Chitradurga news|Nammajana.com|19-7-2025
ನಮ್ಮಜನ.ಕಾ, ಚಿತ್ರದುರ್ಗ: ಒಳ ಮೀಸಲಾತಿ ನೀಡಲು ಕಾಂಗ್ರೇಸ್ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ರಾಜ್ಯ ಬಂದ್ ಗೆ ಕರೆ (A. Narayanaswamy) ನೀಡಬೇಕಾಗುತ್ತದ ಎಂದು ಮಾಜಿ ಸಂಸದ ಎ.ನಾರಾಯಣಸ್ವಾಮಿ ಸರ್ಕಾರಕ್ಕೆ ಎಚ್ಚರಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆ ಪರಿಗಣಿಸಿ ಮಾಧುಸ್ವಾಮಿ ಕಮಿಟಿ ವರದಿಯಲ್ಲಿ 17 % ಮೀಸಲಾತಿ ಹೆಚ್ಚಳ ಆಯ್ತು ಅದರಂತೆ ಮಾದಿಗರಿಗೆ 6% ಛಲವಾದಿ-5.5%, ಭೋವಿ & ಲಂಬಾಣಿಗಳಿಗೆ 4.5% ಅಲೆಮಾರಿಗಳಿಗೆ 1% ಜಾರಿ ಇದೆ ಎಂದರು.

ನಾಗಮೋಹನ್ ದಾಸ್ ಜಾತಿಗಣತಿ ಹೋದಾಗ 3 ತಿಂಗಳಲ್ಲಿ ಜಾರಿ ಮಾಡುವ ಭರವಸೆ ನೀಡಿದರು. ಆದರೇ 7 ತಿಂಗಳು ಕಳೆದರು ಇದುವರೆಗೂ ಕೂಡಾ ಜಾರಿ ಮಾಡಿಲ್ಲ.ಇದೀಗ (A. Narayanaswamy) ರಾಜ್ಯದಲ್ಲಿ ಗೊಂದಲ ಸೃಷ್ಠಿಯಾಗಿದೆ ಜೊತೆಗೆ ಅನುಮಾನಕ್ಕೆ ಕಾರಣವಾಗಿದೆ.
ಆ.1 ಕ್ಕೆ ಸುಪ್ರೀಂ ತೀರ್ಪು ಬಂದು ಒಂದು ವರ್ಷ ಪೂರೈಕೆ ಆಗುತ್ತಿದೆ.ರಾಜ್ಯದಲ್ಲಿ ಮಾದಿಗ ಸಮಾಜದ ಒಕ್ಕೂಟಗಳು ಎಲ್ಲರು ಸೇರಿ ಆಗಸ್ಟ್ 1 ನೇ ತಾರೀಖು ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಿರ್ಧಾರ ಮಾಡಲಾಗಿದೆ.
ಈ ಬಾರಿ ಮಾದಿಗರು 3.5 ವರ್ಷ ದಣಿದಿದ್ದೇವೆ. ಯಾವುದೇ ರಾಜಕೀಯ ಪಕ್ಷಗಳ ವಿಶ್ವಾಸ ನಮಗಿಲ್ಲ, ಪ್ರಧಾನಿ ಮೋದಿ ಮಾತ್ರ ನಿಮ್ಮ ಪರ ಇದ್ದೇನೆ ಎಂದು ಹೇಳಿದ್ದರು.ಅದರ ಪರಿಣಾಮ ಆ. 1 ಕ್ಕೆ ಸುಪ್ರೀಂ ಜಡ್ಜ್ ಮೇಂಟ್ ಬಂತು.ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಆಗದೇ ಹೋದರೆ ರಾಜ್ಯ ಬಂದ್ ಮಾಡುತ್ತೇವೆ.
ಇದನ್ನೂ ಓದಿ: ದುರ್ಗದ ಸಿರಿ ಹೋಟೆಲ್ ನಲ್ಲಿ ಅಕ್ರಮ ಇಸ್ಪೀಟ್ ದಂಧೆ, 32 ಜೂಜುಕೋರರ ಬಂಧನ Ispeet
ರಾಜ್ಯದಲ್ಲಿ ಸರ್ಕಾರದ ವಿರುದ್ದ ಅಸಹಕಾರ ಚಳುವಳಿಯನ್ನ ಮಾಡುತ್ತೇವೆ.ಆಡಳಿತ ತಂತ್ರ ನಿಶ್ಕ್ರೀಯ ಮಾಡುವ ದಿಕ್ಕಿನಲ್ಲಿ ಮಾದಿಗರ ಹೋರಾಟ ಇರುತ್ತದೆ ಎಂದು ಸರ್ಕಾರಕ್ಕೆ ಮತ್ತು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ನಾರಾಯಣಸ್ವಾಮಿ (A. Narayanaswamy) ವಾಗ್ದಾಳಿ ನಡೆಸಿ ಎಚ್ಚರಿಕೆ ನೀಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252