Chitradurga News | Nammajana.com | 23-4-2024
ನಮ್ಮಜನ.ಕಾಂ.ಹೊಸದುರ್ಗ: ತಾಲೂಕಿನ ಮಾಡದಕೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮದ ಬೆಟ್ಟದ ಮೇಲೆ ನೆಲೆಸಿರುವ ಶಕ್ತಿ ದೇವತೆ ಶ್ರೀ ಬೇವಿನಹಳ್ಳಿ ಕರಿಯಮ್ಮ (ಬೇವಿನಳಮ್ಮ) ದೇವಿಯ ರಥೋತ್ಸವ ಸೋಮವಾರ ಸಂಜೆ 5 ಗಂಟೆ ಸುಮಾರಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.
ರಥೋತ್ಸವಕ್ಕೂ ಮುನ್ನ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯದಿಂದ ರಾಜ ಮರ್ಯಾದೆಗಳೊಂದಿಗೆ ವಾದ್ಯಗಳ ಮೂಲಕ ರಥದ ಬೀದಿಗೆ ಕರೆತರಲಾಯಿತು. ರಥ ಏರುವುದಕ್ಕೂ ಮುನ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಅಮ್ಮನವರ ಮದಾಲ್ಸೆ ನಡೆಯಿತು. ರಥೋತ್ಸವಕ್ಕೆ ಬಂದಿದ್ದ ಭಕ್ತರು ಶ್ರದ್ಧಾಭಕ್ತಿಯಿಂದ ರಥ ಎಳೆದು, ಹೂ, ಉತ್ತುತ್ತಿ, ನಾಣ್ಯ ಮತ್ತು ಬಾಳೆ ಹಣ್ಣುಗಳನ್ನು ತರುವ ಮೂಲಕ ಭಕ್ತಿ ಸಮರ್ಪಿಸಿದರು.
ಈ ವೇಳೆ ಸೋಮ ದೇವರುಗಳ ಕುಣಿತ ಸೇರಿದ್ದ ಭಕ್ತರ ಕಣ್ಮನ ಸೆಳೆಯಿತು.ಪ್ರತಿವರ್ಷದಂತೆ ಈ ವರ್ಷವೂ ಕೂಡ ಧ್ವಜಾರೋಹಣ, ಭೇರಿತಾಂಡನ, ಅಂಕುರಾರ್ಪಣೆ ಸೇವೆ, ಮದಲಿಂಗಿತ್ತಿ ಶಾಸ್ತ್ರ, ಚಪ್ಪರಸೇವೆ, ಉಯ್ಯಾಲೆ ಉತ್ಸವ, ಜಲದಿ ಗಂಗಸ್ನಾನ, ಮದಾಲ್ಸೆ ಉತ್ಸವ, ಹೂವಿನ ಉತ್ಸವ, ಸರಗಂಬಲಿ ಸೇವೆ, ಗದ್ದುಗೆ ಕಂಬಳಿ ಸೇವೆ, ಉಯ್ಯಾಲೆ ಉತ್ಸವ ಮತ್ತು ಇನ್ನಿತರ ಧಾರ್ಮಿಕ ಕಾರ್ಯಗಳು ನಡೆದವು.
ಇದನ್ನೂ ಓದಿ: ನಾಯಕನಹಟ್ಟಿ : ರಾಮದುರ್ಗದ ಬಳಿ ಸಿಡಿಲು ಸೋಂಕ ಇಬ್ಬರಿಗೆ ಗಾಯ
ಅದರಂತೆಯೇ, ಬೇವಿನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವವೂ ಸಂಭ್ರಮ ಸಡಗರದಿಂದ ನಡೆಯಿತು.