Chitradurga news |nammajana.com|5-8-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ (Anganwadi post) ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 30 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಇಲಾಖೆ (Anganwadi post) ವೆಬ್ಸೈಟ್ https://karnemakaone.kar.nic. in/abcd/ ತಂತ್ರಾAಶದ ಮೂಲಕ ಅರ್ಜಿ ಸಲ್ಲಿಸಬಹದು.
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮೀಸಲಾತಿ ವಿವರ: (Anganwadi post)
ಜೆ.ಎನ್.ಕೋಟೆ ಗ್ರಾ.ಪಂ.ನ ಜೆ.ಎನ್.ಕೋಟೆ-ಬಿ ಹಾಗೂ (Anganwadi post) ಜೆ.ಸಿ.ಹಳ್ಳಿ ಗೊಲ್ಲರಹಟ್ಟಿ ಅಂಗನವಾಡಿ ಕೇಂದ್ರ ಎಸ್.ಟಿ ವರ್ಗಕ್ಕೆ ಮತ್ತು ಇಂಗಳದಾಳ್ ಗ್ರಾ.ಪಂ.ನ ಎರೇಹಳ್ಳಿ ಅಂಗನವಾಡಿ ಕೇಂದ್ರ ಎಸ್.ಸಿ ಗೆ ವರ್ಗಕ್ಕೆ ಮೀಸಲಿವೆ.
ಅಂಗನವಾಡಿ ಸಹಾಯಕಿಯರ ಮೀಸಲಾತಿ ವಿವರ:(Anganwadi post)
ಚಿತ್ರದುರ್ಗ ನಗರದ ವಾರ್ಡ್ ಸಂಖ್ಯೆ -27 ರ ಕೆ.ಎಸ್.ಎಫ್.ಸಿ ಹತ್ತಿರದ ಅಂಗನವಾಡಿ ಕೇಂದ್ರ, ವಾರ್ಡ್ ಸಂಖ್ಯೆ- 01 ರ ಸಣ್ಣದುಮ್ಮಿ, ವಾರ್ಡ್ ಸಂಖ್ಯೆ-29 ರ ಬಸಪ್ಪ ಆಸ್ಪತ್ರೆ ಅಂಗನವಾಡಿ ಕೇಂದ್ರ, ವಾರ್ಡ್ ಸಂಖ್ಯೆ-12 ರ ಫಾತಿಮಾ ಮಸೀದಿ ಅಂಗನವಾಡಿ ಕೇಂದ್ರ, ವಾರ್ಡ್ ಸಂಖ್ಯೆ-13 ರ ನೆಹರು ನಗರ ಅಂಗನವಾಡಿ ಕೇಂದ್ರ-ಬಿ ಮತ್ತು ಡಿ ಕೇಂದ್ರ, ವಾರ್ಡ್ ಸಂಖ್ಯೆ-11 ರ ಚೇಳಗುಡ್ಡ-ಎ, ಜಾನುಕೊಂಡ ಗ್ರಾ.ಪಂ.ನ ಗಂಜಿಗಟ್ಟೆ, ಸಿದ್ದಾಪುರ ಗ್ರಾ.ಪಂ.ನ ಮಾನಂಗಿ, ಅನ್ನೇಹಾಳ್ (Anganwadi post) ಗ್ರಾ.ಪಂ.ನ ಅನ್ನೇಹಾಳ್ ಗೊಲ್ಲರಹಟ್ಟಿ, ಎಂ.ಕೆ.ಹಟ್ಟಿ ಗ್ರಾ.ಪಂ.ನ ಎಂ.ಆರ್.ನಗರದ – ಎ ಅಂಗನವಾಡಿ ಕೇಂದ್ರ ಇತರೆ ವರ್ಗಕ್ಕೆ ಮತ್ತು ಮದಕರಿಪುರ ಗ್ರಾ.ಪಂ.ನ ಮದಕರಿಪುರ-ಎ ಅಂಗನವಾಡಿ ಕೇಂದ್ರ ಎಸ್.ಸಿ ಗೆ ಮೀಸಲಿವೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣ ಹತ್ತಿರದ, ಜಿಲ್ಲಾ ಭಾಲಭವನ ಆವರಣದಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹದು ಎಂದು ಪ್ರಕಟಣೆ ತಿಳಿಸಿದೆ.