Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಪೌರಾಣಿಕ ನಾಟಕಗಳು ಜನರ ಮೇಲೆ ಹೆಚ್ಚು ಪ್ರಭಾವ ಬೀರಿವೆ: ಸದ್ಗುರು ಪ್ರದೀಪ್
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಪೌರಾಣಿಕ ನಾಟಕಗಳು ಜನರ ಮೇಲೆ ಹೆಚ್ಚು ಪ್ರಭಾವ ಬೀರಿವೆ: ಸದ್ಗುರು ಪ್ರದೀಪ್
ಇಂದಿನ ಸುದ್ದಿ

ಪೌರಾಣಿಕ ನಾಟಕಗಳು ಜನರ ಮೇಲೆ ಹೆಚ್ಚು ಪ್ರಭಾವ ಬೀರಿವೆ: ಸದ್ಗುರು ಪ್ರದೀಪ್

Editor Nammajana
Last updated: 6 May 2024 03:06
By Editor Nammajana 2 Min Read
Share
SHARE
Chitradurga news | Nammajana.com | 6-5-2024

ನಮ್ಮಜನ.ಕಾಂ.ಹೊಸದುರ್ಗ: ಭಾರತೀಯ ಸನಾತನ ಇತಿಹಾಸದಲ್ಲಿ ಪೌರಾಣಿಕ ನಾಟಕಗಳು ಜನಮಾನಸದಲ್ಲಿ ಹೆಚ್ಚು ಪ್ರಭಾವ ಬೀರಿವೆ ,ರಾಮಾಯಣ ಮತ್ತು ಮಹಾಭಾರತ ದಂತಹ ಪೌರಾಣಿಕ ಮಹಾಕಾವ್ಯಗಳಲ್ಲಿ ಬಿತ್ತರವಾಗುವ ಪಾತ್ರಗಳು ಪ್ರಸ್ತುತ ಜನಮಾನಸದಲ್ಲಿ ಹೆಚ್ಚಿನ ಪ್ರಭಾವ ಬೀರುವೆ  ಎಂದು ಸದ್ಗುರು ಪ್ರದೀಪ್ ತಿಳಿಸಿದರು.

ಹೊಸದುರ್ಗ ನಗರದ ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಕಲಾವಿದರಿಂದ ದೇವಿಯ ಜಾತ್ರೆ ಪ್ರಯುಕ್ತ ನಡೆಯಲಿರುವ “ಕುರುಕ್ಷೇತ್ರ “ನಾಟಕದ ಬಿತ್ತಿಪತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ಪ್ರಸ್ತುತ ಧಾರಾವಾಹಿಗಳನ್ನ ನೋಡುವ ಜನರು ಹೆಚ್ಚಾಗಿದ್ದು ಧಾರಾವಾಹಿ ಮತ್ತು ಸಿನಿಮಾಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುವ ಪೌರಾಣಿಕ ನಾಟಕಗಳನ್ನ ನೋಡುವವರ ಸಂಖ್ಯೆ ಹೆಚ್ಚಾದಾಗ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ, ಮಹಾಭಾರತದಲ್ಲಿ ಕೌರವರು ಮತ್ತು ಪಾಂಡವರ ಕುರಿತಾದ ಪಾತ್ರಗಳು ಧರ್ಮ ಮತ್ತು ಅಧರ್ಮದ ಮೂಲವನ್ನ ಸಾರುತ್ತವೆ.

ಶ್ರೀ ಕೃಷ್ಣನ ಪಾತ್ರಧಾರಿಯಾಗಿ ಹೊಸದುರ್ಗದ ಹಿರಿಯ ಕಲಾವಿದರಾದ ಸುಬ್ಬಣ್ಣನವರು ನೂರಾರು ನಾಟಕಗಳಲ್ಲಿ ಅಭಿನಯಿಸಿ ಅತ್ಯಂತ ಜನಮನಣೆಗೆ ಪಾತ್ರರಾಗಿದ್ದಾರೆ.

ಸುಬ್ಬಣ್ಣನವರ ನೇತೃತ್ವದ   ಸ್ಥಳೀಯ ಹಿರಿಯ ಕಲಾವಿದರ ತಂಡ ಬರುವ ಏಳನೇ ತಾರೀಕು ಮಂಗಳವಾರದಂದು ಹೊಸದುರ್ಗದ ದೇವರ ದಾಸಿಮಯ್ಯ ಮಾರುಕಟ್ಟೆ ಆವರಣದಲ್ಲಿ ಕುರುಕ್ಷೇತ್ರ ನಾಟಕವನ್ನು ಅಭಿನಯಿಸುತ್ತಿರುವುದು ಅತ್ಯಂತ ಸಂತಸ ತಂದಿದೆ.

