Chitradurga news|nammajana.com| 19-10-2024
ನಮ್ಮಜನ. ಚಳ್ಳಕೆರೆ: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಏಕೈಕ ಪುತ್ರಿ ಡಾ.ಟಿ.ಆರ್.ಸುಚಿತ್ರಾ, ಡಾ.ಜಿ.ವರುಣ ಮದುವೆಗೆ ಬುಡಕಟ್ಟು ಸಂಸ್ಕೃತಿಯ ತವರೂರು ಎಂಬ ಖ್ಯಾತಿಯ ಚಳ್ಳಕೆರೆ ನಗರದ ಹೆಚ್ ಪಿಸಿಸಿ ಕ್ರೀಡಾಂಗಣದಲ್ಲಿ ಅತ್ಯಂತ (Daughter marriage) ಅದ್ದೂರಿಯಾಗಿ ಮದುವೆ ಸೆಟ್ ಹಾಕಿದ್ದು ವಿವಾಹ ನಡೆಸಲು ಶಾಸಕ ರಘುಮೂರ್ತಿ ಕುಟುಂಬ ಸಜ್ಜಾಗಿದೆ.
ಚಳ್ಳಕೆರೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಮೂರು ಬಾರಿ ಶಾಸಕರಾಗಿರುವ ರಘುಮೂರ್ತಿ ಅವರು ತಮ್ಮ ಪುತ್ರಿ ವಿವಾಹಕ್ಕೆ ಜಿಲ್ಲೆಯ ಜನರನ್ನು ಆಹ್ವಾನಿಸಿ ತನ್ನ ಸ್ವ ಕ್ಷೇತದಲ್ಲಿ ಹಮ್ಮಿಕೊಂಡಿದ್ದು ಇಡೀ ಚಳ್ಳಕೆರೆ ಅಲಂಕಾರದಿಂದ ಕೂಡಿದ್ದು ಹಬ್ಬದ ವಾತವರಣ ಮನೆ ಮಾಡಿದೆ.
ಚಳ್ಳಕೆರೆ ನಗರದಲ್ಲಿ ಹಬ್ಬದ ವಾತವರಣ
ಶಾಸಕ ಪುತ್ರಿ ವಿವಾಹ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರದಲ್ಲಿ ಹಬ್ಬದ ವಾತವರಣ ಸೃಷ್ಟಿಯಾಗಿದೆ. ಚಿತ್ರದುರ್ಗ ರಸ್ತೆ ಅಲಂಕಾರಿಕ ದೀಪಗಳಿಂದ ಕಂಗೊಳಿಸುತ್ತಿದೆ. ವೃತ್ತಗಳಿಗೆ ಅಲಂಕಾರ ಸಹ ಮಾಡಲಾಗಿದೆ. ಮದುವೆ ಸೆಟ್ ಅಂತೂ ಕಣ್ಮನ ಸೆಳೆಯುತ್ತಿದೆ.
ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಾಣವಾಗಿರುವ ಸೆಟ್ ಜನರನ್ನು ಕೈ ಬಿಸಿ ಕರೆಯುತ್ತಿದೆ. ಅದು ಮೈದಾನ (Daughter marriage) ಎಂಬುದಕ್ಕಿಂದ ಬೃಹತ್ ದೇವಸ್ಥಾನದಲ್ಲಿ ಮದುವೆ ನಡೆಯುತ್ತದೆ ಎನ್ನುವ ರೀತಿಯಲ್ಲಿ ಅದ್ಬುತವಾಗಿ ಮದುವೆ ಮಂಟಪ್ಪ ಸಿದ್ದಗೊಂಡಿದೆ.
ಮದುವಗೆ ಸಿಎಂ ಆಗಮನದ ಹಿನ್ನಲೆ ಎಲ್ಲಾ ವೃತ್ತಗಳಲ್ಲಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಫೋಟೋ ಮತ್ತು ಶಾಸಕ ರಘುಮೂರ್ತಿ ಅಭಿಮಾನಿಗಳು ರಘುಮೂರ್ತಿ ಕುಟುಂಬದ ಜೊತೆ ತಮ್ಮ ಫೋಟೋ ಹಾಕಿಸಿಕೊಂಡಿರುವ ಬ್ಯಾನರ್ ಸೇರಿದಂತೆ ಆಗಮಿಸುವ ಎಲ್ಲರಿಗೂ ಸ್ವಾಗತಕೋರುವ ಬ್ಯಾನರ್‌ಗಳು ನಗರದಾದ್ಯಂತ ರಾರಾಜಿಸುತ್ತವೆ.
ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ತಮ್ಮದೇಯಾದ ರೀತಿಯಲ್ಲಿ ವ್ಯವಸ್ಥೆ (Daughter marriage) ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನರೂ ಸಹ ಶಾಸಕ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಇದ್ದಾರೆ.
