Chitradurga News | Nammajana.com | 25-09-2025
ನಮ್ಮಜನ.ಕಾಂ,ಚಿತ್ರದುರ್ಗ: ಆಯುರ್ವೇದಿಕ್‍ನಲ್ಲಿ (Ayurvedic) ಶ್ರೇಷ್ಠವಾದ ಔಷಧಗಳಿರುವುದರಿಂದ ಈ ಪದ್ದತಿಗೆ ಮುಂದೆ ಉತ್ತಮ ಭವಿಷ್ಯವಿದೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.

ಇದನ್ನೂ ಓದಿ: ವಾಲ್ಮೀಕಿ ಜಯಂತಿಗೆ ಎಲ್ಲಾರೂ ಭಾಗವಹಿಸಿ ಯಶಸ್ವಿಗೊಳಿಸಿ: ಟಿ. ರಘುಮೂರ್ತಿ | Valmiki Jayanti
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‍ನ ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಯುಷ್ ಇಲಾಖೆ ಸಹಯೋಗದೊಂದಿಗೆ ನಡೆದ ಹತ್ತನೆ ರಾಷ್ಟ್ರೀಯ ಆಯುರ್ವೇದ ದಿನ ಉದ್ಘಾಟಿಸಿ ಮಾತನಾಡಿದರು.
ಮನೆಯ ಅಡುಗೆ ಕೋಣೆಯಲ್ಲಿರುವ ಪ್ರತಿಯೊಂದು ಪದಾರ್ಥದಲ್ಲಿಯೂ ಆಯುರ್ವೇದ ಅಂಶಗಳಿವೆ. ಕೈಗೆ ಇಲ್ಲ ಕಾಲಿಗೆ ಸ್ವಲ್ಪ ಗಾಯವಾಗಿ ರಕ್ತ ಬಂದರೆ ಮನೆಯಲ್ಲಿ ಹಿರಿಯರು ಅರಿಶಿಣ ಪುಡಿ ಹಚ್ಚುತ್ತಿದ್ದರು. ಅದರಲ್ಲಿ ಔಷಧೀಯ ಗುಣವಿದೆ. ಸಾಮಾನ್ಯ ಜೀವನದಲ್ಲಿ ಆಯುರ್ವೇದ ಬೆರೆತಿದೆ. ಪುರಾತನ ಕಾಲದಿಂದಲೂ ಈ ಪದ್ದತಿ ರೂಢಿಯಲ್ಲಿದೆ.
ಹೆಚ್ಚು ಗಿಡಮೂಲಿಕೆಗಳಿಂದ ಕೂಡಿರುವ ಆಯುರ್ವೇದ ಪದ್ದತಿಯಲ್ಲಿ ಪಂಚಕರ್ಮವಿದೆ. ಎಣ್ಣೆ ಮಸಾಜ್ ಮಾಡುವ ಮೂಲಕ ಅನೇಕ ನೋವುಗಳನ್ನು ನಿವಾರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: P. Raghu: ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗಕ್ಕೆ ಹೊಳಲ್ಕೆರೆ ಫೈರ್ ಬ್ರಾಂಡ್ ಖ್ಯಾತಿ ಪಿ.ರಘು ನೂತನ ಅಧ್ಯಕ್ಷ
ಆಯುರ್ವೇದ ಮದರ್ ಆಫ್ ಆಲ್ ಮೆಡಿಸಿನ್ಸ್. ಎಲ್ಲಾ ಕಾಯಿಲೆಗಳಿಗೂ ಇದರಲ್ಲಿ ಗುಣಾತ್ಮಕ ಚಿಕಿತ್ಸೆ ಲಭ್ಯವಿದ್ದು, ಶೀಘ್ರವೇ ಪರಿಣಾಮ ಬೀರಲಿದೆ ಎಂದು ನುಡಿದರು.
ಜಿಲ್ಲಾ ಆಯುಷ್(Ayurvedic) ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಡೀನ್ ಡಾ.ಬಿ.ಸಿ.ಅನಂತರಾಮು, ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಎಸ್.ಬಿ.ನವಾಜ್ ಅಹಮದ್, ಆದ್ಯ ಕಾಲೇಜ್ ಆಫ್ ಫಾರ್ಮಸಿಯ ಪ್ರಾಚಾರ್ಯರಾದ ಡಾ.ಆರ್.ಕೆ.ಮಹಮದ್ ಮುತಾಹರ್, ಎಸ್.ಎಲ್.ವಿ.ಕಾಲೇಜ್ ಆಫ್ ನರ್ಸಿಂಗ್ ಪ್ರಿನ್ಸಿಪಾಲ್ ಡಾ.ಎಂ.ಎಂ.ಮಹಾಂತೇಶ್, ವೈದ್ಯಾಧಿಕಾರಿಗಳಾದ ಡಾ.ಶಿವಕುಮಾರ್, ಡಾ.ರೇಷ್ಮಾ ಇವರುಗಳು ವೇದಿಕೆಯಲ್ಲಿದ್ದರು.
