
Chitradurga news|nammajana.com |9-7-2024
ನಮ್ಮಜನ.ಕಾಂ, ಹಿರಿಯೂರು: ವರ್ತಕರೊಬ್ಬರ ಗೋದಾಮಿನಿಂದ ಕಡಲೆ ಕಳವು ಮಾಡಿದ್ದ ಪ್ರಕರಣವನ್ನು (Arrest of chickpea thieves) ದೂರು ಕೊಟ್ಟ 24 ಗಂಟೆ ಒಳಗೆ ಭೇದಿಸಿರುವ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ * 2.40 ಲಕ್ಷ ಮೌಲ್ಯದ 60 ಚೀಲ ಕಡಲೆ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಟ್ರ್ಯಾಕ್ಟರ್ ಅನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ.
ನಗರದ ಹುಳಿಯಾರು ರಸ್ತೆಯಲ್ಲಿರುವ ವರ್ತಕ ಸಾಗರ್ ಅವರ ಗೋದಾಮಿನಿಂದ ಜುಲೈ 5ರಂದು ರಾತ್ರಿ ಕಡಲೆ ಚೀಲಗಳನ್ನು (Arrest of chickpea thieves) ಕಳುವು ಮಾಡಲಾಗಿತ್ತು. ಈ ಕುರಿತು ಸಾಗರ್ ತಂದೆ ಬಿ. ಜಯಕುಮಾರ್ ನಗರ ಠಾಣೆಗೆ ದೂರು ನೀಡಿದ್ದರು.

ನಗರ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಮತ್ತು ಸಿಬ್ಬಂದಿ ತಾಂತ್ರಿಕ ಸಾಕ್ಷಿಗಳನ್ನು ಪರಿಶೀಲಿಸುವ ಸಮಯದಲ್ಲಿ (Arrest of chickpea thieves) ಬಸವರಾಜ್ ಎಂಬ ವ್ಯಕ್ತಿಯ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಸಿ. ಮಂಜುನಾಥ್ ಅವರ ಜೊತೆಗೂಡಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ವ್ಯಾಯಮದ ಹಂತಕ್ಕೆ ದೇಹಕ್ಕೆ ಪೋಷಕಾಂಶ ಆಹಾರ | Health Tips
ಪೊಲೀಸ್ ಅಧೀಕ್ಷಕರು ಕಳ್ಳರನ್ನು ಪತ್ತೆ ಮಾಡಿರುವ ಇನ್‌ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ, ಸಿಬ್ಬಂದಿ ದೇವೇಂದ್ರಪ್ಪ, ಸಿದ್ದಲಿಂಗೇಶ್ವರ, ಸುದರ್ಶನಗೌಡ, ನಾಗಣ್ಣ, ಸುರೇಶ್ ನಾಯ್ಕ ಹಾಗೂ ಜಾಫರ್ ಸಾದಿಕ್ ಉಲ್ಲಾ ಅವರನ್ನು (Arrest of chickpea thieves) ಅಭಿನಂದಿಸಿದ್ದಾರೆ.
