Chitradurga news|nammajana.com|9-10-2024
ನಮ್ಮಜನ.ಕಾಂ, ಚಳ್ಳಕೆರೆ: ಇಂದು ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದ ಸಮೀಪ ಹೊರವಲಯದಲ್ಲಿದ್ದ ಒಂಟಿ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಮನೆಯ ಯಜಮಾನಿಗೆ ಚಾಕು ತೋರಿಸಿ ಎದುರಿಸಿ ಹಗ್ಗದ (Arrest of thieves) ಸಹಾಯದಿಂದ ಕೈಗಳನ್ನ ಕಟ್ಟಿ ಮನೆಯಲ್ಲಿದ್ದ 6,52,500 ಮತ್ತು ಹೆಣ್ಣು ಮಗಳ ಮೈ ಮೇಲಿನ ಆಭರಣಗಳನ್ನ ದೋಚಿಕೊಂಡು ಪರಾರಿಯಾಗಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಚಿತ್ರದುರ್ಗ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಬಂಡುರೂ ಹಾಗೂ ಹೆಚ್ಚುವರಿ ಪೊಲೀಸ ಅಧ್ಯಕ್ಷರಾದ ಕುಮಾರಸ್ವಾಮಿ ಚಳ್ಳಕೆರೆ ಡಿ ವೈ ಎಸ್ ಪಿ ಟಿ ಬಿ ರಾಜಣ್ಣ ಇವರ ನೇತೃತ್ವದಲ್ಲಿ ತಳಕು ಪೊಲೀಸ್ ಠಾಣೆಯ ಪಿಎಸ್ಐ ಲೋಕೇಶ್ ಹಾಗೂ ಶಿವಕುಮಾರ್ ಪೋಲಿಸ್ ಸಿಬ್ಬಂದಿಗಳು ಸಿಬ್ಬಂದಿಗಳು ಒಂಟಿ ಮನೆ ದರೋಡೆ ಮಾಡಿ ತಲೆ ತಪ್ಪಿಸಿಕೊಂಡಿದ್ದ ದರೋಡೆಕೋರರಾದ ಆಂಧ್ರ ಪ್ರದೇಶ (Arrest of thieves) ಅನಂತಪುರ ಜಿಲ್ಲೆಯ ರುದ್ರಂಪೇಟೆ ಎನ್ ಜಿ ಓ ಕಾಲೋನಿಯ ನೀಲಂ ಶ್ರೀರಾಮ್ ವಿಜಯ್, ವಿಜಯವಾಡದ ರಂಗುಲ ಪ್ರಸಾದ್. ಇಬ್ಬರನ್ನ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದು ದರೋಡೆಯಲ್ಲಿ ಮುಖಂಡತ್ವ ವಹಿಸಿದ ಪಾಲ, ವೆಂಕಟೇಶ್ ರಾವ್ ತಲೆ ತಪ್ಪಿಸಿಕೊಂಡಿದ್ದಾನೆ.
ಇಬ್ಬರನ್ನ ವಶಕ ಪಡೆದ ಪೊಲೀಸರು ಅವರಿಂದ ರಾಬರಿ ಮಾಡುವಾಗ ಬಳಸಿದ್ದ ಸಿಸಿ ಕ್ಯಾಮೆರಾ, ಮುಖದ ಕ್ಯಾಪ್, ಚಾಕುಗಳು, ಟಾರ್ಚ್ಗಳು, ಕಟರ್ ಮೊಲ ಹಿಡಿಯುವ ಬಲೆ ,ಪ್ಲಾಸ್ಟಿಕ್ ಹಾಗೂ ಮೊಬೈಲ್ ಇವುಗಳನ್ನ ವಶಕ ಪಡೆದಿದ್ದು (Arrest of thieves) ನ್ಯಾಯಾಲಯದ ಮುಂದೆ ಈ ಇಬ್ಬರನ್ನ ಹಾಜರಿಪಡಿಸಲಾಗಿದೆ.
ಇದನ್ನೂ ಓದಿ: ಒಳ ಮೀಸಲಾತಿ ಜಾರಿಗಾಗಿ ರಾಜ್ಯಾದ್ಯಂತ ಹೋರಾಟ: ಸಂಸದ ಗೋವಿಂದ ಕಾರಜೋಳ | Internal reservation
ಮೂರು ತಿಂಗಳ ಹಿಂದೆ ನಡೆದ ಒಂಟಿ ಮನೆ ದರೋಡೆಯನ್ನ ಪತ್ತೆ ಹಚ್ಚಿ ಅವರನ್ನು ವಶಕ್ಕೆ ಪಡೆದ ತಂಡವನ್ನು ಜಿಲ್ಲಾ ಎಸ್ ಪಿ ಅಭಿನಂದಿಸಿದ್ದಾರೆ.