
Chitradurga news|nammajana.com|26-11-2024
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿಬಿ) ಗೆ ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರನ್ನು ಡಿಸಿಸಿ ಬ್ಯಾಂಕ್ ಗೆ ಸರ್ಕಾರ ನಾಮ ನಿರ್ದೇಶನ ಸದಸ್ಯರಾಗಿ (Chitradurga DCC Bank) ಆಯ್ಕೆ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ರಾಜಕೀಯ ಕಾರಣಕ್ಕೆ ಸ್ವಪಕ್ಷೀಯ ಶಾಸಕನನ್ನೇ ಬ್ಯಾಂಕ್ ಆಡಳಿತದಿಂದ ದೂರವಿಟ್ಟಿದ್ದಾರೆ ಮತ್ತು ನಾಮ ನಿರ್ದೇಶನ ಸ್ಥಾನಕ್ಕೂ ಸಹ ಅವಕಾಶ ಇರಬಾರದು ಎಂಬ ಕಾರಣಕ್ಕೆ ಸಚಿವ ಸುಧಾಕರ್ ಅಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚಳ್ಳಕೆರೆ ಸಿ. ವೀರಭದ್ರಬಾಬು ಅವರನ್ನು ಸರ್ಕಾರದಿಂದ ನೇಮಕ ಮಾಡಿಸಿಕೊಂಡು ಬಂದಿದ್ದರು. ಆದರೆ ಈಗ ಸುಧಾಕರ್ ಶಿಷ್ಯನ ನಾಮ ನಿರ್ದೇಶನ ರದ್ದು ಮಾಡಿ ಆ ಸ್ಥಾನಕ್ಕೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರನ್ನು (Chitradurga DCC Bank) ನಾಮನಿರ್ದೇಶನ ಸದಸ್ಯರಾಗಿ ಆದೇಶ ಮಾಡುವ ಮೂಲಕ ಸಚಿವ ಸುಧಾಕರ್ ಸೆಡ್ಡು ಒಡೆದು ಶಾಸಕ ರಘುಮೂರ್ತಿ ಡಿಸಿಸಿ ಬ್ಯಾಂಕ್ ಪ್ರವೇಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವ ಪಕ್ಷದಿಂದ ಆರೋಪ ಕೇಳಿ ಬಂದಿತ್ತು
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಸುಧಾಕರ್ ಮತ್ತೆ ಬ್ಯಾಂಕ್ ಆಡಳಿತವನ್ನು ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಪ್ರತಿಸ್ಪರ್ಧಿಗಳನ್ನು ಹಣಿಯುವ ಉದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ತಂದು ಅನರ್ಹತೆ ಅಸ್ತ್ರ ಪ್ರಯೋಗಿಸುವ ಜೊತೆಗೆ ತನ್ನದೇ ಪಕ್ಷದ ಶಾಸಕ ಟಿ.ರಘುಮೂರ್ತಿ ಅವರನ್ನು ದೂರವಿಡುವಲ್ಲಿ ಈ ಅನರ್ಹತೆ ಕೆಲಸ ಮಾಡಿತ್ತು. ಈ ಬೆಳವಣಿಗೆಯಿಂದ ಸ್ವಪಕ್ಷೀಯರು ಮತ್ತು ಹಿಂದುಳಿದ ವರ್ಗದ ನಾಯಕ ಟಿ.ರಘುಮೂರ್ತಿ ತುಳಿಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಕಳೆದ ಬಾರಿಯೂ ಸಹ ರಘುಮೂರ್ತಿ ಅವರನ್ನು ಡಿಸಿಸಿ ಬ್ಯಾಂಕ್ ನಿಂದ ದೂರವಿಡಲು ಇಂಥದ್ದೇ ಪ್ರಯತ್ನ ಮಾಡಿದ್ದರು. ಆದರೂ ರಘುಮೂರ್ತಿ ಬ್ಯಾಂಕ್ ನಿರ್ದೇಶಕರಾಗುವಲ್ಲಿ ಯಶಸ್ವಿಯಾಗಿದ್ದರು’ ಎಂಬ ಮಾತು ಸಹ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಒಡ್ಡುವ ಆತಂಕಕ್ಕೆ ಅನರ್ಹತೆ ಅಸ್ತ್ರ ಆರೋಪ
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಎರಡನೇ ಬಾರಿ ಡಿಸಿಸಿ ಬ್ಯಾಂಕ್ ಪ್ರವೇಶಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಬಹುದು ಎಂಬ ಕಾರಣಕ್ಕೆ ಸಚಿವ ಸುಧಾಕರ್ ಅನರ್ಹತೆ ಅಸ್ತ್ರದ (Chitradurga DCC Bank) ಮೂಲಕ ರಘುಮೂರ್ತಿ ಅವರನ್ನು ನಿರ್ದೇಶಕ ಸ್ಥಾನದಿಂದ ದೂರವಿಡಲು ಷಡ್ಯಂತ್ರ ರೂಪಸಿದ್ದರು ಎಂಬ ಮಾತು ಕೋಟೆ ನಾಡಿನ ರಾಜಕೀಯ ವಲಯದಲ್ಲಿ ಮರ್ದನಿಸಿದ್ದವು.

