Chitradurga news|nammajana.com|30-9-2024
ನಮ್ಮಜನ.ಕಾಂ, ಮೊಳಕಾಲ್ಮುರು: ಹಿಂಡು ಹಿಂಡಾಗಿ ಬಂದು ಜನರ ಮೇಲೆ ದಾಳಿ ನಡೆಸುವ ಕೋಣಗಳಿಂದ ಹೊಸೂರು (Angle attack) ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಅಶೋಕ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೊಸೂರು ಗ್ರಾಮದಲ್ಲಿ ದೇವರ ಕೋಣಗಳ ಕಾಟ ವಿಪರೀತವಾಗಿ ಹೆಚ್ಚಾಗಿದೆ.
ಹಗಲು ರಾತ್ರಿ ಎನ್ನದೇ ರಾಜಾರೋಷವಾಗಿ ಜನವಸತಿ (Angle attack) ಪ್ರದೇಶಗಳಿಗೆ ನುಗ್ಗುವ ಕೋಣಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತಾ ಜನರಿಗೆ ಇನ್ನಿಲ್ಲದ ಉಪಟಳ ನೀಡುತ್ತಿವೆ.
ಬೈಕ್ ನಲ್ಲಿ ತೆರಳುವ ಸವಾರರ ಮೇಲೆ ದಾಳಿ ನಡೆಸುತ್ತಾ ಅಟ್ಟಹಾಸ (Angle attack) ಮೆರೆಯುತ್ತಿವೆ. ನಿನ್ನೆಯಷ್ಟೇ ಪ್ರಜ್ವಲ್ ಎಂಬ ವಿದ್ಯಾರ್ಥಿಯ ಮೇಲೆ ದಾಳಿ ನಡೆಸುತ್ತಿರುವಾಗ ಸ್ಥಳೀಯರು ಕೋಣವನ್ನು ಓಡಿಸಿದ್ದಾರೆ, ಸದ್ಯ ಬಾಲಕನ ಬೆನ್ನಿಗೆ ಗಾಯವಾಗಿದ್ದು ಪ್ರಾಣ ಪಯದಿಂದ ಪಾರಾಗಿದ್ದಾನೆ.
ಇನ್ನೂ ರೈತರ ಪಾಡಂತೂ ಹೇಳತೀರದ್ದಾಗಿದೆ,ನೋಡ ನೋಡುತ್ತಿದ್ದಂತೆ ರೈತರ ಹೊಲಗಳಿಗೆ ನುಗ್ಗಿ ಮನಸ್ಸೋ ಇಚ್ಛೆ ದಾಳಿ ನಡೆಸಿ,ಮೆಕ್ಕೆಜೋಳ, ಮೆಣಸಿನಕಾಯಿ,ಈರುಳ್ಳಿ ಶೇಂಗಾ ಸೇರಿದಂತೆ ಕೋಯ್ಲಿಗೆ ಬಂದ ಬೆಳೆಗಳನ್ನು ನಾಶ ಮಾಡುತ್ತ, (Angle attack) ಬೆಳೆಗಳಿಗೆ ನೀರುಣಿಸಲು ಹಾಕಲಾಗಿರುವ ಡ್ರಿಪ್ ಪೈಪ್ ಗಳನ್ನು ಕಿತ್ತೆಸೆಯುತ್ತವೆ,ಕೋಣಗಳ ದಾಳಿಯನ್ನು ನೋಡಿ ರೈತರು ಅಸಹಾಯಕರಾಗಿದ್ದಾರೆ, ಇರುವ ಬೆಳೆಯನ್ನು ಕಳೆದುಕೊಂಡು ರೈತರು ನಷ್ಟ ಅನುಭವಿಸುತ್ತಿದ್ದಾರೆ.
ನಿಜಕ್ಕೂ ಕೂಡ ಇಲ್ಲಿನ ಜನರು ಕೋಣಗಳ ದಾಳಿಯಿಂದ ಜೀವ ಭಯದಲ್ಲಿಯೇ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ,ದೇವರ ಕೋಣಗಳಿಗೆ ಕಡಿವಾಣ ಹಾಕಿ ಎಂದು ಈಗಾಗಲೇ ಪೊಲೀಸ್ ಇಲಾಖೆ,ಸ್ಥಳೀಯ ಗ್ರಾಮ ಪಂಚಾಯಿತಿ, ಪಶು ಇಲಾಖೆ ಸೇರಿದಂತೆ ಹಲವಾರು (Angle attack) ಇಲಾಖೆಗಳಿಗೆ ಇಲ್ಲಿನ ಜನರು ಮನವಿ ಮಾಡಿದ್ದರು ಯಾವುದೇ ಪ್ರಯೋಜನವಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಇದನ್ನೂ ಓದಿ: Short Circuit: ಚಿತ್ರದುರ್ಗದ ನಡುರಸ್ತೆಯಲ್ಲಿ ಧಗಧಗನೇ ಬೆಂಕಿ ಹೊತ್ತಿ ಉರಿದ ಟ್ಯಾಂಕರ್ ಲಾರಿ
ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು (Angle attack) ಎಚ್ಚರಿಕೆವಹಿಸಬೇಕು.ಕೋಣಗಳ ಉಪಟಳಕ್ಕೆ ಕಡಿವಾಣ ಹಾಕಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಿದೆ.