Chitradurga News | Nammajana.com |06-08-2025
ನಮ್ಮಜನ.ಕಾಂ,ಮೊಳಕಾಲ್ಮುರು: ತಾಲೂಕಿನ(AC) ಸೂಲೇನಹಳ್ಳಿ ಮೊರಾರ್ಜಿ ದೇಸಾಯಿ ಹಾಗೂ ಯರ್ರೇನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಬುಧವಾರ ಜಿಲ್ಲಾ ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: CHITRADURGA ಜಿಲ್ಲೆಯಲ್ಲಿ 31 ಮಿ.ಮೀ ಮಳೆ | 18 ಮನೆ ಹಾನಿ | ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?


ಆರಂಭದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ನಾನಾ ವಿಭಾಗದ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಿ ಸೂಲೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತೆರಳಿದರು. ಅವರಣದಲ್ಲಿ ಆಕರ್ಷಕ ಧ್ವಜಗಳನ್ನು ನಿರ್ಮಿಸಲು ಉಪವಿಭಾಗಾಧಿಕಾರಿ ಖುದ್ದು ತಾವೇ ಕಂಬಗಳನ್ನು ನೆಡಲು ಸ್ಥಳ ನಿಗದಿ ಮಾಡಿ, ಮರಗಳಲ್ಲಿನ ಕವಲು ಕೊಂಬೆಗಳನ್ನು ತೆರವುಗೊಳಿಸಿ ಮರಗಳ ಬೆಳೆವಣಿಗೆಗೆ ಸಹಕರಿಸುವಂತೆ ಪ್ರಭಾರ ಪ್ರಾಚಾರ್ಯ ರಮೇಶ್‌ಗೆ ಸೂಚಿಸಿದರು.
ಕೆಲವು ಸಮಯ ಮಕ್ಕಳ ಜೊತೆ ಅಗತ್ಯ ಚರ್ಚೆ ನಡೆಸಿ ಶಾಲಾ ಆವರಣ, ಸ್ಟೋರ್ ರೂಂ, ಮಕ್ಕಳು ಮಲಗುವ ಕೊಠಗಳನ್ನು ವೀಕ್ಷಿಸಿ ಆನಂತರ ಡೈನಿಂಗ್ ಹಾಲ್ ಪ್ರವೇಶಿಸಿ ವಿದ್ಯಾರ್ಥಿಗಳ ಜೊತೆ ಊಟದ ರುಚಿ ಸವಿದರು.
ನಂತರ ಯರ್ರೇನಹಳ್ಳಿ ಕಿತ್ತೂರು ರಾಣಿ(AC) ಚೆನ್ನಮ್ಮ ವಸತಿ ಶಾಲೆಗೆ ತೆರಳಿ ಶಾಲೆಯ ಸಿಸಿ ಟಿವಿಯಲ್ಲಿ ಶಿಕ್ಷಕರು ಬೋಧಿಸುವ ಪರಿಯನ್ನು ವೀಕ್ಷಿಸಿದರು. ನಂತರ ಎಲ್ಲಾ ಶಿಕ್ಷಕರನ್ನು ಕರೆಸಿಕೊಂಡು ನೀವುಗಳು ನನಗಿಂತ ಸೀನಿಯರ್ ಇದ್ದೀರಾ, ಸರಕಾರಿ ಕೆಲಸಕ್ಕೆ ಸೇರಿ ನಾನಿನ್ನು ಒಂದು ವರ್ಷವಾಗಿದೆ ನನ್ನಿಂದ ನೀವು ಹೇಳಿಸಿಕೊಳ್ಳದಂತೆ ನಿಮಗಳ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
ಈ ಶಾಲೆಯಲ್ಲಿ ಸ್ಪೋಟ್ ರೂಂ, ಲ್ಯಾಬ್, ವಿದ್ಯಾರ್ಥಿಗಳ ಮಲಗುವ ಕೊಠಡಿ ವೀಕ್ಷಿಸಿ, ಸರಬರಾಜಾಗಿದ್ದ ಸೊಳ್ಳೆ ಪರದೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕೂಡಲೇ ವಿದ್ಯಾರ್ಥಿನಿಯರಿಗೆ ಹಸ್ತಾಂತರಿಸಬೇಕು. ಮಕ್ಕಳಿಗೆ ಪಾಠದ ಜೊತೆಯಲ್ಲಿ ಶಿಸ್ತು ಕಲಿಸುವುದು ಖಡ್ಡಾಯವಾಗಿದೆ. ಒಂಭತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶೇವಿಂಗ್ ಸೆಟ್ ಕೊಡಿಸಿ ಇವರಿಗೆ ಶೇವ್ ಮಾಡಿಕೊಳ್ಳುವ ವಿಧಾನವನ್ನು ವಿವರಿಸಬೇಕು ಎಂದರು.
ಇದೇ ಶಾಲೆಯಲ್ಲಿ ತನ್ನ ಸಿಬ್ಬಂಧಿಯ(AC) ಜೊತೆ ಊಟ ಮಾಡುತ್ತಾ. ನಾನು ಭೇಟಿ ನೀಡುತ್ತೇನೆ ಎಂದು ಸಾರಿಗೆ ಹೊಗ್ಗರಣೆ ಮತ್ತೊಮ್ಮೆ ಹಾಕಿದ್ದು ಗಮನಿಸಿದ್ದೇನೆ. ಇದೇ ಮಾದರಿಯ ಊಟವನ್ನು ಪ್ರತಿ ದಿನವೂ ವಿದ್ಯಾರ್ಥಿಗಳಿಗೆ ನೀಡಬೇಕು. ಊಟ ಬಡಿಸುವವರು ಶುಭ್ರತೆ ಕಾಯ್ದುಕೊಳ್ಳವುದು ಖಡ್ಡಾಯ ಎಂದರು.
ಇದನ್ನೂ ಓದಿ: ಆಗಸ್ಟ್ 15 ರಿಂದ ಎಂಡೊಸ್ಕೋಫಿ ಮತ್ತು ಸ್ತನಕ್ಯಾನ್ಸರ್ ಚಿಕಿತ್ಸೆ ಘಟಕ ಆರಂಭ
ಸ್ಥಳದಲ್ಲಿ ಪ್ರಾಚಾರ್ಯ ದಸ್ತಗಿರಿ, ವಾರ್ಡನ್ ವನಜಾ, ಮೊರಾರ್ಜಿ ಶಾಲೆ ಶಿಕ್ಷಕರಾದ ಪ್ರಸನ್ನ ಕುಮಾರ್, ರಾಮಚಂದ್ರಪ್ಪ, ಧೂಳಪ್ಪರೆಡ್ಡಿ, ಹರೀಶ್ ಕುಮಾರ್, ದುಗ್ಗಪ್ಪ, ರಹಿಮುನ್ನೀಸಾ, ಆಶಾ, ರೂಪಾ, ಗ್ರಾಮಲೆಕ್ಕಾಧಿಕಾರಿಗಳಾದ ಮಲ್ಲಿಕಾರ್ಜುನ್, ಪರಮೇಶ್ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252