Chitradurga news|nammajana.com|26-6-2024
ನಮ್ಮಜನ.ಕಾಂ, ಚಿತ್ರದುರ್ಗ ಜೂ.26: ಜಿಲ್ಲಾ ಕೇಂದ್ರದ ರಸ್ತೆಗಳು ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದ್ದು, ಕಾನೂನು ಪ್ರಕಾರ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡಬೇಕು ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು (Chitradurga Road widening) ಎಂದು ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರಗಳನ್ನು ಅಭಿವೃದ್ದಿ ಮಾಡುವ ಜವಬ್ದಾರಿ ಅಧಿಕಾರಿಗಳ ಮೇಲಿದ್ದು ಯಾವುದೇ ರಸ್ತೆ ಮಾಡಬೇಕಾದರೆ ಮೊದಲು ರೂಪರೇಷೆ ತಯಾರಿಸಿಕೊಳ್ಳಬೇಕು. ಆದರೆ ಜಿಲ್ಲಾ ಕೇಂದ್ರದಲ್ಲಿ (Chitradurga Road widening) ಇದ್ಯಾವುದನ್ನು ಮಾಡದೆ, ಕಾನೂನಿನ ಸುತ್ತೋಲೆಯನ್ನು ಗಾಳಿಗೆ ತೂರಿ ಮನಬಂದಂತೆ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಕಿಡಿಕಾರಿದರು.
SBI ಸರ್ಕಲ್ ನಿಂದ ಬಸ್ ನಿಲ್ದಾಣಕ್ಕೆ ಅರ್ಧ ಗಂಟೆ ಬೇಕು: ಎಂ.ಚಂದ್ರಪ್ಪ
ಶಾಸಕ ಎಂ.ಚಂದ್ರಪ್ಪ ಮಾತನಾಡಿ SBI ಸರ್ಕಲ್ ನಿಂದ ಬಸ್ ನಿಲ್ದಾಣಕ್ಕೆ ಹೋಗಬೇಕಾದರೆ ಕನಿಷ್ಟ ಅರ್ಧ ಗಂಟೆ ಸಮಯ ಬೇಕಿದೆ. ಕಾರಣ ಅಷ್ಟೊಂದು ಚಿಕ್ಕದಾಗಿದೆ ರಸ್ತೆ. ಒಂದು ವಾಹನ ಹೋದರೆ, ಆ ವಾಹನ ಹೋಗುವವರೆಗೂ ಮತ್ತೊಂದು ವಾಹನ ಕಾಯುತ್ತಾ ನಿಲ್ಲಬೇಕಿದೆ. ಕಾನೂನು ಪ್ರಕಾರ ಪ್ರಮುಖ ರಸ್ತೆಗಳು ಇಂತಿಷ್ಟು ಅಗಲ ಇರಬೇಕು ಎಂದಿದೆ. ಆದರೆ ನಗರಸಭೆ ಅವರು ಯಾರದೋ ಮಾತನ್ನು ಕೇಳಿ ಆ ಕಾನೂನು ಸುತ್ತೋಲೆಯನ್ನೆ ಸುಟ್ಟು ಹಾಕಿದ್ದಾರೆ. ಇಂತಹವರಿಂದ ಜಿಲ್ಲೆಯ ಅಭಿವೃದ್ದಿ ಸಾಧ್ಯವೇ ಎಂದು ಕಿಡಿಕಾರಿದರು.
ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಂತೆ ಅಗಲೀಕರಣ ಮಾಡಿ
ಸರ್ಕಾರಿ ವಿಜ್ಞಾನ ಕಾಲೇಜು ಮುಂದಿರುವ ವಿಶಾಲವಾದ ರಸ್ತೆಯಷ್ಟೇ ಮುರುಘಾ ಮಠದ ವರೆಗೂ ರಸ್ತೆ ಇರಬೇಕು, ಆದರೆ ಆಧಿಕಾರಿಗಳು ಕೆಲವರ ಕಣ್ಣಿಗೆ ಬೆಣ್ಣೆ, ಕೆಲವರ ಕಣ್ಣಿಗೆ ಸುಣ್ಣ ಎಂಬಂತೆ ಕೆಲಸ ಮಾಡಿದ್ದಾರೆ. ಇದರಿಂದ ರಸ್ತೆಗಳು ಆಳಾಗಿವೆ ಎಂದರು.
ಡಿವೈಡರ್ ಹೊಡೆಯಲು ಹೇಳಿದರು ಹೊಡೆದಿಲ್ಲ: ವೀರೇಂದ್ರ ಪಪ್ಪಿ ಕಿಡಿ
ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ ರಸ್ತೆ ವಿಭಜಕಗಳನ್ನು (Chitradurga Road widening) ತೆರವುಗೊಳಿಸಿ ಎಂದು ಹೇಳಿ ಸಾಕಷ್ಟು ಸಮಯ ಆಗಿದ್ದರು ಒಂದು ಕಡೆ ಮಾತ್ರ ಡಿವೈಡರ್ ಹೊಡೆದು ಇನ್ನು ಹಲವೆಡೆ ಆಗೇಯೇ ಬಿಟ್ಟಿದ್ದಿರಾ, ಕಾರಣ ಹೇಳಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ | ಬ್ಲಾಸ್ಟ್ ಆಗಿದ್ದೇಕೆ? | Fridge Blast challakere
ಸಭೆಯಲ್ಲಿ ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಡಿ.ಟಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆಧಿತ್ಯ ಬಿಶ್ವಾಸ್, ಜಿಲ್ಲಾಧಿಕಾರಿ ವೇಂಕಟೇಶ್, ಜಿ.ಪಂ.ಸಿಇಓ ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಉಪಸ್ಥಿತರಿದ್ದರು.