
Chitradurga news|nammajana.com|5-12-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಪರಶುರಾಮಪುರ ಠಾಣಾ ವ್ಯಾಪ್ತಿಯ ನಾಗಗೊಂಡನಹಳ್ಳಿ ಸಮೀಪ ಚಲಿಸುತ್ತಿದ್ದ ಕಾರಿನ ಟಯರ್ ಸಿಡಿದ ಹಿನ್ನೆಲೆಯಲ್ಲಿ ಕಾರು ಪಲ್ಟಿಯಾಗಿ ಪ್ರಯಾಣಿಸುತ್ತಿದ್ದ ಮಲ್ಲಿಕಾರ್ಜುನ್ (35) ಸ್ಥಳದಲ್ಲೇ (Accident) ಮೃತಪಟ್ಟರೆ, ಮಾರುತಿ ಎಂಬುವವರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ.
ಇದನ್ನೂ ಓದಿ: ತಾರತಮ್ಯ ಮಾಡಿಲ್ಲ, ಎಲ್ಲಾ ವಾರ್ಡ್ ಗೆ 30.95 ಅನುದಾನ ನೀಡಿದ್ದೇನೆ: ಕೆ.ಸಿ.ವೀರೇಂದ್ರ ಪಪ್ಪಿ |Nagarasabhe

ಕಾರಿನಲ್ಲಿ ಮಲ್ಲಿಕಾರ್ಜುನ್ ಮತ್ತು ಮಾರುತಿ ನಾಗಗೊಂಡನಹಳ್ಳಿ ಮೂಲಕ ಬಿಜಿಕೆರೆ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಕಾರಿನ ಟಯರ್‌ಸಿಡಿದು ಪಲ್ಟಿಯಾಗಿದೆ. ಕಾರಿನಲ್ಲಿದ್ದ (Accident) ಮಲ್ಲಿಕಾರ್ಜುನ್‌ನಿಗೆ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಪಿಎಸ್‌ಐ ಎಂ.ಕೆ.ಬಸವರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಸತತ ಮೂರು ಗಂಟೆ ಚಳ್ಳಕೆರೆ ನಗರಸಭೆ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಅಭಿವೃದ್ದಿ ಡ್ರಿಲ್ | Challakere Municipality
