Chitradurga news|nammajana.com|5-7-2024
ನಮ್ಮಜನ.ಕಾಂ, ಚಿತ್ರದುರ್ಗ: ಸಾರ್ವಜನಿಕ ಸ್ಥಳದಲ್ಲಿ ನಕಲಿ Ak 47 ಗನ್ (ಬಂದೂಕು) ಹಿಡಿದು ಜನರಲ್ಲಿ ಭಯ ಸೃಷ್ಟಿಸಿದ ಆರೋಪದಡಿ ರೀಲ್ಸ್ ಶೋಕಿಲಾಲನನ್ನು (Arun Kathare of Chitradurga arrested) ಕೊತ್ತನೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿ ಕಂಬಿ ಹಿಂದೆ ಹಾಕಿದ್ದಾರೆ.
ಜೆ.ಪಿ.ನಗರ ನಿವಾಸಿ ಅರುಣ್ ಕಠಾರೆ (26) ಬಂಧಿತ ಆರೋಪಿಯು ಜೂ.9ರಂದು ಮಧ್ಯಾಹ್ನ ಎಕೆ 47 ಗನ್ ಹಿಡಿದ ಬಾಡಿ ಗಾರ್ಡಗಳ ಜತೆಗೆ ಚೊಕ್ಕನಹಳ್ಳಿಯ ಭಾರತೀಯ ಸಿಟಿಯ ಲೀಲಾ ಹೋಟೆಲ್ ಬಳಿ ಬಂದಿದ್ದು, ಕೆಲವರಿಗೆ ಗನ್ ತೋರಿಸಿ (Arun Kathare of Chitradurga arrested) ಹೆದರಿಸಿ ಕಾರಿನಲ್ಲಿ ಕೂರಿಸಿಕೊಂಡು ತೆರಳಿದ್ದ. ಈ ಘಟನೆಯಿಂದ ಸಾರ್ವಜನಿಕರು ಆತಂಕಗೊಂಡು ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಂತೆಯೇ ಆರೋಪಿಯು ಗನ್ ಹಿಡಿದ ಬಾಡಿ ಗಾರ್ಡ್‌ಗಳ ಜತೆಗೆ ಕಾರಿನಲ್ಲಿ ತೆರಳುವ ಇನ್‌ಸ್ಟಾಗ್ರಾಮ್ ವಿಡಿಯೋ ತೋರಿಸಿದ್ದರು. ಈ ಮಾಹಿತಿ ಮೇರೆಗೆ ಕೊತ್ತನೂರು (Arun Kathare of Chitradurga arrested) ಠಾಣೆಪೊಲೀಸರು ಶಸ್ತ್ರಾಸ್ತ್ರಕಾಯ್ದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ತೊಂದರೆ ನೀಡಿದ ಭಯಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿ ಅರುಣ್ ಕಠಾರೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಯಾರು ಗೋಲ್ಡ್ ಸ್ವಾಮಿ, ಈ ರೀಲ್ಸ್ ಶೋಕಿಲಾಲ?(Arun Kathare of Chitradurga arrested)
ಚಿತ್ರದುರ್ಗ ಮೂಲದ ಅರುಣ್ ಕಠಾರೆ ರೀಲ್ಸ್ ಶೋಕಿಲಾಲ. ಈತ ಮೈ ತುಂಬಾ ನಕಲಿ ಚಿನ್ನಾಭರಣ ತೊಟ್ಟು, ನಕಲಿ ಗನ್ ಹಿಡಿದ ಬಾಡಿ ಗಾರ್ಡ್‌ಗಳು, ಸುಂದರ ಯುವತಿಯರು, ಐಷಾರಾಮಿ ಕಾರುಗಳು, ಬೈಕ್‌ಗಳ ಜತೆಗೆ ಐಷಾರಾಮಿ ಜೀವನ (Arun Kathare of Chitradurga arrested) ಪ್ರದರ್ಶಿಸುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುತ್ತಿದ್ದ. ಈತನಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರು ಇದ್ದಾರೆ. ಸದ್ಯ ಬೆಂಗಳೂರಿನ ಜೆ.ಪಿ.ನಗರದಲ್ಲಿ ನೆಲೆಸಿದ್ದ ಈತ ಇದೀಗ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಹುಚ್ಚಾಟವಾಡಿ ಜೈಲು ಪಾಲಾಗಿದ್ದಾನೆ.