Chitradurga News |Nammajana. Com | 28-4-2024
ನಮ್ಮಜನ.ಕಾಂ.ಚಿತ್ರದುರ್ಗ:ಆಡುಮಲ್ಲೇಶ್ವರದಲ್ಲಿ ಇನ್ನು ಹೆಚ್ಚು ಗಿಡಮರಗಳನ್ನು ಬೆಳೆಸಿ ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೀಜದ ಉಂಡೆಗಳ ಬಿತ್ತೋತ್ಸವ ಕಾರ್ಯಕ್ರಮ ಮಹತ್ವದ ಕಾರ್ಯವಾಗಿದೆ ಪರಿಸರ ಹೋರಾಟಗಾರ ಡಾ ಎಚ್. ಕೆ.ಎಸ್. ಸ್ವಾಮಿ ಹೇಳಿದರು.
ನಗರದ ಜೋಗಿಮಟ್ಟಿಯ ಆಡುಮಲ್ಲೇಶ್ವರ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಪ್ರಥಮ್ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬೀಜದ ಉಂಡೆಗಳ ಬಿತ್ತೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವಿವಿಧ ಮರದ ಬೀಜಗಳಾದ ಬೇವು, ಹೊಂಗೆ, ಹುಣಸೆ, ಹಲಸು,ತೇಗು, ಸೇರಿದಂತೆ ಮುಂತಾದ ಮರದ ಬೀಜದ ಉಂಡೆಗಳನ್ನು ಬಿತ್ತನೆ ಮಾಡುವ ಮೂಲಕ ಪರಿಸರ ರಕ್ಷ ಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಥಮ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಡಾ.ಮಹೇಶ್ ಮಾತನಾಡಿ ಬೀಜದ ಉಂಡೆಗಳು ಮುಂದೆ ಮಳೆಗಾಲ ಬಂದಾಗ ಮೊಳಕೆ ಹೊಡೆದು ಸಸಿಗಳಾಗಿ ಶುದ್ಧವಾದ ಗಾಳಿಯನ್ನು,ಆಹ್ಲಾದಕರವಾದ ಪರಿಸರವನ್ನು ಉಂಟುಮಾಡುತ್ತದೆ. ಬೀಜದ ಉಂಡೆಗಳನ್ನು ಹಾಕಿದ ನಂತರ ಅವುಗಳನ್ನು ಕಾಳಜಿ ವಹಿಸುವುದು ಅಷ್ಟೇ ಮಹತ್ವ ಕಾರ್ಯವಾಗಿದೆ. ಸಂಸ್ಥೆಯ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಂಸ್ಥೆಯ ಖಜಾಂಚಿ ಸುಮಾ ಮಾತನಾಡಿ ಗಿಡ ಮರಗಳು ಪರಿಸರದಲ್ಲಿ ಹೆಚ್ಚಾದಂತೆಲ್ಲ ಮಳೆಯು ಸಹ ಸಮೃದ್ಧವಾಗಿ ಸುರಿಯುತ್ತದೆ. ಉತ್ತಮ ಪರಿಸರಕ್ಕಾಗಿ ನಾವೆಲ್ಲರೂ ಒಂದುಗೂಡಬೇಕಾಗಿದೆ. ಇದು ಮೊದಲ ಹಂತದ ಬೀಜದ ಉಂಡೆಗಳ ಬಿತ್ತೋತ್ಸವ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲಿ ಚಿತ್ರದುರ್ಗದ ಎಲ್ಲಾ ಪ್ರದೇಶಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ಬೀಜದ ಉಂಡೆಗಳ ಬಿತ್ತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: ನಮ್ಮ ಗೃಹಲಕ್ಷ್ಮಿ ನಮ್ಮ ಕೈ ಹಿಡಿದಿದ್ದಾಳೆ:ಬಿ.ಎನ್.ಚಂದ್ರಪ್ಪ ವಿಶ್ವಾಸ
ಕಾರ್ಯಕ್ರಮದಲ್ಲಿ ಸುಮಾರು 500 ಬೀಜದ ಉಂಡೆಗಳನ್ನು ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ವಕೀಲ ಸುಧೀರ್, ಪರಿಸರ ಪ್ರೇಮಿ ಶ್ರೀಧರ್, ಸಂತೋಷ್, ಸಂಸ್ಥೆಯ ಪದಾಧಿಕಾರಿಗಳಾದ ತಿಮ್ಮರಾಜು, ಚೈತ್ರ, ಚಂದ್ರಕಲಾ, ಅನಿತಾ, ಧನುಷ್, ಈಶ್ವರಿ, ವೈಷ್ಣವಿ, ಪ್ರಥಮ್, ಪ್ರೀತಂ, ಗಣೇಶ್ ಇದ್ದರು.