Chitradurga news|nammajana.com|01-12-2024
ನಮ್ಮಜನ.ಕಾಂ, ಚಿತ್ರದುರ್ಗ: ಕೋಟೆ ನಾಡು ಎಂಬ ಖ್ಯಾತಿ ಪಡೆದಿದ್ದರು ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಹಿಂದುಳಿದಂತೆ (Real estate) ಕಾಣುತ್ತಿತ್ತು. ಈಗ ಸ್ವಲ್ಪ ಅಭಿವೃದ್ಧಿ ಹೊಂದುತ್ತಿರುವ ನಗರ ಎಂಬ ಮಾತು ಜಿಲ್ಲೆಯಲ್ಲಿ ಕೇಳುತ್ತಿರುವಾಗಲೇ ನಗರದಲ್ಲೂ ರಿಯಲ್ ಎಸ್ಟೇಟ್ ಕಾವು ಜೋರಾಗಿದ್ದು ಸೈಟ್ ಗಳ ಮಾರಟ ಮತ್ತು ಜಮೀನು ಮಾರಟ ತುರುಸಿನಿಂದ ಕೂಡಿದೆ.
ಹಲವು ದಶಕಗಳ ಕಾಲ ಚಿತ್ರದುರ್ಗ ನಗರ ಎತ್ತ ರೌಂಡ್ ಹಾಕಿದರು ಕೇವಲ 2-3 ಮೂರು ಕಿಲೋ ಮೀಟರ್ ಮಾತ್ರವಿತ್ತು. ಈಗಲೂ ಅಧಿಕೃತವಾಗಿ ನಗರ ವ್ಯಾಪ್ತಿ ಸ್ವಲ್ಪ ಚಾಚಿಕೊಂಡಿದೆ. ಈ ಮೊದಲ ಧವಳಗಿರಿ ಬಡಾವಣೆ, (Real estate) ಚೋಳಗುಡ್ಡ ವ್ಯಾಪ್ತಿ ಅಷ್ಟು ಪ್ರಮಾಣದಲ್ಲಿ ವಿಸ್ತರಿಸಿರಲಿಲ್ಲ ಆದರೆ ಆ ಭಾಗವೇ ಮಾಳಪ್ಪನಹಟ್ಟಿ ಮುಟ್ಟಿ ಕಾವಡಿಗರಹಟ್ಟಿ ತಲುಪಿದ್ದು ಹೆಚ್ಚು ಕಡಿಮೆ ಮಾಳಪ್ಪನಹಟ್ಟಿ ನಗರಕ್ಕೆ ಸೇರುವುದರಲ್ಲಿ ಅನುಮಾನವಿಲ್ಲ ಎಂಬಂತೆ ಬೆಳೆದು ನಿಂತಿದೆ.

ವಿಸ್ತಾರ ಹೆಚ್ಚಿಸಿದ ಹೊಸ ನಿವೇಶನ ಬಡವಾಣೆಗಳು
ನಿವೇಶನ ಅಭಿವೃದ್ಧಿ ಚಟುವಟಿಕೆಗಳು ಏಳೆಂಟು ಕಿಮೀ ವ್ಯಾಪ್ತಿಯ ತನಕ ಹಬ್ಬಿವಿವೆ. ಅದರಲ್ಲೂ ನೂತನ ಹೈವೇ ಬೈಪಾಸ್ ಮತ್ತು ರಿಂಗ್ ರೋಡ್ ಆದ ನಂತರ ಸುತ್ತಲಿನ ಭೂಮಿ ಖರೀದಿ, ಲೇ ಔಟ್ ಅಭಿವೃದ್ಧಿಗೆ ಹೊಸ ಸ್ಪರ್ಶ ಪಡೆದುಕೊಂಡಿದೆ.
ಚಿತ್ರದುರ್ಗ ನಗರದ ಬೆರಳೆಣಿಕೆಯಷ್ಟು ಡೆವಲಪರ್ ಹೆಸರುಗಳು ಮಾತ್ರ ದುರ್ಗದಲ್ಲಿ ಕೇಳುತ್ತಿತ್ತು. ಆದರೆ ಈಗ ಪಕ್ಕದ ದಾವಣಗೆರೆ, ಬಳ್ಳಾರಿ, ತುಮಕೂರು, ಚಿಕ್ಕಮಗಳೂರು, ಸೇರಿ ರಾಜಧಾನಿ ಬೆಂಗಳೂರುನಿಂದ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಖರೀದಿ, ಲೇಔಟ್ ಅಭಿವೃದ್ಧಿಗೆ ಹೂಡಿಕೆ ಮಾಡುತ್ತಿದ್ದಾರೆ.
ಇದರ ಪರಿಣಾಮ ಈ ಹಿಂದೆ ಲಕ್ಷಗಳನ್ನು ಮೀರದ ಜಮೀನುಗಳ ಬೆಲೆ ಈಗ ಕನಿಷ್ಟ 1 ಕೋಟಿಯಿಂದ 2-3 ಕೋಟಿಯ ತನಕ ಏರಿಕೆ ದಾರಿ ಹಿಡಿದಿದ್ದು ಭರ್ಜರಿ ಡಿಮ್ಯಾಂಡ್ ಬಂದಿದೆ.
ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಸಹಾ ಸುತ್ತಲಿನ ಏಳು ಪಂಚಾಯಿತಿ ವ್ಯಾಪ್ತಿಯ ತನಕ ಹೊಸ ಮಾಸ್ಟರ್ ಪ್ಲಾನ್ ರೂಪಿಸಿ, ಅನುಮೋದನೆಗಾಗಿ ಕಳುಹಿಸಿದೆ. ಈಗಾಗಲೇ ಪರೋಕ್ಷವಾಗಿ ವಿಸ್ತರಣೆ ಆಗುತ್ತಿರುವ ಚಿತ್ರದುರ್ಗ ನಗರಕ್ಕೆ ಈ ಮಾಸ್ಟರ್ ಪ್ಲಾನ್ ಹೊಸ ದುರ್ಗಕ್ಕೆ ನಾಂದಿಯಾಡಲಿದೆ.
ಚಿತ್ರದುರ್ಗ ನಗರ ಅಂಗೈಯಷ್ಟಿದ್ದ ದುರ್ಗ ಈಗ ಅಪ್ಪಿಕೊಳ್ಳವಷ್ಟು ಮಟ್ಟಕ್ಕೆ ಬೆಳೆಯುತ್ತಿರುವ ಪರಿಣಾಮವಾಗಿ ನಿವೇಶನ ಬೆಲೆ ಚಿತ್ರದುರ್ಗ ನಗರದಲ್ಲಿ ಕನಿಷ್ಟ ದರ ಎರಡೂವರೆ ಸಾವಿರ ಇದ್ದರೆ, ಹೊರ ವಲಯದಲ್ಲಿ ಒಂದು ಸಾವಿರದಿಂಸ ಒಂದುವರೆ ಸಾವಿರದ ತನಕ ಹೆಚ್ಚಳವಾಗಿದೆ. ಹೊಸ ಏರಿಯಾದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಿವೇಶನ ಬಡಾವಣೆಗಳಲ್ಲಿ ಹೂಡಿಕೆದಾರರ ಸಂಖ್ಯೆ ಸಹ ಹೆಚ್ಚಾಗಿರುವುದು ಸಹ ಬೆಲೆ ಏರಿಕೆಗೆ ಕಾರಣವಿರುಬಹದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹಿಂದುಳಿದ ಹಳ್ಳಿಗಳನ್ನು ಸೇರಿಸಿ ಪುರಸಭೆ ಮಾಡಿರುವವರಿಗೆ ದೂರದೃಷ್ಟಿಯಿಲ್ಲ : ಹೆಚ್.ಆಂಜನೇಯ | Holalkere
ನಿವೇಶನ ಅಭಿವೃದ್ಧಿ ಎಲ್ಲೆಲ್ಲಿ?
- ಚಳ್ಳಕೆರೆ ಟೋಲ್‌ಗೇಟ್‌ನಿಂದ ಮದಕರಿಪುರವರೆಗೆ ಎರಡು ಬದಿಗಳಲ್ಲಿ ಲೇಔಟ್ ಅಭಿವೃದ್ಧಿ, ಗೃಹ ನಿರ್ಮಾಣ ಬಹುತೇಕ ಅಂತಿಮ ಹಂತದಲ್ಲಿದೆ.
- ಕನಕ ವೃತ್ತದಿಂದ ಮಾಳಪ್ಪನಹಟ್ಟಿ, ಮುರುಘಾ ಮಠ, ಭೀಮಸಮುದ್ರ ಕಡೆ ಹಬ್ಬಿದೆ
- ಹೊಳಲ್ಕೆರೆ ರಸ್ತೆಯ ಎಸ್ ಜೆಎಂ ಕಾಲೇಜಿನಿಂದ ಈರಜ್ಜನಹಟ್ಟಿ, ಜಾನಕೊಂಡ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ನಿವೇಶನ ಅಭಿವೃದ್ದಿ ಕಾರ್ಯ ನಡೆಯುತ್ತಿದೆ.
- ಚಿತ್ರದುರ್ಗದ ಚಳ್ಳಕೆರೆ ಗೇಟ್ ನಿಂದ ಬೆಂಗಳೂರು ಹೆದ್ದಾರಿಯ ಕುಂಚಿಗನಾಳ್, ಡಿ.ಎಸ್.ಹಳ್ಳಿ, ಕ್ಯಾದಿಗ್ಗೆರೆವರೆಗೆ ನಿವೇಶನ ಒಂದಿಷ್ಟು ಪೂರ್ಣಗೊಂಡಿದ್ದು ಹಲವು ಕಡೆ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ.
- ಹೊಸಪೇಟೆ ಮಾರ್ಗದಲ್ಲಿ ಪಿಳ್ಲೇಕೆರೆನಹಳ್ಳಿ, ಮಲ್ಲಾಪುರ, ಗುಡ್ಡದ ರಂಗವ್ವನಹಳ್ಳಿವರೆಗೆ ನಿವೇಶನಗಳು ಅಭಿವೃದ್ಧಿ ಆಗಿವೆ.
- ತುರುವನೂರು ರಸ್ತೆಯ ಬ್ಯಾಂಕ್ ಕಾಲೋನಿಯಿಂದ ಗೋನೂರು ಗ್ರಾಮದ ತನಕ, ಮೆದೇಹಳ್ಳಿಯಿಂದ ತಮಟಕಲ್ಲು ಗ್ರಾಮದ ತನಕ ನಿವೇಶನ ಅಭಿವೃದ್ಧಿಯ ನೀಲನಕ್ಷೆಗಳು ತಯಾರಾಗುತ್ತಿವೆ.
ಇದನ್ನೂ ಓದಿ: ಚಿತ್ರದುರ್ಗ ವೈದ್ಯಕೀಯ ಕಾಲೇಜು: ಬೋಧಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Instructor post
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252