Chitradurga news|nammajana.com|11-12-2024
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯದಲ್ಲಿ ಬಾಣಂತಿಯರ ಸಾವು ಹೆಚ್ಚುತ್ತಿರುವ ಹಿನ್ನೆಲೆ ಮಧ್ಯೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷದ ಆರೋಪ, ಬಾಣಂತಿ ಸಾವು (Bananti savu) ಅನುಭವಿಸಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿತ್ರದುರ್ಗ ತಾಲ್ಲೂಕಿನ ಜಾಗನೂರ ಹಟ್ಟಿ ಮೂಲದ ಬಾಣಂತಿ ರೋಜಮ್ಮ (24) ಸಾವು ಆಗಿದ್ದು (Bananti savu) ಕಳೆದ ಒಂದು ತಿಂಗಳ ಹಿಂದಷ್ಟೆ ರೋಜಮ್ಮ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿದ್ದರು.
ಇದನ್ನೂ ಓದಿ: ಚಿತ್ರದುರ್ಗ ನಗರಕ್ಕೆ ಶಾಂತಿಸಾಗರ ನೀರು ಕೊಟ್ಟ ಪುಣ್ಯಾತ್ಮ ಎಸ್.ಎಂ.ಕೃಷ್ಣ: ಜಿ.ಹೆಚ್.ತಿಪ್ಪಾರೆಡ್ಡಿ ಸ್ಮರಣೆ | SM Krishna
ರೋಜ ಹೆರಿಗೆಯಾದ 5 ದಿನಗಳ ಬಳಿಕ ಮನೆಗೆ ತೆರಳಿದ್ದ ಇಂದು ಹೊಟ್ಟೆ ನೋವು, ಉರಿ, ವಾಂತಿ ಎಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.ಆಸ್ಪತ್ರೆಗೆ ದಾಖಲಾದ ಬಾಣಂತಿಗೆ ಸಕಲ ಚಿಕಿತ್ಸೆ ನೀಡದೆಯೂ ನಿರ್ಲಕ್ಷದ ಆರೋಪ ಕೇಳಿ ಬಂದಿದ್ದು ಹೆರಿಗೆ (Bananti savu) ಮಾಡಿಸಿದ್ದ ಜಿಲ್ಲಾಸ್ಪತ್ರೆ ವೈದ್ಯೆ ಡಾ. ರೂಪಶ್ರೀ ವಿರುದ್ದ ನಿರ್ಲಕ್ಷದ ಆರೋಪ ಬಂದಿದ್ದು ಪೊಷಕರಿಂದ ಡಾ.ರೂಪಶ್ರೀ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.