Chitradurga News | Nammajana.com | 25-08-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ವಿಕಲಚೇತನರ (Applications) ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳನ್ನು 2025-26ನೇ ಸಾಲಿನಲ್ಲಿ ನೇರ ನಗದು ವರ್ಗಾವಣೆ ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಿ, ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಇದನ್ನೂ ಓದಿ: ಚಿತ್ರದುರ್ಗ: ಈ ಬಾರಿ ಹಿಂದೂ ಮಹಾಗಣಪತಿಗೆ ಡಿಜೆ ಮೆರವಣಿಗೆ ಡೌಟ್

ಆಧಾರ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ನಿರುದ್ಯೋಗ ಭತ್ಯೆ, ಶಿಶುಪಾಲನಾ ಭತ್ಯೆ, ಮರಣ ಪರಿಹಾರ ನಿಧಿ, ಪ್ರತಿಭೆ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ಯೋಜನೆ, ದೃಷ್ಠಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್‍ಕಿಟ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆಯಂತ್ರ ಯೋಜನೆ, ಸಾಧನ ಸಲಕರಣೆ ಯೋಜನೆ, ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್‍ಚೇರ್ ಯೋಜನೆಗಳಿಗೆ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಮೇಲ್ಕಂಡ ಯೋಜನೆಗಳಿಗೆ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಸೇವಾಸಿಂಧು ಪೋರ್ಟಲ್‍ನಡಿ (https://sevasindhu.karnataka.gov.in/sevasindhu/kannada) ಆನ್‍ಲೈನ್ ಮೂಲಕ ವಿಕಲಚೇತನರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಸ್ವೀಕೃತಿಯೊಂದಿಗೆ ಎಲ್ಲ ಪೂರಕ ದಾಖಲಾತಿಗಳ ಹಾರ್ಡ್ ಪ್ರತಿಯನ್ನು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು ಎಂ.ಆರ್.ಡಬ್ಲ್ಯೂಗಳಿಗೆ ಸಲ್ಲಿಸುವುದು.
ಇದನ್ನೂ ಓದಿ: Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಮಾಹಿತಿಗಾಗಿ ಎಂಆರ್‍ಡಬ್ಲ್ಯೂಗಳ ದೂರವಾಣಿ (Applications) ಸಂಖ್ಯೆ ಚಿತ್ರದುರ್ಗ-9880821934, ಚಳ್ಳಕೆರೆ-9611266930, ಹಿರಿಯೂರು-9902888901, 9902898901, ಹೊಳಲ್ಕೆರೆ-9740030227, ಹೊಸದುರ್ಗ-9741829990, ಮೊಳಕಾಲ್ಮುರು-9742725576 ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08194-235284 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.