ಸಿಎಂ ಮತ್ತು ಡಿಸಿಎಂ ಅಂಗಳಕ್ಕೆ ಡಿಸಿಸಿ ಬ್ಯಾಂಕ್ ಚುನಾವಣಾ ಮಾಹಿತಿ
ರಾಜಕೀಯ ವಲಯದಲ್ಲಿ ಸ್ವ ಪಕ್ಷದ ನಾಯಕರಲ್ಲಿ ಇಂತಹ ಬೆಳವಣಿಗೆಯಿಂದ ರಾಜ್ಯ ನಾಯಕರು ಸಹ ಎಂಟ್ರಿಯಾಗಿ ಸ್ವಲ್ಪ ತಿಳಿ ಮಾಡಿದ್ದರು. ಸಿಎಂ ಮತ್ತು ಡಿಸಿಎಂ ಅವರು ಸಹ ಸಚಿವ ಸುಧಾಕರ್ ಅವರಿಗೆ ಕಿವಿ ಮಾತು ಹೇಳಿದ್ದರು. ಮುಡಾ ಹಗರಣದ ನಡುವೆ ಸ್ವಲ್ಪ ತಣ್ಣಗಿದ್ದ ಡಿಸಿಸಿ ಬ್ಯಾಂಕ್ ಈಗ ಮರಳಿ ಪಡೆದುಕೊಂಡಿದ್ದು ಸಿಎಂ ಮತ್ತು ಡಿಸಿಎಂ ಸಚಿವ ಡಿ.ಸುಧಾಕರ್ ಶಿಷ್ಯನ ಡಿಸಿಸಿ ಬ್ಯಾಂಕ್ ನಾಮ ನಿರ್ದೇಶನ ಸ್ಥಾನ ರದ್ದುಗೊಳಿಸಿ ಪಕ್ಷ ನಿಷ್ಠೆ, ಸ್ವಾಮಿ ನಿಷ್ಠೆ, ಸಂಘಟನೆ ಚತುರ, ಪಕ್ಷದ ಶಿಸ್ತಿನ (Chitradurga DCC Bank) ಸಿಪಾಯಿಯಂತೆ ಕೆಲಸ ಮಾಡುವ ಶಾಸಕ ಟಿ.ರಘುಮೂರ್ತಿ ಅವರನ್ನು ಸರ್ಕಾರದಿಂದ ಡಿಸಿಸಿ ಬ್ಯಾಂಕ್ ಗೆ ನಾಮನಿರ್ದೇಶನ ಮಾಡಿ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕೋಟೆ ನಾಡಿನಲ್ಲಿ ಹೊಸ ರಾಜಕೀಯಕ್ಕೆ ನಾಂದಿಯಾಡಿದೆ.
ಇದನ್ನೂ ಓದಿ: ವಾಣಿ ವಿಲಾಸ ಸಾಗರಕ್ಕೆ 462 ಕ್ಯೂಸೆಕ್ಸ್ ನೀರು | 26 ,ನವೆಂಬರ್ 2024 | ಎಷ್ಟಿದೆ ನೀರಿನ ಮಟ್ಟ | |Vani Vilasa Sagara Dam
