Chitradurga News | Nammajana.com |2-5-2024
ನಮ್ಮಜನ.ಕಾಂ.ಚಿತ್ರದುರ್ಗ:ಹಬ್ಬದಲ್ಲಿ ಕೋಣವನ್ನು ಬಲಿ ಕೊಡುವಾಗ ಅದೆಷ್ಟೋ ಜನರು ಕೋಣವನ್ನು ಹಿಡಿದುಕೊಂಡು ಬರುವಾಗ ಜಾತ್ರೆಯ ಗುಂಗಿನಲ್ಲಿ ಸದ್ದು ಜೋರಾಗಿರುತ್ತದೆ. ಯುವಕರು ಸಹ ಕೋಣವನ್ನು ಹಿಡಿದು ಸಿಳ್ಳೆ ಕೇಕೆ ಹಾಕುತ್ತಾ ಹರೆ. ಇಂತಹ ಸಂದರ್ಭಗಳಲ್ಲಿ ಕೋಣ ನೆಗೆದಾಡುವುದು ಸಾಮಾನ್ಯ ಅಂತಹ ಜಾತ್ರೆ ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದ ಕೊಲ್ಲಾಪುರದಮ್ಮನ ಜಾತ್ರೆಯಲ್ಲಿ ದೇವಿಗೆ ಬಲಿ ಕೊಡಲು ತಂದಿದ್ದ ಕೋಣ ವ್ಯಕ್ತಿಗೆ ಗುದ್ದಿದೆ.

ಮದಕರಿಪುರದ ಗ್ರಾಮದ 53 ವರ್ಷದ ಕೊಲ್ಲಪ್ಪ ಕೋಣದ ತಿವಿತದಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬುಧವಾರ ಬೆಳಗಿನ ಜಾವ ಗ್ರಾಮದಲ್ಲಿ ಜಾತ್ರೆ ಅಂಗವಾಗಿ ದೇವಿಗೆ ಕೋಣ ಬಲಿ ಕೊಡುವ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಗುದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬಿಸಿಗಾಳಿಗೆ ತತ್ತರಿಸಿದ ಕೋಟೆನಾಡು: ಆರೋಗ್ಯ ಇಲಾಖೆಯ ಈ ಸಲಹೆಗಳನ್ನು ತಪ್ಪದೇ ಪಾಲಿಸಿ
ಘಟನಾ ಸ್ಥಳಕ್ಕೆ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
