
Chitradurga news|nammajana.com|28-02-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನೂತನ ಉಪವಿಭಾಗಾಧಿಕಾರಿಯಾಗಿ ಮೆಹಬೂಬ್ ಜಿಲಾನ್ ಅವರು (Assistant Commissioner) ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಉಪವಿಭಾಗಾಧಿಕಾರಿಯಾಗಿದ್ದ ಕಾರ್ತಿಕ್ ಅವರ ವರ್ಗಾವಣೆ ಬಳಿಕ, ಭೂಸ್ವಾಧೀನ ಅಧಿಕಾರಿಯಾಗಿದ್ದ ವೆಂಕಟೇಶ್ ನಾಯಕ್ ಅವರು ಉಪವಿಭಾಗಾಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.

ಇದೀಗ ಮೆಹಬೂಬ್ ಜಿಲಾನ್ ಅವರನ್ನು ಚಿತ್ರದುರ್ಗ (Assistant Commissioner) ಉಪವಿಭಾಗಾಧಿಕಾರಿಯಾಗಿ ಸರ್ಕಾರ ನೇಮಿಸಿದ ಹಿನ್ನೆಲೆಯಲ್ಲಿ, ಅವರು ಶುಕ್ರವಾರ ಇಲ್ಲಿನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಇದನ್ನೂ ಓದಿ: Muruga Math | ಚಿತ್ರದುರ್ಗ ಬಸವ ಪುತ್ಥಳಿ ನಿರ್ಮಾಣ ಹಣ ದುರ್ಬಳಕೆ ಆರೋಪ, ಸರ್ಕಾರಕ್ಕೆ DC ವೆಂಕಟೇಶ್ ಪತ್ರ
ಮೆಹಬೂಬ್ ಜಿಲಾನ್ ಅವರು ಇಲ್ಲಿಗೆ ಬರುವ ಪೂರ್ವದಲ್ಲಿ ರಾಯಚೂರು ಮಹಾನಗರಪಾಲಿಕೆ ಹಿರಿಯ ಶ್ರೇಣಿ ವಲಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
