Chitradurga news|nammajana.com|11-6-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ (Actor Darshan)6 ದಿನಗಳ ಪೊಲೀಸ್ ವಶಕ್ಕೆ ನೀಡಿ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ.

ನಟ ದರ್ಶನ್ ಅವರ ಅಪ್ತೆಯಾಗಿದ್ದ ಪವಿತ್ರಾ ಗೌಡ ಅವರಿಗೆ ಮೊಬೈಲ್ ಸಂದೇಶ ಕಳುಹಿಸಿ ತೊಂದರೆ ಮಾಡಿದ ಎಂಬ ಕಾರಣಕ್ಕೆ ತನ್ನ ಅಭಿಮಾನಿ ರೇಣುಕಾಸ್ವಾಮಿ ಅವರನ್ನು ದರ್ಶನ್ (Actor Darshan) ಹಾಗೂ ಸಹಚರರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಮಂಗಳವಾರ ಬೆಳಿಗ್ಗೆ ನಟ ದರ್ಶನ್ ಸೇರಿದಂತೆ 13 ಮಂದಿಯನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧನ ಮಾಡಿದ್ದರು.
ಇದನ್ನೂ ಓದಿ: Actor Darshan: ಕೊಲೆಯಾದ ರೇಣುಕಾ ಸ್ವಾಮಿ ಬೈಕ್ ಸಿಕ್ಕಿದ್ದು ಎಲ್ಲಿ?
ಈಗ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಎಲ್ಲಾ ಆರೋಪಿಗಳಿಗೆ (Actor Darshan) ನ್ಯಾಯಾಲಯವು 6 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
