Chitradurga news|nammajana.com|25-7-2024
ನಮ್ಮಜನ.ಕಾಂ, ಹಿರಿಯೂರು: ನಗರಠಾಣೆ ಪೋಲೀಸರ ಕಾರ್ಯಾಚರಣೆಯಿಂದ ಅಂತರಾಜ್ಯ ಕಳ್ಳರನ್ನು ಬಂಧಿಸಿ (Arrest of interstate thieves) 69,01,000 ಲಕ್ಷ ಮೌಲ್ಯದ 1 ಕೆಜಿ 30 ತೂಕದ ಬಂಗಾರದ ಆಭರಣಗಳು, 68,000 ನಗದು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಬೆನ್ನು ಹತ್ತಿದ ಪೋಲಿಸರು
ನಗರದ ಚಳ್ಳಕೆರೆ ರಸ್ತೆಯ ಸುಜಾತಾ ಎನ್ನುವವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ಬೆನ್ನು ಹತ್ತಿದ ಪೊಲೀಸರು, (Arrest of interstate thieves) ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎಸ್.ಚೈತ್ರಾ ರವರ ನೇತೃತ್ವದಲ್ಲಿ ನಗರಠಾಣೆ ಸಿಪಿಐ ರಾಘ ವೇಂದ್ರ, ಕಾಂಡಿಕೆ, ಹೊಸದುರ್ಗ ಠಾಣೆ ಪಿಎಸ್‌ಐ ಭೀಮನಗೌಡ ಪಾಟೀಲ ಮತ್ತು ಸಿಬ್ಬಂದಿಗಳ ತಂಡ ಬಾತ್ಮಿದಾರರ ಸಹಾಯ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಆಧರಿಸಿ ಆರೋಪಿ ಬಳ್ಳಾರಿ ಹನುಮಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹಿರಿಯೂರು ಪೋಲಿಸ್ ಠಾಣೆಯಲ್ಲಿ 8 ಪ್ರಕರಣ
ಸದರಿ ಆರೋಪಿಯು ಹಿರಿಯೂರು ನಗರ ಠಾಣೆಯ 8 ಪ್ರಕರಣ, ಗ್ರಾಮಾಂತರ ಠಾಣೆಯ 5 ಪ್ರಕರಣ, ಹೊಸದುರ್ಗ ಠಾಣೆಯ 2 ಪ್ರಕರಣ, ಅಬ್ಬಿನಹೊಳೆ ಠಾಣೆ ಯ ಪ್ರಕರಣ, ಚಿತ್ರದುರ್ಗ (Arrest of interstate thieves) ಬಡಾವಣೆ ಠಾಣೆಯ 1 ಪ್ರಕರಣ ಹಾಗೂ ಬಳ್ಳಾರಿಯ 1 ಪ್ರಕರಣ ಸೇರಿ 15 ಮನೆ ಕಳ್ಳತನ ಪ್ರಕರಣ ಮತ್ತು 3 ಮೋಟಾರ್‌ಸೈಕಲ್ ಕಳ್ಳತನದಲ್ಲಿ ಭಾಗಿಯಾಗಿರುವುದು ಪತ್ತೆಯಾಗುತ್ತದೆ.
ಭರ್ಜರಿ ಕಾರ್ಯಾಚರಣೆ
ಆರೋಪಿಯಿಂದ 69,01,000 ಲಕ್ಷರು. ಮೌಲ್ಯದಒಂದು ಕೆಜಿ 30 ಗ್ರಾಟ ಬಂಗಾರದ ಒಡವೆ, 68 ಸಾವಿರ ರು. ನಗದು 1ಲಕ್ಷದ10 ಸಾವಿರ ಮೌಲ್ಯದ 2 ಮೋಟಾರ್‌ಸೈಕಲ್ (Arrest of interstate thieves) ಒಳಗೊಂಡಂತೆ ಒಟ್ಟು 70 ಲಕ್ಷ 70 ಸಾವಿರ ಮೌಲ್ಯದ ಆಭರಣ, ನಗದು ವಶಪಡಿಸಿ ಕೊಂಡು ಆರೋಪಿಯನ್ನು ನ್ಯಾಯಾಲಯ ಬಂಧನಕ್ಕೆ ನೀಡಲಾಗಿದೆ.
ಇದನ್ನೂ ಓದಿ: Chitradurga Municipality: ನಗರಸಭೆ ವತಿಯಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಪ್ರಕರಣ ಬೇಧಿಸುವಲ್ಲಿ ಪಾತ್ರವಹಿಸಿದ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎಸ್. ಚೈತ್ರಾ ರವರ ನೇತೃತ್ವದಲ್ಲಿ ನಗರ ಠಾಣೆ ಸಿಪಿಐ ರಾಘವೇಂದ್ರ ಕಾಂಡಿಕೆ, ಹೊಸ ದುರ್ಗ ಠಾಣೆ ಪಿಎಸ್‌ಐ ಭೀಮನಗೌಡ ಪಾಟೀಲ ಹಾಗೂ (Arrest of interstate thieves) ಸಿಬ್ಬಂದಿಗಳಾದ ದೇವೇಂ ದ್ರಪ್ಪ, ರುದ್ರಮುನಿಸ್ವಾಮಿ, ಸಿದ್ದಲಿಂಗೇಶ್ವರ, ತಿಪ್ಪೇಸ್ವಾಮಿ, ರಾಜಣ್ಣ, ಜಾಫರ್‌ಸಾಧಿಕ್, ಸುರೇಶ್ ನಾಯ್ಕ, ನಾಗಣ್ಣ, ಸುದರ್ಶನ್ ಗೌಡ, ಬೆರಳಚ್ಚು ಘಟಕದ ಪಿಎಸ್‌ಐ ವಿಶ್ವ ನಾಥ್, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ರಾಘವೇಂದ್ರ ಹಾಗೂ ತಂಡವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252