
Chitradurga news|nammajana.com|18-03-2025
ನಮ್ಮಜನ.ಕಾಂ, ಚಿತ್ರದುರ್ಗ: ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರಕನ್ನಡ, ಉಡುಪಿ, (Agniveer) ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅಗ್ನಿಪಥ್ ಯೋಜನೆಯಡಿ 2025-26ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರಿಕ್ಷೇಗೆ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತರು ವೆಬ್ ಪೋರ್ಟಲ್- WWW.JOININDIANARMY.NIC.IN ಮೂಲಕ ಏಪ್ರಿಲ್ 10 ಒಳಗಾಗಿ ಅರ್ಜಿ ಸಲ್ಲಿಸಬಹುದು.
ಬರುವ ಜೂನ್‌ನಲ್ಲಿ ಪರೀಕ್ಷೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಛೇರಿ ದೂರವಾಣಿ ಸಂಖ್ಯೆ- 0824-2951279 ಹಾಗೂ aromangalore2021@gmail.com ಸಂಪರ್ಕಿಸಬಹುದು. ಭಾರತೀಯ ಸೇನೆಯಲ್ಲಿ ಆಯ್ಕೆಯು ‘ನ್ಯಾಯಯುತ ಮತ್ತು ಪಾರದರ್ಶಕ’ ನಡೆಯುತ್ತದೆ.

ಇದನ್ನೂ ಓದಿ: Dina Bhavishya | ದಿನ ಭವಿಷ್ಯ 18-03-2025
ಅಭ್ಯರ್ಥಿಗಳು ಯಾವುದೇ ಹಂತದಲ್ಲೂ ಲಂಚ ನೀಡಬಾರದು. ಆಮಿಶ ಒಡ್ಡುವ ವ್ಯಕ್ತಿಗಳಿಗೆ ಬಲಿಯಾಗಬಾರದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ (Agniveer) ಡಾ.ಸಿ.ಎ.ಹಿರೇಮಠ ತಿಳಿಸಿರುತ್ತಾರೆ.
