಡೆಸುತ್ತಿರವ ಜಿ.ಹೆಚ್.ತಿಪ್ಪಾರೆಡ್ಡಿ ಲೀಡ್ ತಂತ್ರಗಾರಿಕೆ ವರ್ಕೌಟ್ ಆಗುತ್ತಾ.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ರಾಜಕೀಯ ಲೆಕ್ಕಚಾರದಲ್ಲಿ ತಪ್ಪಿದ್ದು ತುಂಬಾ ವಿರಳ, ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ತನ್ನ ವೈಯಕ್ತಿಕ ಹಿಡಿತವನ್ನು ಮುಂದುವರೆಸಿದ್ದಾರೆ.ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು ಜನರ ಒಡನಾಟವನ್ನು ಬಿಟ್ಟಿಲ್ಲ. ಹಳ್ಳಿ ಕೆರೆಗಳ ಮನೆ ಮನೆ ತಲುಪಿರುವ ತಿಪ್ಪಾರೆಡ್ಡಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ 37 ಸಾವಿರಕ್ಕೂ ಹೆಚ್ಚು ಲೀಡ್ ಬಿಜೆಪಿಗೆ ದೊರಕಿತ್ತು.ಆದರೆ ಈಬಾರಿ ಕಾಂಗ್ರೆಸ್ ಶಾಸಕರಿದ್ದು ತಿಪ್ಪಾರೆಡ್ಡಿ ಅವರ ಅನುಭವ ಮತ್ತು ರಾಜಕೀಯ ಲೆಕ್ಕಚಾರ ಯಾವ ರೀತಿ ಮತಗಳಾಗಿ ಪರಿಣಾಮ ಬೀರುತ್ತದೆ. ಮೈತ್ರಿ ನಾಯಕರನ್ನು ಜೊತೆಗಿಟ್ಟುಕೊಂಡು ಯಾವ ರೀತಿ ಮತ್ತಷ್ಟು ಬಲ ಹೆಚ್ವಿಸಿಕೊಳ್ಳುತ್ತಾರೆಯೇ. ಗೋವಿಂದಪ್ಪ ಕಾರಜೋಳ ಅವರನ್ನು ಕರೆ ತಂದಿದ್ದು ತಿಪ್ಪಾರೆಡ್ಡಿ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು ತಿಪ್ಪಾರೆಡ್ಡಿ ತಂತ್ರಗಳು ವರ್ಕೌಟ್ ಆದರೆ ಬಿಜೆಪಿ ಲೀಡ್ ಕಾಯಂ ಎಂಬ ಮಾತು ಕೇಳಿ ಬರುತ್ತಿದೆ.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಅಗ್ನಿ ಪರೀಕ್ಷೆಯಾದ ಲೋಕಸಭಾ ಚುನಾವಣೆ
ಜಿಲ್ಲಾ ಕೇಂದ್ರ ಚಿತ್ರದುರ್ಗ ಕ್ಷೇತ್ರದಲ್ಲಿ ದಶಕಗಳ ನಂತರ ಅಧಿಕಾರದಿಂದ ವಂಚಿತವಾಗಿದ್ದ ಅಧಿಕಾರ ದೊರಕಿದೆ. 2023 ವಿಧಾನ ಸಭಾ ಕ್ಷೇತ್ರದಲ್ಲಿ ವೀರೇಂದ್ರ ಪಪ್ಪಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ವೀರೇಂದ್ರ ಪಪ್ಪಿ ಶಾಸಕರಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಲೋಕಸಭೆ ಚುನಾವಣೆ ಆಗಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ತಂದು ಕೊಡುವ ಮೂಲಕ ನನ್ನ ಶಕ್ತಿ ಇನ್ನು ಕಡಿಮೆ ಆಗಿಲ್ಲ ಎಂದು ಮತ್ತೆ ಸಾಬೀತುಪಡಿಸುತ್ತಾರಾ? ಏಕೆಂದರೆ ಇಲ್ಲಿಯವರೆಗೆ ತನ್ನ ಕ್ಷೇತ್ರದಲ್ಲಿ ಸಿಎಂ ಸಭೆ ನಂತರ ಒಂದೆರಡು ಸಭೆ ನಡೆಸುತ್ತಿರುವುದು ಬಿಟ್ಟರೆ ಯಾವ ಹಳ್ಳಿಗೆ ತೆರಳಿ ಪ್ರಚಾರ ನಡೆಸುತ್ತಿಲ್ಲ. ಆದರೆ ಎರಡ್ಮೂರು ದಿನದಲ್ಲಿ ಪ್ರತಿ ಹಳ್ಳಿಗೆ ತೆರಳಿ ಪ್ರಚಾರ ಆರಂಭಿಸುವ ನಿರೀಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಇದ್ದು ಗ್ಯಾರೆಂಟಿ ಯೋಜನೆಯ ಮತಗಳು ಮತ್ತು ಲಿಂಗಾಯತ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ತಂದುಕೊಟ್ಟರೆ ಶಾಸಕ ವೀರೇಂದ್ರ ಪಪ್ಪಿ ಲೋಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದಂತೆ ಆಗುತ್ತದೆ ಚಂದ್ರಪ್ಪ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಸಿದಂತೆ ಆಗುತ್ತದೆ.
