Chitradurga News | Nammajana.com | 28-08-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಚಳ್ಳಕೆರೆ(nominated members) ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಗ್ರಾಮ, ಹೋಬಳಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್, ಡಾ.ಜಗಜೀವನ ರಾಂ ಹಾಗೂ ಸೇವಲಾಲ್ ಭವನಗಳನ್ನು ನಿರ್ವಹಣೆ ಮಾಡಲು ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಯಲ್ಲಿ ಭಕ್ತರು ಕಾಣಿಕೆ ಹಾಕಿದ್ದು ಎಷ್ಟು ಲಕ್ಷ ನೋಡಿ
ಸರ್ಕಾರ ನಿಗದಿ ಪಡಿಸಿದ ಮೊತ್ತದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ 3 ಜನ ನಾಮನಿರ್ದೇಶಿತ ಸಮಿತಿ ಭವನಗಳ ನಿರ್ವಹಣೆ ಮಾಡಲಿದೆ. ಪರಿಶಿಷ್ಟ ಜಾತಿಗೆ ಸೇರಿದ ಗಣ್ಯರು ಅರ್ಜಿ ಸಲ್ಲಿಸಬಹುದು.
ಆಸಕ್ತರು ಜಾತಿ ಪ್ರಮಾಣ ಪತ್ರ,(nominated members) ಆಧಾರ್ ಪ್ರತಿ, ಗುರುತಿನ ಚೀಟಿ, ಸಂಬಂಧಪಟ್ಟ ಗ್ರಾಮದ ಪಿಡಿಓ ಅವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ, ಇತ್ತೀಚಿನ 2 ಭಾವಚಿತ್ರ, ಪರಿಶಿಷ್ಟ ಜಾತಿ ಜನಾಂಗ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಕುರಿತ ಪ್ರಸಂಶನಾ ಪತ್ರಗಳೊಂದಿಗೆ ಸೆಪ್ಟೆಂಬರ್ 3 ರ ಒಳಗೆ ಚಳ್ಳಕೆರೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
