Chitradurga news|nammajana.com|4-7-2024
ನಮ್ಮಜನ.ಕಾಂ, ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ಅಕ್ರಮವಾಗಿ (Attack illegal mining) ಕಬ್ಬಿಣದ ಅದಿರು ಹೊಂದಿರುವ ಮಣ್ಣನ್ನು ಲಾರಿಗೆ ತುಂಬುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಹೊರಪೇಟೆಯ ನಿವಾಸಿ ಮಹಮ್ಮದ್ ತನ್ನೀರ್, ಮೊಳಕಾಲ್ಮುರು ತಾಲ್ಲೂಕಿನ ಬಿಜಿಕೆರೆ ಗ್ರಾಮದ (Attack illegal mining) ಸಮೀವುಲ್ಲಾ, ದಾವಣಗೆರೆ ನಗರದ ಮುಜಾಮಿಲ್ಲಾ ಬಂಧಿತರು.
ತಾಲ್ಲೂಕಿನ ಮಾಡದಕೆರೆ ಹೊರವಲಯದಲ್ಲಿ ಒಂದು ವಾರದ ಹಿಂದೆ ಈ ಮಣ್ಣು ಸಾಗಿಸಲಾಗಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯವರು (Attack illegal mining) ಕಾರ್ಯಾಚರಣೆ ನಡೆಸುತ್ತಿದ್ದು, ಬುಧವಾರ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Dina Bhavishya: ಇಂದಿನ ದಿನ ಭವಿಷ್ಯ 4-7-2024
ನಾಲ್ಕು ಲಾರಿ ಒಂದು ಜೆಸಿಬಿ ವಶ
ಅದಿರು ಕಳವು ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಹೊಸದುರ್ಗ ವಲಯ ಅರಣ್ಯ ಇಲಾಖೆ ಅಧಿಕಾರಿಗಳು (Attack illegal mining) 35 ಟನ್ ಅದಿರು, 4 ಲಾರಿ, 1 ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ಮಾಡಿದ ಅಧಿಕಾರಿಗಳ ತಂಡ
ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಸುನೀಲ್ ಕುಮಾರ್, ಡಿಆರ್‌ಎಫ್‌ಒ ಪ್ರಸನ್ನ, ಯೋಗೀಶ್, ಈಶ್ವರನಾಯ್ಕ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.