Chitradurga news |nammajana.com|21-9-2024
ನಮ್ಮಜನ. ಚಳ್ಳಕೆರೆ: ಕಳೆದ ಕೆಲವು ತಿಂಗಳುಗಳಿಂದ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದ ನ್ಯಾಯಬೆಲೆ (Annabhagya) ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದಿನಗಟ್ಟಲೇ ಕಾದರೂ ನ್ಯಾಯಬೆಲೆ ಅಂಗಡಿ ತೆರೆಯದೆ ಪಡಿತರ ನೀಡುವುದಿಲ್ಲ. ತಡವಾಗಿ ಬಂದವರಿಗೆ ಹೆಬ್ಬೆಟ್ಟುಹಾಕಿಸಿಕೊಂಡು ಮುಂದಿನ ತಿಂಗಳು ನೀಡುವುದಾಗಿ ಹೇಳುತ್ತಾರೆ.
ಕೇವಲ ತಿಂಗಳಲ್ಲಿ ಎರಡು ದಿನ ಮಾತ್ರ ಪಡಿತರ ನೀಡುತ್ತಾರೆಂದು ಅಲ್ಲಿನ ಪಡಿತರದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗ್ರಾಮದ ಕರಿಯಣ್ಣ, ತಿಪ್ಫೇಸ್ವಾಮಿ, ಚಂದ್ರಪ್ಪ ಈ ಬಗ್ಗೆ ಮಾಹಿತಿ ನೀಡಿ, ಪ್ರತಿತಿಂಗಳು ಪಡಿತರವನ್ನು ಪಡೆಯಲು ನಾವು (Annabhagya) ಬೆಳಗ್ಗೆಯಿಂದ ಸಂಜೆವರೆಗೂ ಕೆಲಸಕಾರ್ಯ ಬಿಟ್ಟು ಕಾದರೂ ಅಕ್ಕಿ ದೊರೆಯುತ್ತಿಲ್ಲ.
ಕಾರಣ, ನ್ಯಾಯಬೆಲೆ ಅಂಗಡಿ ಮಾಲೀಕ ಬರುವುದಿಲ್ಲ, ಈ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ, ಸಂಜೆವರೆಗೂ ಕಾದರೂ (Annabhagya) ವಾಪಾಸ್ ಹೋಗಿ ಮಾರನೆ ದಿನ ಬಂದರೆ ಪಡಿತರವಿಲ್ಲ ಹೆಬ್ಬೆಟ್ಟು ಹಾಕಿಹೋಗಿ ಮುಂದಿನ ಬಾರಿ ನೀಡಲಾಗುತ್ತದೆ ಎಂದು ಭರವಸೆ ನೀಡುತ್ತಾರೆ.
ಇದರಿಂದ ಜನರು ರೋಸಿದ್ದಾರೆ. ಕೇವಲ ಎರಡು ದಿನ ಪಡಿತರ ವಿರತರಿಸಿ ನಂತರ ಯಾರಿಗೂ ಪಡಿತರ ನೀಡುತ್ತಿಲ್ಲ. ಸರ್ಕಾರ ಕೊಡುವ ಉಚಿತ ಅಕ್ಕಿ, ರಾಗಿ ಸಿಗುವುದಿಲ್ಲ ನ್ಯಾಯಬೆಲೆ ಅಂಗಡಿ ತೆರೆದ ಕೂಡಲೇ ಹೆಬ್ಬೆಟ್ಟುಹಾಕಿದವರು ಪಡಿತರ ಪಡೆಯಲು ಬಂದವರು ನಾಮುಂದೆ, ತಾಮುಂದು ಎಂದು ಅಂಗಡಿ ಮುಂದೆ ಜಗಳಕ್ಕೆ ನಿಲ್ಲುತ್ತಾರೆ. ಪ್ರತಿತಿಂಗಳು ಇದೇ ರೀತಿ (Annabhagya) ಆಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.
ಗ್ರಾಮದಲ್ಲಿ ಬಿಪಿಎಲ್ ಕಾರ್ಡ್ದಾರರೇ ಹೆಚ್ಚಿದ್ದು, ಪ್ರತಿನಿತ್ಯ ಕೂಲಿ ಕೆಲಸದಿಂದಲೇ ಜೀವನ ನಡೆಸಬೇಕಿದೆ. ಸುಮಾರು ೧೫೦೦ಕ್ಕೂ ಹೆಚ್ಚು ಬಿಪಿಎಲ್ ಪಡಿತರದಾರರು ಇದ್ದಾರೆ.
ಆದರೆ, ಕೇವಲ ಕೆಲವೇ ಜನರಿಗೆ ಮಾತ್ರ ಪಡಿತರ ಭಾಗ್ಯ ದೊರೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನಹರಿಸಿ ಪ್ರತಿ ತಿಂಗಳು ಎಲ್ಲರಿಗೂ ಪಡಿತರ ವಿತರಣೆಯಾಗುವಂತೆ ಕ್ರಮವಹಿಸಬೇಕೆಂದು ಮನವಿ (Annabhagya) ಮಾಡಿದ್ಧಾರೆ.
ವಿಪರ್ಯಾಸವೆಂದರೆ ಪ್ರತಿತಿಂಗಳು ಸಾರ್ವಜನಿಕರು ನ್ಯಾಯಬೆಲೆ ಅಂಗಡಿ ಮುಂದೆ ಸೇರಿ ವಾಗ್ವಾದ ನಡೆಸಿ ಪಡಿತರ ಸಿಗುತ್ತಿಲ್ಲವೆಂದು ಆರೋಪಿಸಿದರೂ ಸಹ ನ್ಯಾಯಾಬೆಲೆ ಅಂಗಡಿ ಮಾಲೀಕರು ಮಾತ್ರ ಈ ಬಗ್ಗೆ ಯಾವುದೇ ಸಮಜಾಯಿಸಿ ಪಡಿತರದಾರರಿಗೆ ನೀಡುತ್ತಿಲ್ಲ.
ನಾವು ಪಡಿತರವನ್ನು ವಿತರಿಸಿದಾಗ ಮಾತ್ರ ತೆಗೆದುಕೊಳ್ಳಬೇಕು ಎಂಬ ಭಾವನೆ ಅವರಲಿ ಎನ್ನಿಸುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಇದುವರೆಗೂ ಪಡಿತರರಾಗಿ ಅವ್ಯವಸ್ಥೆಯ (Annabhagya) ಯಾವುದೇ ಮಾಹಿತಿ ನೀಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತುರ್ತು ಗಮನಹರಿಸುವಂತೆ ಮನವಿ ಮಾಡಿದ್ಧಾರೆ.
ಇದನ್ನೂ ಓದಿ: Kannada Dina Bhavishya: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಶುಭ ಶನಿವಾರ?
ಪೋಟೋ೨೦ಸಿಎಲ್‌ಕೆ೧ ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ ಮುಂದೆ ಚೀಲವಿಟ್ಟು ಪಡಿತರಕ್ಕಾಗಿ ಕಾಯುತ್ತಿರುವುದು.