
Chitradurga news|nammajana.com|10-02-2025
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಬಯಲು ನಾಟಕಗಳಲ್ಲಿ ವಿವಿಧ ಸ್ತ್ರೀ ಪಾತ್ರದಲ್ಲಿ ನಟಿಸಿ ಜನರ ಮೆಚ್ಚುಗೆಗಳಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಹಾಗೂ ಕಾಲುವೇಹಳ್ಳಿಯ ರೈತ (Bayalata Academy) ಕೆ.ಪಿ.ಭೂತಯ್ಯನವರಿಗೆ ಕರ್ನಾಟಕ ಬಯಲಾಟ ಅಕಾಡೆಮೆ ಪ್ರಶಸ್ತಿಯನ್ನು ಘೋಷಿಸಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ಸಂಜೆ 5 ಕ್ಕೆ ಬಾಲಕೋಟೆಯ ನವನಗರದ ಕಲಾಭವನದಲ್ಲಿ ನಡೆಯಲಿದೆ. ಕೆ.ಪಿ.ಭೂತಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿಯನ್ನು ಸ್ವೀಕರಿಸುವರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ, ಕರ್ನಾಟಕ ಬಯಲಾಟ ಅಕಾಡೆಮೆ ಕಳೆದ 2021-24 ಸಾಲಿನ ಪ್ರಶಸ್ತಿಯನ್ನು (Bayalata Academy) ಘೋಷಿಸಿದ್ದು ಚಳ್ಳಕೆರೆಯ ಹಿರಿಯ ರಂಗಕರ್ಮಿ ಕೆ.ಪಿ.ಭೂತಯ್ಯ ಈ ಪ್ರಶಸ್ತಿಗೆ ಭಾಜನರಾಗಿದ್ಧಾರೆ.

ಕರ್ನಾಟಕ ಬಯಲಾಟ ಅಕಾಡೆಮೆಯ ಅಧಿಕಾರಿ ಈ ಬಗ್ಗೆ ಕೆ.ಪಿ.ಭೂತಯ್ಯನವರಿಗೆ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಖುದ್ದಾಗಿ ಹಾಜರಾಗಿ ಪ್ರಶಸ್ತಿ ಪಡೆಯುವಂತೆ ಮನವಿ ಮಾಡಿದ್ಧಾರೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ , ಯಾವ ರಾಶಿಗೆ ಶುಭ ಯೋಗ?
ಕರ್ನಾಟಕ ಬಯಲಾಟ ಅಕಾಡೆಮೆ ಪ್ರಶಸ್ತಿಯನ್ನು ನೀಡಿದ್ದಕ್ಕೆ ಅಕಾಡೆಮೆ ಧನ್ಯವಾದ ಅರ್ಪಿಸಿರುವ ಕೆ.ಪಿ.ಭೂತಯ್ಯ ಬಾಗಲಕೋಟೆಗೆ ತೆರಳಿ ಪ್ರಶಸ್ತಿ ಸ್ವೀಕರಿಸುವುದಾಗಿ ತಿಳಿಸಿದರಲ್ಲದೆ, ಸರ್ಕಾರ ನಾಡಿನ ಎಲ್ಲಾಹಿರಿಯ (Bayalata Academy) ರಂಗಕರ್ಮಿಗಳಿಗೆ ಪ್ರತಿತಿಂಗಳು ಪ್ರೋತ್ಸಾಹ ಧನ ನೀಡಿ ಅವರ ಬದುಕಿಗೆ ಆಸರೆಯಾಗಬೇಕೆಂದು ಮನವಿ ಮಾಡಿದ್ಧಾರೆ.
