Chitradurga news|nammajana.com|11-6-2024
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಬ್ಯಾಂಕ್ ಕಾಲೋನಿಯ ನಿವಾಸಿಗಳಾದ ಕೆಇಬಿ ನಿವೃತ್ತ ನೌಕರರಾದ ಶಿವಾನಂದ ಗೌಡ್ರು ಹಾಗೂ ರತ್ನಪ್ರಭ ಪುತ್ರ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ (Actor Darshan)ಅರೆಸ್ಟ್ ಆಗಿದ್ದಾರೆ.

ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಹೋದ ಮಗ ಮನೆಗೆ ವಾಪಸ್ ಬಂದಿರಲಿಲ್ಲ. ರಾತ್ರಿ ಊಟಕ್ಕೆ ಸಹ ಬರುವುದಿಲ್ಲ ಎಂದು ತಾಯಿ ಬಳಿ ಹೇಳಿ ಹೋಗಿದ್ದ ರೇಣುಕಾಸ್ವಾಮಿ (Actor Darshan)ಕೊಲೆಯಾಗಿದ್ದಾನೆ.
ಕೊಲೆಯಾದ ರೇಣುಕಾಸ್ವಾಮಿ (Actor Darshan) ಒಂದು ವರ್ಷದ ಹಿಂದಷ್ಟೇ ಮದುವೆ ಆಗಿದ್ದರು. ಪತ್ನಿ ಐದು ತಿಂಗಳ ಗರ್ಭಿಣಿ. ಪತಿಯ ಕೊಲೆ ಮಾಹಿತಿ ಆಕೆಗೆ ತಿಳಿಸಿಲ್ಲ. ಶನಿವಾರ ಬೆಳಗ್ಗೆ ಚಿತ್ರದುರ್ಗದ ಮನೆಯಿಂದ ತೆರಳಿದ್ದರು.
ಇದನ್ನೂ ಓದಿ: Diploma chitradurga: ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೂರ್ನಾಲ್ಕು ವರ್ಷದಿಂದ ಅಪೊಲೊ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಚಳ್ಳಕೆರೆ ಗೇಟ್ ಬಳಿಯಿರುವ ಬಾಲಾಜಿ ಬಾರ್ ಬಳಿ ರೇಣುಕಾಸ್ವಾಮಿ ಬೈಕ್ ಪತ್ತೆಯಾಗಿತ್ತು.
ನಿನ್ನೆ ಮಧ್ಯಾಹ್ನ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ (Actor Darshan) ಠಾಣೆಯಿಂದ ಪೋಷಕರಿಗೆ ಪೋನ್ ಮಾಡಿ ಕರೆಸಿಕೊಂಡಿದ್ದಾರೆ.
