Chitradurga news|nammajana.com|20-7-2024
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಹೊರವಲಯದ ತಮಟಕಲ್ಲು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ (Bear death) ವಾಹನ ಡಿಕ್ಕಿಯಾಗಿ ಕರಡಿ ಸಾವು ಸಂಭವಿಸಿರುವ ಘಟನೆ ನಡೆದಿದೆ.
ಜೋಗಿಮಟ್ಟಿ ಮತ್ತು ಚಿತ್ರದುರ್ಗ ಸುತ್ತಮುತ್ತಲೂ ಬೆಟ್ಟ ಪ್ರದೇಶ ಇರುವುದರಿಂದ ರಾತ್ರಿ ವೇಳೆ ವನ್ಯ ಜೀವಿಗಳ ಓಡಾಟ ಹೆಚ್ಚು (Bear death) ಇರುತ್ತದೆ. ಹೊಸ ರಾಷ್ಟ್ರೀಯ ಹೆದ್ದಾರಿ ಆದ ನಂತರ ಚಿರತೆ, ಕರಡಿಗಳು, ಜಿಂಕೆಗಳು ನರಿಗಳು ಅನೇಕ ವನ್ಯಜೀವಿಗಳ ಮಾರಣ ಹೋಮ ಆಗುತ್ತಿದೆ.
ಇದನ್ನೂ ಓದಿ: Pregnant minor: ಖಾಸಗಿ ಆಸ್ಪತ್ರೆಗಳಲ್ಲಿಯೂ ಅಪ್ರಾಪ್ತ ಗರ್ಭಿಣಿ ಪತ್ತೆಗೆ ಸೂಚನೆ, ಚಿಕಿತ್ಸೆಗೆ SSLC ಅಂಕ ಪಟ್ಟಿ ಕಡ್ಡಾಯ
ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಗುಡ್ಡಗಾಡು ಇರುವ ಕಾರಣದಿಂದ ರಸ್ತೆ ದಾಟುವ ಸಂದರ್ಭದಲ್ಲಿ ವನ್ಯಜೀವಿಗಳು (Bear death) ವಾಹನಗಳಿಗೆ ಸಿಲುಕಿ ಪ್ರಾಣವನ್ನು ಬಿಟ್ಟಿರುವ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು.