Chitradurga news |nammajana.com |28-5-2024
ನಮ್ಮಜನ.ಕಾಂ, ಚಳ್ಳಕೆರೆ: ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಸರ್ಕಾರ ಹಲವಾರು ರೀತಿಯ ನೂತನ ಔಷಧಗಳನ್ನು ಕಂಡುಹಿಡಿದು ಜಾರಿಗೆ ತಂದಿದ್ದರೂ ಇನ್ನೂ ಜನರು ಗಿಡಮೂಲಿಕೆ ಪದ್ದತಿಗೆ ಮಾರುಹೋಗಿರುವುದು ವಿಷಾದನೀಯ ಸಂಗತಿ, ಇಂತಹ ಗುಡಮೂಲಿಗೆಯ ಹಸಿರುಸೊಪ್ಪು ತಿಂದು ಯುವತಿಯೊಬ್ಬಳು ಮೃತಪಟ್ಟ ಘಟನೆ ಚಳ್ಳಕೆರೆ (challakere) ತಾಲೂಕಿನಲ್ಲಿ ವರದಿಯಾಗಿದೆ.
ಗಿಡಿಮೂಲಿ ಔಷಧಿ ಸೇವಿಸಿದ್ದು ಚಳ್ಳಕೆರೆ (challakere) ತಾಲೂಕಿನ ಗರ್ಲತ್ತು
ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಶ್ವೇತ(೨೦) ಎಂಬ ಯುವತಿ ಗ್ರಾಮಕ್ಕೆ ಹತ್ತಿರುವ ವಿರುವ ಚಳ್ಳಕೆರೆ (challakere) ತಾಲ್ಲೂಕಿನ ಗರ್ಲತ್ತು ಗ್ರಾಮಕ್ಕೆ ಆಗಮಿಸಿ ನನಗೆ ಧೀರ್ಘಕಾಲದಿಂದ ಜ್ವರಭಾದಿಸುತ್ತಿದ್ದು, ಜ್ವರ ನಿಯಂತ್ರಣಕ್ಕೆ ಹಸಿರು ಸೊಪ್ಪು ಸೇವನೆ ಮಾಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ತಾಯಿ ರತ್ನಮ್ಮಳೊಂದಿಗೆ ಆಗಮಿಸಿ ಹಸಿರು ಸೊಪ್ಪು ಸೇವಿಸಿದ್ದಾಳೆ.
ಆರೋಗ್ಯದ ಏರುಪೇರು ಆಗಿದ್ದು ಯಾವಾಗ? (challakere)
ಸೊಪ್ಪು ಸೇವಿಸಿದ ನಂತರ ಆರೋಗ್ಯದಲ್ಲಿ ದಿಢೀರನೆ ಏರುಪೇರು ಕಾಣಿಸಿದೆ ಅವಳನ್ನು ಚಳ್ಳಕೆರೆ (challakere) ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿರುತ್ತದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿರುತ್ತಾಳೆ. ಠಾಣಾಧಿಕಾರಿ ರಂಗನಾಥ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.