Chitradurga news|nammajana.com|2-7-2024
ನಮ್ಮಜನ.ಕಾಂ, ಚಿತ್ರದುರ್ಗ: ಕಳೆದ ಬಾರಿ ಚುನಾವಣೆ ಸಮಯದಲ್ಲಿ ಚಿತ್ರದುರ್ಗದಲ್ಲಿ ಕೇಂದ್ರ ಸರ್ಕಾರದಿಂದ ಮದಕರಿನಾಯಕ ಥೀಮ್ ಪಾರ್ಕ (Madakarinayaka Theme Park) ನಿರ್ಮಾಣ ಮಾಡುತ್ತೇವೆ ಎಂದಿದ್ದರು ಅದರಂತೆ ಈ ಬಾರಿಯ ನೂತನ ಸಂಸದರು ಮದಕರಿ ಥೀಮ್ ಪಾರ್ಕ್ನ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದರೆ ನಮ್ಮ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಮದಕರಿ ಪಟ್ಟಾಭಿಷೇಕ (Madakarinayaka Theme Park) ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಮದಕರಿ ನಾಯಕ ವಂಶಸ್ಥರು ಪಾಳೇಗಾರರು ಇರುವ ಈ ಜಾಗದಲ್ಲಿ ಮದಕರಿನಾಯಕ ಥೀಮ್ ಪಾರ್ಕನ್ನು ಮಾಡುತ್ತೇವೆ ಎಂದಿದ್ದರು.
ಇದನ್ನೂ ಓದಿ: Health Tips: ಹೃದಯ ರೋಗವನ್ನು ರಕ್ಷಿಸಲು ಆಹಾರಗಳು
ಅದು ಉತ್ತಮ ಬೆಳವಣಿಗೆ ನಾವು ಏಕೆ ಮಾಡಿಲ್ಲ ಅಂತ ರಾಜಕೀಯ ಮಾಡಲ್ಲ, ಅಭಿವೃದ್ಧಿ ವಿಚಾರಕ್ಕೆ ಸಹಕಾರ ನೀಡುತ್ತೇವೆ. ನೂತನ ಸಂಸದರಾದ ಗೋವಿಂದ ಕಾರಜೋಳ ಅವರು ಸಾಕಷ್ಟು ಅನುಭವ ಹೊಂದಿರುವ ಹಿರಿಯ ರಾಜಕಾರಣಿಯಾಗಿದ್ದು ಅವರು ಮದಕರಿ ಥೀಮ್ ಪಾರ್ಕ್ (Madakarinayaka Theme Park) ನಿರ್ಮಾಣಕ್ಕೆ ಒತ್ತು ನೀಡಿ ಮಂಜೂರು ಮಾಡಿಸಿಕೊಂಡು ಬಂದರೆ ಸಂಸದರಿಗೆ ಪಕ್ಷಭೇದ ಮರೆತು ಜಿಲ್ಲೆಯ ಸಚಿವರು ಮತ್ತು ಶಾಸಕರು ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ, ನೇರ ರೈಲ್ವೆ ಯೋಜನೆ ಕಾಮಗಾರಿ ತ್ವರಿತವಾಗಿ: ಸಚಿವ ಡಿ.ಸುಧಾಕರ್ | Bhadra Upper Bank
ಮದಕರಿನಾಯಕ ಪಟ್ಟಾಭಿಷೇಕ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರವಾಗಿದೆ. ಚಿತ್ರದುರ್ಗವನ್ನು ಆಳಿದ ನಾಯಕ ರಲ್ಲಿ ಮದಕರಿನಾಯಕ ಪ್ರಮುಖವಾಗಿದ್ದಾನೆ. ಮದಕರಿ ನಾಯಕನ ಆಳ್ವಿಕೆಯಲ್ಲಿ ಚಿತ್ರದುರ್ಗ ಸಾಕಷ್ಟು ಅಭಿವೃದ್ಧಿ ಹೊಂದಿದೆ.
ಮದಕರಿನಾಯಕನ ಕಾಲದಲ್ಲಿ ಕೆರೆ ಕಟ್ಟೆಗಳು, ಹೊಂಡಗಳು, (Madakarinayaka Theme Park) ಪುಷ್ಕರಣಿ ನಿರ್ಮಾಣ ಮೂಲಕ ಸರ್ವ ಜನಾಂಗದ ಹಿತ ಕಾಯುವ ಕೆಲಸವನ್ನು ಮದಕರಿನಾಯಕ ಮಾಡಿದ್ದಾರೆ. ಹೊರಗಿನಿಂದ ಬೇರೆಯವರು ಬಂದರೂ ಅವರನ್ನು ಹೊಡೆದೂಡಿಸಿ ತನ್ನರಾಜ್ಯವನ್ನು ಉಳಿಸಿಕೊಂಡಿದ್ದಾನೆ, ತಾಯಿ ಗಂಡೋಬಳವ್ವನಾಗತಿ ಆತ ಪ್ರಾಬಲ್ಯಕ್ಕೆ ಬರುವವರೆಗೂ ಅಧಿಕಾರವನ್ನು ನಡೆಸಿ, ಆತನನ್ನು ಉತ್ತಮ ರಾಜನನ್ನಾಗಿ ಮಾಡುವ ಉತ್ತಮ ಮೂಲಕ ಈ ಭಾಗಕ್ಕೆ ಉತ್ತಮ ರಾಜನನ್ನು ನೀಡಿದ ಕೀರ್ತಿ ಒಬಳವ್ವ ನಾಗತಿಗೆ ಸಲ್ಲುತ್ತದೆ. ಸರ್ಕಾರ ಮತ್ತು ನಾನು ನಾಯಕ ಸಮಾಜದ ಜೊತೆ ಇರುತ್ತದೆ ಎಂದು ಹೇಳಿದರು.