Chitradurga news|nammajana.com|21-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಎಸ್‌ಎಸ್‌ಎಸ್ ಹಾರ್ಡ್‌ವೇರ್ ಅಂಗಡಿಯಲ್ಲಿ (Asian Paints) ಏಷ್ಯನ್ ಪೆಂಟ್ಸ್ ಕಂಪನಿಯ ಪೆಂಟ್ ಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಎಸ್‌ಜಿಎಸ್ ಐಪಿಆರ್ ಕಂಪನಿಯ ತನಿಖಾಧಿಕಾರಿ ಎ.ಎಸ್.ದಿನೇಶ್ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಎಸ್ಎಸ್ಎಸ್ ಹಾರ್ಡವೇರ್ ಅಂಗಡಿ ಮೇಲೆ ದಾಳಿ
ಕಳೆದ ಹಲವಾರು ದಶಕಗಳಿಂದ ಏಷಿಯನ್‌ಪೆಂಟ್ಸ್ ಲಿಮಿಟೆಡ್ ಕಂಪನಿ ಉತ್ತಮ ಗುಣಮಟ್ಟದ ಪೆಂಟ್ಸ್ ನ್ನು ಒದಗಿಸುತ್ತಿದೆ.(Asian Paints) ಬೆಂಗಳೂರು ರಸ್ತೆಯಲ್ಲಿರುವ ಎಸ್‌ಎಸ್‌ಎಸ್ ಹಾರ್ಡ್ ವೇರ್ ಗೆ ಭೇಟಿ ನೀಡಿದಾಗ ಸುಮಾರು ೨೦ ಲೀಟರ್ ಏಷಿಯನ್ ಪೆಂಟ್ಸ್ ೨೬೫೦ಕ್ಕೆ ಖರೀದಿಸಿದ್ದು, ಸದರಿ ಪೆಂಟನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಿದಾಗ ನಕಲಿ ಎಂದು ತಿಳಿದುಬಂದಿದೆ.

ಕೂಡಲೇ ಅಂಗಡಿ ಮಾಲೀಕ ಎ.ಎಸ್.ಸತೀಶ್ ವಿರುದ್ದ ಕಾಫಿರೈಟ್ ಆಕ್ಟ್-೧೯೫೭ರ ಪ್ರಕಾರ ದೂರು ನೀಡಿದ್ದು ಪಿಎಸ್‌ಐ ಜೆ.ಶಿವರಾಜ್ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Today Dina Bhavishya| 21-7-2024: ಇಂದಿನ ರಾಶಿ ಭವಿಷ್ಯದಲ್ಲಿ ಯಾವ ರಾಶಿಗೆ ಶುಭ, ಅಶುಭ ?
ಸದರಿ ಅಂಗಡಿಗೆ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಕಂಪನಿಯವರು ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ (Asian Paints) ಏಷಿಯನ್ ಪೇಂಟ್ಸ್ ಚಿನ್ನೆಯುಳ್ಳ ನೂರಾರು ಬಣ್ಣದ ಡಬ್ಬಿಗಳಿದ್ದು ಅವುಗಳೆಲ್ಲವನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ನೀಡಲಾಗಿದೆ. ಇದರ ಮೌಲ್ಯ ಇನ್ನೂ ಅಂದಾಜಿಸಿಲ್ಲವೆಂದು ಕಂಪನಿಯ ಮೂಲಗಳು ತಿಳಿಸಿವೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252