Chitradurga news|nammajana.com|25-7-2024
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಬಳ್ಳಾರಿ ರಸ್ತೆಯ ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿ ಮೋಟಾರ್ (Accident Challakere) ಬೈಕ್‌ಗೆ ಟಾಟಾಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ನವವಿವಾಹಿತ, ಹಣ್ಣಿನ ವ್ಯಾಪಾರಿ ನೇರಲೇಹಳ್ಳಿ ಬೆಳವಿನಮರದಹಟ್ಟಿಯ ಸಮೀವುಲ್ಲಾ ಯಾನೆ ಸಮೀರ್(೨೪) ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
ಮೃತ ಸಮೀರ್ ಕಳೆದ ೨೦ ದಿನಗಳ ಹಿಂದೆ ಇಮಾಮ್‌ಪುರ ಆಫ್ರೀನ್‌ತಾಜ್ ಎಂಬುವವರನ್ನು ವಿವಾಹವಾಗಿದ್ದು ತನ್ನ ಸ್ವಗ್ರಾಮದಿಂದ ಇಮಾಮ್‌ಪುರಕ್ಕೆ ಬೈಕ್‌ನಲ್ಲಿ ಬರುವ (Accident Challakere) ಸಂದರ್ಭದಲ್ಲಿ ಏಕಮುಖ ರಸ್ತೆಯಲ್ಲಿ ಬುಲೆರೋಪಿಕಪ್ ವಾಹನ ಚಾಲಕ ಡಿಕ್ಕಿ ಹೊಡೆದಿರುತ್ತಾನೆ.

ತಲೆ ಹಾಗೂ ಮುಖಕ್ಕೆ ರಕ್ತಗಾಯವಾಗಿ ಸಮೀರ್ ಸ್ಥಳದಲ್ಲೇ ಮೃತಪಟ್ಟಿದ್ದು. ತೀರ್ವವಾಗಿ ಗಾಯಗೊಂಡು ನವವಿವಾಹಿತೆ (Accident Challakere) ಆಪ್ರೀನ್‌ತಾಜ್‌ರವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Matsya Sampada Yojana: ಮೀನುಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನಆಹ್ವಾನ
ಅಪಘಾತದ ಸುದ್ದಿ ತಿಳಿದ ಸಮೀರ್ ಮತ್ತು ಅಪ್ರೀನ್‌ತಾಜ್ ಕುಟುಂಬ ಸದಸ್ಯರು ಆಸ್ಪತ್ರೆಯ ಶವಗಾರದ ಬಳಿ ತಂಡ, (Accident Challakere) ತಂಡವಾಗಿ ಬಂದು ರೋಧಿಸುತ್ತಿದ್ದರು. ಪಿಎಸ್‌ಐ ಜೆ.ಶಿವರಾಜ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಬುಲೆರೋ ಚಾಲಕ ಸುನೀಲ್‌ಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252