ಲಕ್ಷಾಂತರ ಜನ ಮದುವೆಗೆ ಆಗಮನ
ವಿವಾಹ ಕಾರ್ಯಕ್ಕೆ ಆಗಮಿಸುವ ಲಕ್ಷಾಂತರ ಜನರಿಗೆ ಬೋಜನವೂ ಸೇರಿದಂತೆ ಯಾವುದೇ ಅವ್ಯವಸ್ಥೆಯಾಗದಂತೆ ಎಲ್ಲಾ ಸಿದ್ದತೆಗಳನ್ನು ಶಾಸಕ ಟಿ.ರಘುಮೂರ್ತಿ ವಿಕ್ಷಣೆ ಮಾಡಿದ್ದು ಸಕಲ ಸಿದ್ದತೆ ಭರದಿಂದ ಸಾಗುತ್ತಿದ್ದು ಪಕ್ಷದ ಕಾರ್ಯಕರ್ತರು, (Daughter marriage) ಮುಖಂಡರು ಈಗಾಗಲೇ ಹಲವಾರು ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆ.
ಕ್ಷೇತ್ರದ ಪ್ರತಿಗ್ರಾಮಕ್ಕೆ ಸಹ ವಿವಾಹದ ಆಹ್ವಾನದ ಪತ್ರಿಕೆಗಳನ್ನು ಕಳಿಸಿ ಎಲ್ಲರನ್ನೂ ಆಹ್ವಾನಿಸಿದೆ.
ವಿಶೇಷವಾದ ಬೃಹತ್ ಜರ್ಮನ್ ಟೆಂಟ್ ನಿರ್ಮಾಣ :
ಮಳೆ ಬಂದರು ನೆನೆಯದ ರೀತಿಯಲ್ಲಿ ಜರ್ಮನ್ ಟೆಂಟ್ ಹಾಕಲಾಗಿದೆ. ಮದುವೆಗೆ ಆಗಮಿಸುವ ವಿಐಪಿ, ವಿವಿಐಪಿಗಳು ನೇರವಾಗಿ ವಧುವರರನ್ನು ಆಶೀರ್ವದಿಸಿ ಮದುವೆ ಮಂಟಪದ ಹಿಂಭಾಗದಲ್ಲಿ ನಿರ್ಮಿಸಿರುವ ಊಟದ ಹಾಲ್‌ಗೆ ತೆರಳಬಹುದಾಗಿದೆ.
ಸುಮಾರು 3 ಸಾವಿರಕ್ಕೂ ಹೆಚ್ಚು ವಿಐಪಿಗಳು ಒಂದೇ ಸಾರಿ ಬೋಜನ ಮಾಡುವ ವ್ಯವಸ್ಥೆ ಮಾಡಲಾಗಿದೆ.
5 ಸಾವಿರ ಜನಕ್ಕೆ ಕುಳಿತು ಊಟ ಮಾಟಲು ಮತ್ತು 6 ಸಾವಿರ ಜನಕ್ಕೆ 27 ಬಫೇ ಕೌಂಟರ್
ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಎರಡು ಜರ್ಮನ್ ಟೆಂಟ್ ನಿರ್ಮಿಸಿದ್ದು, ಒಂದರಲ್ಲಿ ಸುಮಾರು 5 ಸಾವಿರದಂತೆ ಒಟ್ಟು 10 ಸಾವಿರ ಜನರು ಊಟದಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕೆ ಹೊಂದಿಕೊಂಡಂತೆ ಹೆಚ್ಚುವರಿಯಾಗಿ ಎರಡು ಸೆಟ್ (Daughter marriage) ನಿರ್ಮಿಸಿದ್ದು ಅಲ್ಲೂ ಸಹ ಒಂದೇ ಹಂತದಲ್ಲಿ 6 ಸಾವಿರ ಜನರು ಭಫೇ ಸ್ವೀಕರಿಸಬಹುದು.
ಇದನ್ನೂ ಓದಿ: ಸೊಸೆಯರು ಭರ್ಜರಿ ಡ್ಯಾನ್ಸ್ ಮಾಡುವ ವಿಶಿಷ್ಟ ಹಬ್ಬ | Dasara
ಚಳ್ಳಕೆರೆತಾಲ್ಲೂಕಿನದಲ್ಲಿ ಈ ಹಿಂದೆ ಈ ಕ್ಷೇತ್ರದ ಮಾಜಿ ಸಚಿವ ತಿಪ್ಪೇಸ್ವಾಮಿ, ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ತಮ್ಮ ಪುತ್ರಿಯರ ವಿವಾಹವನ್ನು ಇದೇ ಸ್ಥಳದಲ್ಲಿ ಮಾಡಿದ್ದರು. ಈಗ ಹ್ಯಾಟ್ರಿಕ್ ಶಾಸಕರೂ ಸಹ ತಮ್ಮ ಪುತ್ರಿ ವಿವಾಹ ಇಲ್ಲೆ (Daughter marriage) ಮಾಡುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.