Chitradurga news |nammajana.com|6-12-2024
ನಮ್ಮಜನ.ಕಾಂ, ಚಿತ್ರದುರ್ಗ: ಬ್ಯಾಂಕ್‌ವೊಂದರಿಂದ 29.5 ಲಕ್ಷ ರೂ. ವಂಚನೆ ಆಗಿದ್ದು, ಬಡ್ಡಿ ಸಮೇತ ಹಣ (Bank fraud) ಹಿಂದಿರುಗಿಸದಿದ್ದರೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಚಳ್ಳಕೆರೆ ತಾಲೂಕಿನ ನಿವಾಸಿ ಸೈಯದ್ ಕರೀಂ ಎಚ್ಚರಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಳಕು ಗ್ರಾಮಕ್ಕೆ ಸೇರಿದ 18 ಗುಂಟೆ ಜಮೀನು ಸಂಬಂಧ ಬ್ಯಾಂಕ್ 2023ರಲ್ಲಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು, (Bank fraud) 29.5 ಲಕ್ಷ ರೂ.ಗೆ ಕೂಗಿ ಪಡೆಯಲಾಯಿತು. ಆದರೆ, ಅದರ ಮಾಲೀಕತ್ವ ಈವರೆಗೂ ನನಗೆ ಸಿಕ್ಕಿಲ್ಲ ಎಂದು ದೂರಿದರು.

ಸಾಲ ನೀಡಬೇಕಾದವರು ಬ್ಯಾಂಕ್‌ಗೆ ಹಣ ಹಿಂದಿರುಗಿಸಿಲ್ಲ. ಹೀಗಾಗಿ ಜಮೀನನ್ನು ಹರಾಜು ಮೂಲಕ ಯಾರು ಬೇಕಾದರೂ ಪಡೆಯಬಹುದೆಂಬ ಬ್ಯಾಂಕಿನ ಸೂಚನೆ ಮೇರೆಗೆ ಪಾಲ್ಗೊಂಡೆವು.
ಬ್ಯಾಂಕ್ ವ್ಯವಹಾರ ಪಾರದರ್ಶಕವೆಂದು ನಂಬಿದ್ದೆವು. ಆದರೆ, ಮತ್ತಿನ್ಯಾರದೋ ಆಸ್ತಿಯ ರಿ.ಸರ್ವೆ ನಂಬರ್ ತೋರಿಸಿ ಬ್ಯಾಂಕಿನವರು ವಂಚಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ, ಯಾವ್ಯಾವ ಊರಲ್ಲಿ ಇಂದು ಕರೆಂಟ್ ಇರಲ್ಲ | Today Power Cut
ಹರಾಜು ನಂತರ ಬ್ಯಾಂಕ್ ಅಧಿಕಾರಿಗಳು ಹೇಳಿದಂತೆ ನಾಲ್ಕು ಬಾರಿ ಹಣ ಪಾವತಿಸಿದ್ದೇನೆ. ಅದಕ್ಕೆ ಸಂಬಂಧಿಸಿದ ರಸೀದಿಗಳು ಇವೆ. ಆದರೆ, ನೋಂದಣಿಗೆ ಉಪನೋಂದಾಣಾಧಿಕಾರಿ ಕಚೇರಿಗೆ ಹೋದಾಗ ಕಳೆದ 15 ವರ್ಷಗಳಿಂದಲೂ ಆರ್. ಸತೀಶ್ ಎನ್ನುವವರ ಹೆಸರಿನಲ್ಲಿ ಆಸ್ತಿ ಇದೆ. ಈತನಿಗೂ, (Bank fraud) ಬ್ಯಾಂಕ್‌ಗೂ ಯಾವ ಸಂಬಂಧವಿಲ್ಲ ಎಂದು ತಿಳಿದುಬಂದಿದೆ ಎಂದು ದೂರಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252