Chitradurga news|nammajana.com|15-12-2024
ನಮ್ಮಜನ.ಕಾಂ, ಚಿತ್ರದುರ್ಗ : ಡೆತ್ ನೋಟ್ ಬರೆದಿಟ್ಟು ಅಡಕೆ ವ್ಯಾಪಾರಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ (Adike trader suicide) ಚಿತ್ರದುರ್ಗದ ಸಿದ್ದಾಪುರ ಬಳಿ ನಡೆದಿದೆ.
ತಾಲೂಕಿನಿಂದ 6 ಕಿಲೋ ಮೀಟರ್ ದೂರದಲ್ಲಿರುವ ಸಿದ್ದಾಪುರ ಹತ್ತಿರದ ಗೋದಾಮಿನಲ್ಲಿ ಶೈಲೇಶ್ (45) ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಡೆತ್ ನೋಟ್ ನಲ್ಲಿ ಶೈಲೇಶ್, ಅಡಕೆ ವರ್ತಕ ಉದಯ ಶೆಟ್ಟಿ ವಿರುದ್ಧ ವಂಚನೆ ಹಾಗೂ ನಿಂದನೆ ಆರೋಪ ಮಾಡಿದ್ದಾರೆ. ವ್ಯಾಪಾರಿ ಶೈಲೇಶ್ ಬಳಿ ಉದಯಶೆಟ್ಟಿ (Adike trader suicide) ಅಡಿಕೆಯನ್ನು ಖರೀದಿಸಿದ್ದರು. ಸುಮಾರು 6.60 ಕೋಟಿ ಮೌಲ್ಯದ ಅಡಿಕೆಯನ್ನು ಉದಯಶಟ್ಟಿ ಶೈಲೇಶ್ ಬಳಿ ಖರೀದಿಸಿದ್ದರು.
ಇದನ್ನೂ ಓದಿ: ಚಿರತೆ ದಾಳಿಗೆ ಕುರಿ ಬಲಿ | Leopard attack
ಅಡಕೆ ಖರೀದಿ ಮಾಡಿದ್ದರ ಹಣ ಕೇಳಲು ಹೋದಾಗ ಉದಯಶೆಟ್ಟಿ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಶೈಲೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನನ್ನ ಸಾವಿಗೆ ಉದಯಶೆಟ್ಟಿ ಕಾರಣ ಎಂದು ಡೆತ್ ನೋಟ್ ನಲ್ಲಿ ಹೆಸರು ಉಲ್ಲೆಖಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ (Adike trader suicide) ಕುರಿತಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: horoscope | ದಿನ ಭವಿಷ್ಯ ,ಯಾವ್ಯಾವ ರಾಶಿಗೆ ಶುಭ ಭಾನುವಾರ?
ಜೀವನದ ಸಂತೆಯಲ್ಲಿ ಎಚ್ಚರಿಕೆ ಹೆಜ್ಜೆ ಹಾಕಿ
ಜೀವನ ಅನ್ನೋದು ಮೂರು ದಿನದ ಸಂತೆ ಅಂತೀವಲ್ಲ, ಇದಕ್ಕೇ ನೋಡಿ ಇವತ್ತು ಖುಷಿ ಖುಷಿಯಾಗಿದ್ದವ್ರು ಅರೆಗಳಿಗೆಯಲ್ಲಿ ಏನಾಗ್ತಾರೋ ಹೇಳೋದಕ್ಕಾಗಲ್ಲ. ನೋಡೋದಕ್ಕೆ ಹೈಫೈ ಆಗಿದ್ದಾರೆ ಅಂದ್ರೆ ಅವ್ರಿಗೆ ಕಷ್ಟಗಳೇ ಇಲ್ಲ ಅಂತಲ್ಲ.
ನೋಡೋರ ದೃಷ್ಟಿಗೆ ರಾಯಲ್ ಲೈಫ್ ನಡೆಸುತ್ತಿದ್ದರೂ ಅವರಿಗೂ ಬೆಟ್ಟದಷ್ಟು ಕಷ್ಟಗಳಿರ್ತವೆ. ಕೋಟಿ ಕೋಟಿ ಎಣಿಸೋ ಕೈಗಳಿಗೂ ಮೋಸ ಮಾಡೋರಿರ್ತಾರೆ. ಚಿತ್ರದುರ್ಗದಲ್ಲಿ ಆಗಿದ್ದೂ ಇದೇ. ಅಡಿಕೆ ವ್ಯಾಪಾರ ಮಾಡ್ತಿದ್ದ ಅಮಾಯಕನೊಬ್ಬ ದುರಂತ ಅಂತ್ಯ (Adike trader suicide) ಕಂಡಿದ್ದಾನೆ. ಕೋಟಿ ಕೋಟಿ ಬೆಲೆಯ ಅಡಿಕೆ ಖರೀದಿ ಮಾಡಿ, ವ್ಯಾಪಾರಿಯೊಬ್ಬರ ಕೈಗಿಟ್ಟವ ನೇಣಿನ ಕುಣಿಕೆಯಲ್ಲಿ ನೇತಾಡಿದ್ದಾನೆ.