Chitradurga news|Nammajana.com|11-8-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ (Award) ತುರುವನೂರು ರಸ್ತೆಯಲ್ಲಿರುವ ಶ್ರೀ ಅಹೋಬಲ ಟಿವಿಎಸ್ ಅತಿ ಕಡಿಮೆ ಅವಧಿಯಲ್ಲಿ ಚಿತ್ರದುರ್ಗದಲ್ಲಿ ಟಿವಿಎಸ್ ಗೆ ಹೊಸ ಶಕ್ತಿ ಬರುಬ ಜೊತೆ ಅನೇಕ ಪ್ರಶ್ತಿಗಳಿಗೆ ಭಾಜನರಾಗಿತ್ತು. ಅನೇಕ ಮೈಲುಗಲ್ಲು ಸಾಧಿಸುತ್ತಿದ್ದು ಈಗ ಮತ್ತೊಂದು ಸಾಧನೆ ಮಾಡುವ ಮೂಲಕ ಇಂದು ಟಿವಿಎಸ್ ಮೋಟಾರ್ (Award) ಕಂಪನಿಯಿಂದ “ಕರ್ನಾಟಕ-2 ರಲ್ಲಿ ಅತಿ ಹೆಚ್ಚು ಮಾರುಕಟ್ಟೆ ಷೇರ್” ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಶ್ರೀ ಅಹೋಬಲ ಟಿವಿಎಸ್ ಕಂಪನಿಯ ಸಿಇಒ ಪಿ.ವಿ.ಅರುಣ್ ಕುಮಾರ್ ಸ್ವೀಕರಿಸಿದರು.
ಇದನ್ನೂ ಓದಿ: ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಗೆ ದಿನಾಂಕ ಫಿಕ್ಸ್
ಚಿತ್ರದುರ್ಗ ಜಿಲ್ಲೆಯ ಜನತೆಗೆ ‘ಅತಿ ಹೆಚ್ಚು ಮಾರುಕಟ್ಟೆ ಷೇರ್‘ ಪ್ರಶಸ್ತಿ ಅರ್ಪಣೆ (Award)
ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ಜನ.ಕಾಂ ಜೊತೆ ಮಾತನಾಡಿ ಸಿಇಒ ಪಿ.ವಿ.ಅರುಣ್ ಕುಮಾರ್ ಚಿತ್ರದುರ್ಗ ಜಿಲ್ಲೆಯ ಜನರೇ ನನ್ನ ಶಕ್ತಿಯಾಗಿದ್ದಾರೆ. ಅಹೋಬಲ ಟಿವಿಎಸ್ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಕೊಂಡಿರುವುದಕ್ಕೆ ಗ್ರಾಹಕರ ಪ್ರೀತಿ, ಅಭಿಮಾನ ನಮ್ಮ ಬ್ರಾಂಡ್ ಮೇಲೆ ಇಟ್ಟಿರುವ ವಿಶ್ವಾಸ ಕಾರಣವಾಗಿದೆ. ಈ ಸಾಧನೆಗೆ ನಮ್ಮ ಗ್ರಾಹಕರು ಹಾಗೂ ನಮ್ಮ ತಾಲೂಕು ಮತ್ತು ಹೋಬಳಿ ಮಟ್ಟದ ಪಾಲುದಾರರಿಗೆ ಮತ್ತು ನಮ್ಮ ಅಹೋಬಲ ಟಿವಿಎಸ್ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು.
