Chitradurga News | Nammajana.com | 01-08-2025
ನಮ್ಮಜನ.ಕಾಂ,ಚಿತ್ರದುರ್ಗ: ಚಿತ್ರದುರ್ಗ(Application) ಜಿಲ್ಲಾ ಪಂಚಾಯತ್ ಗ್ರಾಮಾಂತರ ಕೈಗಾರಿಕಾ ವಿಭಾಗ ಉಪನಿರ್ದೇಶಕರ ಕಚೇರಿ ವತಿಯಿಂದ ಪ್ರಸಕ್ತ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ವಿದ್ಯುತ್ ಹೊಲಿಗೆ ಯಂತ್ರಕ್ಕಾಗಿ ಹಾಗೂ ವೃತ್ತಿಪರ ಕುಶಲಕರ್ಮಿ ಯೋಜನೆಯಡಿ ಮರಗೆಲಸ (ಬಡಗಿತನ) ಹಾಗೂ ಗಾರೆ (ಗೌಂಡಿ ಕೆಲಸ) ವೃತ್ತಿಯಲ್ಲಿ ನಿರತರಾದ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ನೂತನ ಜಿಲ್ಲಾಧಿಕಾರಿ ಕಚೇರಿ ಮೆಡಿಕಲ್ ಕಾಲೇಜಿಗೆ ಹಸ್ತಾಂತರಕ್ಕೆ ಸಿಎಂಗೆ ಮನವಿ
ಅರ್ಜಿ ಸಲ್ಲಿಕೆಯು ಆಗಸ್ಟ್ 01 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. Chitradurga.nic.in ವೆಬ್‍ಸೈಟ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಕುಶಲಕರ್ಮಿಗಳು ಅರ್ಜಿ(Application) ಸಲ್ಲಿಸುವ ಸಮಯದಲ್ಲಿ ಗ್ರಾಮ ಪಂಚಾಯಿತಿ ಕುಶಲಕರ್ಮಿ ದೃಢೀಕರಣ ಪತ್ರ, ಪೋಟೋ, ಜನ್ಮ ದಿನಾಂಕ ದಾಖಲೆ, ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ/ ಚುನಾವಣಾ ಗುರುತಿನ ಚೀಟಿ, ಅಂಗವಿಕಲ/ಮಾಜಿ ಸೈನಿಕ ಪ್ರಮಾಣ ಪತ್ರ, ತರಬೇತಿ ಪ್ರಮಾಣ ಪತ್ರವನ್ನು ಅಗತ್ಯಕ್ಕೆ ತಕ್ಕಂತೆ ಅಪ್‍ಲೋಡ್ ಮಾಡುವುದು.
ಇದನ್ನೂ ಓದಿ: ಕೃಷಿ ಪ್ರಶಸ್ತಿಗೆ ಅರ್ಜಿ
ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಥವಾ ವೆಬ್‍ಸೈಟ್ Chitradurga.nic.in ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪನಿರ್ದೇಶಕರಾದ (ಗ್ರಾಕೈ) ಎಸ್.ವೆಂಕಟೇಶ್ ತಿಳಿಸಿದ್ದಾರೆ.
