Chitradurga news |nammajana.com|21-6-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ನಡೆಯುವ ಗೃಹಾಧಾರಿತ ಮತ್ತು ಶಾಲಾಧಾರಿತ ಶಿಕ್ಷಣ ಪಡೆಯುತ್ತಿರುವ 93 ಮಕ್ಕಳು ಹಾಜರಾಗುವ ಸಂಬಂಧ ಈ ಮಕ್ಕಳ, ವಿಕಲಚೇತನ ಮಕ್ಕಳ ಸ್ವಚ್ಛತೆ ಹಾಗೂ ಸಂಪನ್ಮೂಲ ಕೇಂದ್ರದ ನಿರ್ವಹಣೆಗೆ ತಾತ್ಕಾಲಿಕವಾಗಿ ಸೇವೆ ಪಡೆಯಲು ಆಯಾ ಹುದ್ದೆ-1 ಗೆ (AYA HUDDE) ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 26 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಇದನ್ನೂ ಓದಿ: Library training: ಗ್ರಂಥಾಲಯ ವಿಜ್ಞಾನ ತರಬೇತಿಗೆ ಅರ್ಜಿ ಆಹ್ವಾನ
ಅರ್ಜಿಯನ್ನು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲೆ ಆವರಣದ ಬಿ.ಆರ್.ಸಿ. ಕಚೇರಿಗೆ (AYA HUDDE) ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ರಾಜಣ್ಣ ಅವರ ಮೊಬೈಲ್ ಸಂಖ್ಯೆ 9880608391ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಕ್ಷೇತ್ರ ಸಮನ್ವಯಾಧಿಕಾರಿ ತಿಳಿಸಿದ್ದಾರೆ.