ಈ ನಾಟಕವನ್ನು ನೋಡಲು ನಗರದ ಜನರು ಕಾತುರದಿಂದ ಕಾಯುತ್ತಿದ್ದು ಬರುವ ತಾರೀಕು ವಿಶೇಷ ರಂಗ ಸಂಚಿಕೆಯಲ್ಲಿ ಕುರುಕ್ಷೇತ್ರ ಅರ್ಥಾತ್ ಶ್ರೀ ಕೃಷ್ಣ ಸಂಧಾನ ನಾಟಕ ಹೊಸದುರ್ಗ ನಗರದಲ್ಲಿ ಮೂಡಿ ಬರಲಿದ್ದು ಎಲ್ಲಾ ಸಂಗೀತ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಬದುಕಿಗೆ ಬೇಕಾದ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದರು.

ತಾಲೂಕು ಭೋವಿ ಸಮಾಜದ ಅಧ್ಯಕ್ಷ ಗುತ್ತಿಗೆದಾರ ಸುಬ್ಬಾಭೋವಿ ಮಾತನಾಡಿ ನನ್ನ ಜೀವನದಲ್ಲಿ ಶ್ರೀ ಕೃಷ್ಣನ ಪಾತ್ರಧಾರಿಯಾಗಿ ಹತ್ತಾರು ಬಾರಿ ಕುರುಕ್ಷೇತ್ರ ನಾಟಕದಲ್ಲಿ ಅಭಿನಯ ಮಾಡಿದ್ದೇನೆ. ಪೌರಾಣಿಕ ನಾಟಕಗಳು ಸಮಾಜದ ಅಂಕುಡೊಂಕು ಸಂಸ್ಕೃತ ಜೀವನ ನಡೆಸಲು ದಾರಿದೀಪವಾಗಿವೆ.

ಇದನ್ನೂ ಓದಿ: ಡಾ. ಬಿ. ರಾಜಶೇಖರಪ್ಪಗೆ “ಪ್ರೊ. ಶಿ.ಚೆ. ನಂದೀಮಠ ಪ್ರಶಸ್ತಿ”

ವರ್ಷಕ್ಕೆ ಒಮ್ಮೆಯಾದರೂ ಕುರುಕ್ಷೇತ್ರ ನಾಟಕದಲ್ಲಿ ಅಭಿನಯಿಸಲು ಕಾತುರದಿಂದ ಕಾಯುತ್ತಿರುತ್ತೇನೆ. ಶ್ರೀ ಕೃಷ್ಣ ಪಾತ್ರಧಾರಿ ಆಗಿ ಅಭಿನಯಿಸಿ ಜನರ ಪ್ರೀತಿಗೆ ಪಾತ್ರರಾಗಿರುವುದು ನನ್ನ ಜೀವಿತ ಅವಧಿಯ ಅಭಿವೃದ್ಧಿಯ ನೆನಪಾಗಿದೆ.

ಇದು ಇದೇ ಸಂದರ್ಭದಲ್ಲಿ ಕುರುಕ್ಷೇತ್ರ ನಾಟಕದ ಪಾತ್ರಧಾರಿಗಳಾದ ಮಾಜಿ ಪುರಸಭಾ ಸದಸ್ಯ ರಾಮಚಂದ್ರಪ್ಪ, ಗ್ರಾಪಂ ಸದಸ್ಯ ಲಂಕೆ ಹನುಮಂತಪ್ಪ. ಕಸಪ್ಪ ಮಾಜಿ ಅಧ್ಯಕ್ಷ ಧನಂಜಯ ಮೆಂಗಸಂದ್ರ, ಹಿನ್ನೆಲೆ ಗಾಯಕ ಬಸವರಾಜ್, ಶಿವರುದ್ರಮೂರ್ತಿ, ಗೋಲ್ಡನ್ ವಾಯ್ಸ್ ರಾಘು, ಗುರುಪ್ರಸಾದ್, ತುಂಬಿನಕೆರೆ ಬಸವರಾಜ್ ಇದ್ದರು.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

TAGGED:Chitradurga NewsDramaKannada Newskannada suddiMythical DramasNammajana.comPoster ReleaseSadhguruSadhguru Pradeepಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂನಾಟಕಪೋಸ್ಟರ್ ಬಿಡುಗಡೆಪೌರಾಣಿಕ ನಾಟಕಗಳುಸದ್ಗುರು ಪ್ರದೀಪ್
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಡಾ. ಬಿ. ರಾಜಶೇಖರಪ್ಪಗೆ “ಪ್ರೊ. ಶಿ.ಚೆ. ನಂದೀಮಠ ಪ್ರಶಸ್ತಿ”
Next Article ಚಿತ್ರದುರ್ಗದಲ್ಲಿ ಇವತ್ತು ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?