ನಮ್ಮಜನ.ಕಾಂ.ಹೊಸದುರ್ಗ: ಭಾರತೀಯ ಸನಾತನ ಇತಿಹಾಸದಲ್ಲಿ ಪೌರಾಣಿಕ ನಾಟಕಗಳು ಜನಮಾನಸದಲ್ಲಿ ಹೆಚ್ಚು ಪ್ರಭಾವ ಬೀರಿವೆ ,ರಾಮಾಯಣ ಮತ್ತು ಮಹಾಭಾರತ ದಂತಹ ಪೌರಾಣಿಕ ಮಹಾಕಾವ್ಯಗಳಲ್ಲಿ ಬಿತ್ತರವಾಗುವ ಪಾತ್ರಗಳು ಪ್ರಸ್ತುತ ಜನಮಾನಸದಲ್ಲಿ ಹೆಚ್ಚಿನ ಪ್ರಭಾವ ಬೀರುವೆ ಎಂದು ಸದ್ಗುರು ಪ್ರದೀಪ್ ತಿಳಿಸಿದರು.
ಹೊಸದುರ್ಗ ನಗರದ ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಕಲಾವಿದರಿಂದ ದೇವಿಯ ಜಾತ್ರೆ ಪ್ರಯುಕ್ತ ನಡೆಯಲಿರುವ “ಕುರುಕ್ಷೇತ್ರ “ನಾಟಕದ ಬಿತ್ತಿಪತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ಪ್ರಸ್ತುತ ಧಾರಾವಾಹಿಗಳನ್ನ ನೋಡುವ ಜನರು ಹೆಚ್ಚಾಗಿದ್ದು ಧಾರಾವಾಹಿ ಮತ್ತು ಸಿನಿಮಾಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುವ ಪೌರಾಣಿಕ ನಾಟಕಗಳನ್ನ ನೋಡುವವರ ಸಂಖ್ಯೆ ಹೆಚ್ಚಾದಾಗ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ, ಮಹಾಭಾರತದಲ್ಲಿ ಕೌರವರು ಮತ್ತು ಪಾಂಡವರ ಕುರಿತಾದ ಪಾತ್ರಗಳು ಧರ್ಮ ಮತ್ತು ಅಧರ್ಮದ ಮೂಲವನ್ನ ಸಾರುತ್ತವೆ.

ಶ್ರೀ ಕೃಷ್ಣನ ಪಾತ್ರಧಾರಿಯಾಗಿ ಹೊಸದುರ್ಗದ ಹಿರಿಯ ಕಲಾವಿದರಾದ ಸುಬ್ಬಣ್ಣನವರು ನೂರಾರು ನಾಟಕಗಳಲ್ಲಿ ಅಭಿನಯಿಸಿ ಅತ್ಯಂತ ಜನಮನಣೆಗೆ ಪಾತ್ರರಾಗಿದ್ದಾರೆ.
ಸುಬ್ಬಣ್ಣನವರ ನೇತೃತ್ವದ ಸ್ಥಳೀಯ ಹಿರಿಯ ಕಲಾವಿದರ ತಂಡ ಬರುವ ಏಳನೇ ತಾರೀಕು ಮಂಗಳವಾರದಂದು ಹೊಸದುರ್ಗದ ದೇವರ ದಾಸಿಮಯ್ಯ ಮಾರುಕಟ್ಟೆ ಆವರಣದಲ್ಲಿ ಕುರುಕ್ಷೇತ್ರ ನಾಟಕವನ್ನು ಅಭಿನಯಿಸುತ್ತಿರುವುದು ಅತ್ಯಂತ ಸಂತಸ ತಂದಿದೆ.
ಈ ನಾಟಕವನ್ನು ನೋಡಲು ನಗರದ ಜನರು ಕಾತುರದಿಂದ ಕಾಯುತ್ತಿದ್ದು ಬರುವ ತಾರೀಕು ವಿಶೇಷ ರಂಗ ಸಂಚಿಕೆಯಲ್ಲಿ ಕುರುಕ್ಷೇತ್ರ ಅರ್ಥಾತ್ ಶ್ರೀ ಕೃಷ್ಣ ಸಂಧಾನ ನಾಟಕ ಹೊಸದುರ್ಗ ನಗರದಲ್ಲಿ ಮೂಡಿ ಬರಲಿದ್ದು ಎಲ್ಲಾ ಸಂಗೀತ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಬದುಕಿಗೆ ಬೇಕಾದ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದರು.
ತಾಲೂಕು ಭೋವಿ ಸಮಾಜದ ಅಧ್ಯಕ್ಷ ಗುತ್ತಿಗೆದಾರ ಸುಬ್ಬಾಭೋವಿ ಮಾತನಾಡಿ ನನ್ನ ಜೀವನದಲ್ಲಿ ಶ್ರೀ ಕೃಷ್ಣನ ಪಾತ್ರಧಾರಿಯಾಗಿ ಹತ್ತಾರು ಬಾರಿ ಕುರುಕ್ಷೇತ್ರ ನಾಟಕದಲ್ಲಿ ಅಭಿನಯ ಮಾಡಿದ್ದೇನೆ. ಪೌರಾಣಿಕ ನಾಟಕಗಳು ಸಮಾಜದ ಅಂಕುಡೊಂಕು ಸಂಸ್ಕೃತ ಜೀವನ ನಡೆಸಲು ದಾರಿದೀಪವಾಗಿವೆ.
ಇದನ್ನೂ ಓದಿ: ಡಾ. ಬಿ. ರಾಜಶೇಖರಪ್ಪಗೆ “ಪ್ರೊ. ಶಿ.ಚೆ. ನಂದೀಮಠ ಪ್ರಶಸ್ತಿ”
ವರ್ಷಕ್ಕೆ ಒಮ್ಮೆಯಾದರೂ ಕುರುಕ್ಷೇತ್ರ ನಾಟಕದಲ್ಲಿ ಅಭಿನಯಿಸಲು ಕಾತುರದಿಂದ ಕಾಯುತ್ತಿರುತ್ತೇನೆ. ಶ್ರೀ ಕೃಷ್ಣ ಪಾತ್ರಧಾರಿ ಆಗಿ ಅಭಿನಯಿಸಿ ಜನರ ಪ್ರೀತಿಗೆ ಪಾತ್ರರಾಗಿರುವುದು ನನ್ನ ಜೀವಿತ ಅವಧಿಯ ಅಭಿವೃದ್ಧಿಯ ನೆನಪಾಗಿದೆ.
ಇದು ಇದೇ ಸಂದರ್ಭದಲ್ಲಿ ಕುರುಕ್ಷೇತ್ರ ನಾಟಕದ ಪಾತ್ರಧಾರಿಗಳಾದ ಮಾಜಿ ಪುರಸಭಾ ಸದಸ್ಯ ರಾಮಚಂದ್ರಪ್ಪ, ಗ್ರಾಪಂ ಸದಸ್ಯ ಲಂಕೆ ಹನುಮಂತಪ್ಪ. ಕಸಪ್ಪ ಮಾಜಿ ಅಧ್ಯಕ್ಷ ಧನಂಜಯ ಮೆಂಗಸಂದ್ರ, ಹಿನ್ನೆಲೆ ಗಾಯಕ ಬಸವರಾಜ್, ಶಿವರುದ್ರಮೂರ್ತಿ, ಗೋಲ್ಡನ್ ವಾಯ್ಸ್ ರಾಘು, ಗುರುಪ್ರಸಾದ್, ತುಂಬಿನಕೆರೆ ಬಸವರಾಜ್ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252