ಇದನ್ನೂ ಓದಿ: ಚಂದ್ರಪ್ಪನ ಗೆಲುವಿಗಾಗಿ ಹೊಳಲ್ಕೆರೆ ಗಣಪತಿಗೆ 101 ತೆಂಗಿನಕಾಯಿ ಅರ್ಪಣೆ
ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬೀಗುತ್ತಾರಾ ಪಪ್ಪಿ?
ಕಾಂಗ್ರೆಸ್ ಮತ್ತು ಎನ್ ಡಿಎ ಎರಡು ಪಕ್ಷಗಳ ಮುಖಂಡರು , ಕಾರ್ಯಕರ್ತರು ರಣತಂತ್ರಗಳನ್ನು ಹೆಣೆಯುವ ಮೂಲಕ ನಮ್ಮದೇ ಗೆಲುವು ಎಂದು ಅಖಾಡ ಪ್ರವೇಶಿದ್ದಾರೆ. ವಿಧಾನ ಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ವ್ಯತ್ಯಾಸ ಮತ್ತು ಜಾತಿ ಲೆಕ್ಕಚಾರ ಬದಲಾಗುತ್ತದೆ.ಯಾವ ರೀತಿ ಚುನಾವಣೆಯಲ್ಲಿ ಎರಡು ಪಕ್ಷಗಳ ನಾಯಕರು ಹೆಣೆಯುತ್ತಾರೆ ಎಂಬುದನ್ನು ಫಲಿತಾಂಶವರೆಗೂ ಕಾಯಬೇಕಿದ್ದು ಚಿತ್ರದುರ್ಗದ ಲೀಡ್ ಎರಡು ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ..
ಕಾಂಗ್ರೆಸ್ -ಬಿಜೆಪಿಗೆ ಪ್ಲಸ್ ಮತ್ತು ಮೈನಸ್
* ಸ್ಥಳೀಯ ನಾಯಕರ ಒಗ್ಗಟ್ಟು, , ಮೇಲ್ಜಾತಿ ಮತಗಳು ಮತ್ತು ಜೆಡಿಎಸ್ ಮತಗಳು ಬಿಜೆಪಿಗೆ ಪ್ಲಸ್
* ಮೊದಲ ಬಾರಿ ಕಾಂಗ್ರೆಸ್ ಸ್ಥಳೀಯ ಶಾಸಕರು ,ಗ್ಯಾರಂಟಿಗಳು ಯೋಜನೆಗಳು, ಅಹಿಂದ- ಅಲ್ಪ ಸಂಖ್ಯಾತ ಮತಗಳು ಕಾಂಗ್ರೆಸ್ಗೆ ಪ್ಲಸ್.
*ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರು ಇನ್ನು ಚುನಾವಣೆ ಕೆಲಸ ಪೂರ್ಣ ಆರಂಭಿಸದಿರುವುದು ಮೈನಸ್
*ಸ್ಥಳೀಯ ಬಿಜೆಪಿ ಶಾಸಕ ಇಲ್ಲದಿರುವುದು ಮೈನಸ್
*ಬಿಜೆಪಿ ಮೈತ್ರಿಯಲ್ಲಿ ಒಗ್ಗಟ್ಟಿನ ಕೊರತೆ, ಎಲ್ಲೂ ಫೀಲ್ಡ್ ಗೆ ಇಳಿಯದಿರುವುದು ಮೈನಸ್
**
2018 ರ ವಿಧಾನ ಸಭಾ ಚುನಾವಣೆಯಲ್ಲಿ ಮತಗಳ ಅಂತರ
ಬಿಜೆಪಿ 82,896
ಕಾಂಗ್ರೆಸ್ -49,014
ಜೆಡಿಎಸ್ -49911
ಅಂತರ – 32985
******
2023 ರ ವಿಧಾನ ಸಭಾ ಚುನಾವಣೆಯಲ್ಲಿ ಮತಗಳ ಅಂತರ
ಬಿಜೆಪಿ- 67437
ಕಾಂಗ್ರೆಸ್ – 120849
ಗೆಲುವಿನ ಅಂತರ 53412
*******
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಮತದಾರರ ವಿವರ
1,29,809 ಪುರುಷರು
1,34,398 ಮಹಿಳೆಯರು
41 ಲಿಂಗತ್ವ ಅಲ್ಪ ಸಂಖ್ಯಾತರು
2,64,248 ಒಟ್ಟು ಮತದಾರರು
**
ಇದನ್ನೂ ಓದಿ: ಆಶ್ರಮದಲ್ಲಿ ತಾಯಿ-ಮಗಳ ಆತ್ಮಹತ್ಯೆ| ನೀರಿನ ತೊಟ್ಟಿಯಲ್ಲಿ ಮೃತದೇಹ ಪತ್ತೆ